ಡಿ.30ರಂದು ಮೈಸೂರಿಗೆ ಭೇಟಿ ನೀಡುವವರ ಗಮನಕ್ಕೆ
ಮೈಸೂರು, ಡಿಸೆಂಬರ್ 29: ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯವು ಬುಧವಾರ ನಡೆಯಲಿದೆ. ಮೈಸೂರಿನ ನಗರದ ವಾಲ್ಮೀಕಿ ರಸ್ತೆಯಲ್ಲಿನ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ಮೈಸೂರು ಸಂಚಾರಿ ಪೊಲೀಸರು ಮತ ಎಣಿಕೆ ಹಿನ್ನಲೆಯಲ್ಲಿ ಕಾಲೇಜು ಸುತ್ತಮುತ್ತ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ವಾಹನ ಸವಾರರು ಬೇರೆ ಮಾರ್ಗದಲ್ಲಿ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ.
ನಗರದ ರಸ್ತೆ ಅಗೆದರೆ ಭಾರೀ ದಂಡ ಕಟ್ಟಲು ಸಿದ್ಧರಾಗಿ
ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ದೃಷ್ಟಿಯಿಂದ ಡಿಸೆಂಬರ್ 30ರಂದು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಮತ ಎಣಿಕೆ ಕೇಂದ್ರದ ಸುತ್ತ ಸಂಚಾರಕ್ಕೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಈ ರಸ್ತೆಯಲ್ಲಿ 4 ಗಂಟೆಗೂ ಹೆಚ್ಚು ಕಾಲ ಕಾರು ನಿಲ್ಲಿಸಿದರೆ ದಂಡ!
ಮೈಸೂರು ನಗರ ಪೊಲೀಸ್ ಆಯುಕ್ತರ ಡಾ. ಚಂದ್ರಗುಪ್ತ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಬದಲಿ ಮಾರ್ಗಗಳ ವಿವರಗಳು ಇಲ್ಲಿವೆ.
ಮೈಸೂರು, ಹೈದರಾಬಾದ್ ನಡುವೆ ಇಂಡಿಗೋ ವಿಮಾನ ಸಂಚಾರ ಆರಂಭ
* ವಾಲ್ಮೀಕಿ ರಸ್ತೆಯಲ್ಲಿ ಹುಣಸೂರು ರಸ್ತೆ ಜಂಕ್ಷನ್‌ನಿಂದ ಕಾಳಿದಾಸ ರಸ್ತೆ ಜಂಕ್ಷನ್‌ವರೆಗೆ ಎಲ್ಲ ಮಾದರಿ ವಾಹನಗಳ ದ್ವಿಮುಖ ಸಂಚಾರಕ್ಕೆ ನಿರ್ಬಂಧ
* ಆದಿಪಂಪ ರಸ್ತೆಯಲ್ಲಿ ಮಾತೃಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆ ಜಂಕ್ಷನ್‌ವರೆಗೆ
* ಕಾಳಿದಾಸ ರಸ್ತೆಯಲ್ಲಿ ವಾಲ್ಮೀಕಿ ರಸ್ತೆ ಜಂಕ್ಷನ್‌ನಿಂದ ಪಶ್ಚಿಮಕ್ಕೆ (ಹಳೇ ಒಂಟಿಕೊಪ್ಪಲ್) ಮಾತೃಮಂಡಳಿ ವೃತ್ತದವರೆಗೆ ಪೂರ್ವದಿಂದ ಪಶ್ಚಿಮಕ್ಕೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿ, ಇದೇ ಭಾಗದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ವಾಹನಗಳ ನಿರ್ಬಂಧ
* ಹುಣಸೂರು ರಸ್ತೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆ ಜಂಕ್ಷನ್ (ಸಂತ ಜೋಸೆಫ್ ಕಾನ್ವೆಂಟ್ ಜಂಕ್ಷನ್)ನಿಂದ ಪೂರ್ವಕ್ಕೆ ಎ.ವೆಂಕಟರಮಣಯ್ಯ ಜಂಕ್ಷನ್ (ಪಡುವಾರಹಳ್ಳಿ ಸಿಗ್ನಲ್ ಲೈಟ್ ಜಂಕ್ಷನ್)ವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ
* ಮೈಸೂರು-ಹುಣಸೂರು ರಸ್ತೆಯಲ್ಲಿ ಎ.ವೆಂಕಟರಮಣಯ್ಯ ಜಂಕ್ಷನ್ (ಪಡುವಾರಹಳ್ಳಿ ಜಂಕ್ಷನ್)ನಿಂದ ಪೂರ್ವಕ್ಕೆ ಕಲಾಮಂದಿರ ಜಂಕ್ಷನ್‌ವರೆಗೆ ಜೋಡಿ ರಸ್ತೆಯ ಎರಡೂ ದಿಕ್ಕಿನಲ್ಲಿ ಸಂಚರಿಸುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ.
