ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಹೊಸ ಸಾರಥಿ
ಮೈಸೂರು, ಮೇ 29: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಡಾ. ವಿದ್ಯಾಶಂಕರ್ ಎಸ್ ಅವರನ್ನು ರಾಜ್ಯಪಾಲರು ನೇಮಿಸಿದ್ದಾರೆ.
ವಿವಿಪುರಂನ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿರುವ ವಿದ್ಯಾಶಂಕರ್ ಮುಂದಿನ ಮೂರು ವರ್ಷದವರೆಗೆ ಕೆಎಸ್‌ಓಯು ಕುಲಪತಿಯಾಗಿರಲಿದ್ದಾರೆ.
ಹಾಲಿ ಕುಲಪತಿಯಾಗಿದ್ದ ಡಾ. ಶಿವಲಿಂಗಯ್ಯ ಸೇವಾವಧಿಯನ್ನು ವಿಸ್ತರಿಸಲಾಗಿತ್ತು. ಮಾರ್ಚ್ 10ಕ್ಕೆ ಶಿವಲಿಂಗಯ್ಯ ಅವರ ಸೇವಾವಧಿ ಮುಗಿದಿದ್ದರೂ ಚುನಾವಣೆಯ ಕಾರಣದಿಂದ ಮೇ 31ರವರೆಗೆ ವಿಸ್ತರಿಸಲಾಗಿತ್ತು.

ಶಿವಲಿಂಗಯ್ಯ ಅವಧಿಯಲ್ಲಿ ವಿವಿಗೆ ಹೊಸದಾಗಿ ಮಾನ್ಯತೆ ಸಿಕ್ಕ ಖುಷಿ ಇದ್ದರೆ ಹಿಂದಿನ ಅಕ್ರಮಗಳ ಬಗ್ಗೆ ಯಾವುದೇ ತನಿಖೆ ನಡೆಸಲಿಲ್ಲ ಎನ್ನುವ ಆರೋಪವೂ ಇತ್ತು, ಹೀಗಾಗಿ ಹೊಸ ಕುಲಪತಿಗೆ ಮುಕ್ತವಿವಿಯಲ್ಲಿ ಸಾಕಷ್ಟು ಸವಾಲು ಎದುರಿಸಿ ಮಾನ್ಯತೆಯನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ಹಿಂದಿನ ಅಕ್ರಮಗಳನ್ನು ಕೆದಕುವ ಅನಿವಾರ್ಯತೆಯೂ ಇದೆ.












Click it and Unblock the Notifications