Siddu is Our God: ಸಿದ್ದರಾಮಯ್ಯ ಬಗ್ಗೆ ಇಂಡಿಯಾ ಟುಡೇ ವರದಿಗಾರ್ತಿ ಪ್ರಶ್ನೆ ಉತ್ತರಿಸಲು ಚಪ್ಪಲಿ ಬಿಟ್ಟು ಮಾತನಾಡಿದ ಗ್ರಾಮಸ್ಥರು

ಹೈವೋಲ್ಟೇಜ್ ಕಣವಾದ ವರುಣಾದಲ್ಲಿ ಇಂಡಿಯಾ ಟುಡೇ ವರದಿಗಾರ್ತಿಯೊಬ್ಬರು ಸಿದ್ದರಾಮಯ್ಯ ಅವರ ಬಗ್ಗೆ ಕೇಳಿದಾಗ, ಜನ ಚಪ್ಪಲಿಯನ್ನು ತೆಗೆದು ಉತ್ತರಿಸಿದ್ದು ಕಂಡು ಬಂದಿದೆ.

ರಾಷ್ಟ್ರೀಯ ಮಾಧ್ಯಮ ವರದಿಗಾರ್ತಿ ಜೊತೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಜನ ಚಪ್ಪಲಿ ತೆಗೆದು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ತಕ್ಷಣ ವರದಿಗಾರ್ತಿ ಚಪ್ಪಲಿ ಯಾಕೆ ತೆಗೆದಿರಿ ಎಂದು ಕೇಳಿದಾಗ, ವಯಸ್ಸಾದ ವ್ಯಕ್ತಿಯೊಬ್ಬರು 'ಅವರು ನಮ್ಮ ದೇವರು, ಹಾಗಾಗಿ ಉತ್ತರಿಸಲು ಪಾದರಕ್ಷೆ ತೆಗೆದಿದ್ದೇನೆ' ಎಂದು ಹೇಳಿದ್ದಾರೆ.

Villagers left their slippers and spoke to answer India Todays reporters question about Siddaramaiah

ಜನರ ನಾಡಿಮಿಡಿತ ಅಳೆಯಲು ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೇ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿರುವ ವರುಣಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ.

ವರುಣಾ ಕ್ಷೇತ್ರದಲ್ಲಿ ಈಗಾಗಲೇ ಸಿದ್ದರಾಮಯ್ಯ ಮತಭೇಟೆಯನ್ನು ಆರಂಭಿಸಿದ್ದಾರೆ. ಇಂದೂ ಕೂಡ ಸಿದ್ದರಾಮಯ್ಯ ವರುಣಾದಲ್ಲಿ ಪ್ರಚಾರ ಮಾಡಲು ಸಜ್ಜಾಗಿದ್ದಾರೆ. ಶತಾಯಗತಾಯ ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ವಿ ಸೋಮಣ್ಣ ಅವರನ್ನು ಚುನಾವಣಾ ಕಣದಲ್ಲಿ ಇಳಿಸಿದೆ.

ಮಂಗಳವಾರ ವಿ ಸೋಮಣ್ಣ ಬಿಜೆಪಿ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದರು. ಇಂದು ಮಧ್ಯಾಹ್ನ ಎರಡು ಗಂಟೆಗೆ ನಂಜನಗೂಡು ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಲಿದ್ದಾರೆ.

ಸದ್ಯ ಸ್ಥಳೀಯ ಗ್ರಾಮಸ್ಥರು ಚಪ್ಪಲಿ ಬಿಟ್ಟು ಸಿದ್ದರಾಮಯ್ಯ ಅವರಿಗೆ ಗೌರವ ತೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+