ಬದಲಿ ಮಾರ್ಗ
* ಮೈಸೂರು ಹುಣಸೂರು ರಸ್ತೆಯಲ್ಲಿ ಎ.ವೆಂಕಟರಮಣಯ್ಯ ಜಂಕ್ಷನ್ (ಪಡುವಾರಹಳ್ಳಿ ಜಂಕ್ಷನ್)ನಿಂದ ಕಲಾಮಂದಿರ ಜಂಕ್ಷನ್‌ವರೆಗೆ ಸಂಚರಿಸುವ ವಾಹನಗಳು ಎ.ವೆಂಕಟರಮಣಯ್ಯ ಜಂಕ್ಷನ್ (ಪಡುವಾರಹಳ್ಳಿ ಜಂಕ್ಷನ್)ನಲ್ಲಿ ಬಲತಿರುವು ಪಡೆದು ಬಯಲು ರಂಗಮಂದಿರ ರಸ್ತೆ- ತಿಪ್ಪೇಸ್ವಾಮಿ ವೃತ್ತ- ಎಡತಿರುವು- ಬೋಗಾದಿ ರಸ್ತೆ- ವಿಶ್ವಮಾನವ ಜೋಡಿ ರಸ್ತೆ ಜಂಕ್ಷನ್- ಡಾ.ಎಂ.ಪದ್ಮ ವೃತ್ತ (ಕುಕ್ಕರಹಳ್ಳಿ ಕೆರೆ ರೈಲ್ವೇ ಗೇಟ್ ಜಂಕ್ಷನ್)- ಎಡತಿರುವು- ಕಲಾಮಂದಿರ ಜಂಕ್ಷನ್- ಬಲತಿರುವು- ಹುಣಸೂರು ರಸ್ತೆಯಲ್ಲಿ ಸಾಗುವುದು
* ಮೈಸೂರು ಹುಣಸೂರು ರಸ್ತೆಯಲ್ಲಿ ಕಲಾಮಂದಿರ ಜಂಕ್ಷನ್‌ನಿಂದ ಎ.ವೆಂಕಟರಮಣಯ್ಯ ಜಂಕ್ಷನ್ (ಪಡುವಾರಹಳ್ಳಿ ಜಂಕ್ಷನ್)ವರೆಗೆ ಸಂಚರಿಸುವ ವಾಹನಗಳು ಕಲಾಮಂದಿರ ಜಂಕ್ಷನ್‌ನಲ್ಲಿ ಎಡತಿರುವು ಪಡೆದು- ಡಾ.ಎಂ.ಪದ್ಮ ವೃತ್ತ (ಕುಕ್ಕರಹಳ್ಳಿ ಕೆರೆ ರೈಲ್ವೇ ಗೇಟ್ ಜಂಕ್ಷನ್)- ಬಲತಿರುವು- ಬೋಗಾದಿ ರಸ್ತೆ- ತಿಪ್ಪೇಸ್ವಾಮಿ ವೃತ್ತ- ಬಲತಿರುವು-ಬಯಲುರಂಗಮಂದಿರ ರಸ್ತೆ- ಎ.ವೆಂಕಟರಮಣಯ್ಯ ಜಂಕ್ಷನ್ (ಪಡುವಾರಹಳ್ಳಿ ಜಂಕ್ಷನ್)ನಲ್ಲಿ ಎಡತಿರುವು ಪಡೆದು ಹುಣಸೂರು ರಸ್ತೆಯಲ್ಲಿ ಸಾಗುವುದು.
* ಮತ ಎಣಿಕೆ ಕೇಂದ್ರಕ್ಕೆ ಬರುವ ಪತ್ರಿಕಾ ಮಾಧ್ಯಮದವರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರುಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ಕೆಆರ್‌ಎಸ್ ರಸ್ತೆಯಿಂದ ವಾಲ್ಮೀಕಿ ರಸ್ತೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಕಾಳಿದಾಸ ರಸ್ತೆ ಜಂಕ್ಷನ್‌ನಲ್ಲಿ ಬಲತಿರುವು ಕಾಳಿದಾಸ ರಸ್ತೆ ಮೂಲಕ ನಾರಾಯಣಸ್ವಾಮಿ ಬ್ಲಾಕ್ ರಸ್ತೆಗೆ ಎಡತಿರುವು ಪಡೆದು ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮೈದಾನ ತಲುಪಿ ವಾಹನಗಳನ್ನು ನಿಲುಗಡೆ ಮಾಡಿ ಮತ ಎಣಿಕೆ ಕೇಂದ್ರಕ್ಕೆ ಸಾಗಬೇಕಾಗಿರುತ್ತದೆ.
ಕೆಎಸ್‌ಆರ್‌ಟಿಸಿ ನಗರ ಮತ್ತು ಗ್ರಾಮಾಂತರ ಬಸ್
* ಹುಣಸೂರು ರಸ್ತೆ ಕಡೆಯಿಂದ ಡಾ. ವೀರೇಂದ್ರ ಹೆಗ್ಗಡೆ ಜಂಕ್ಷನ್ (ಸಂತ ಜೋಸೆಫ್ ಕಾನ್ವೆಂಟ್ ಜಂಕ್ಷನ್)-ಎಡತಿರುವು- ಟೆಂಪಲ್ ರಸ್ತೆ- ಬಿ.ಸಿ.ಲಿಂಗಯ್ಯ ವೃತ್ತ- ಬಲತಿರುವು- ತ.ರಾ.ಸು ಜಂಕ್ಷನ್- ದಾಸಪ್ಪ ಜಂಕ್ಷನ್ ಮುಖಾಂತರ ಸಾಗುವುದು.
* ಮೈಸೂರು ನಗರ ಕಡೆಯಿಂದ ಕಲಾಮಂದಿರ ಜಂಕ್ಷನ್- ಎಡತಿರುವು- ಡಾ. ಎಂ.ಪದ್ಮ ವೃತ್ತ (ಕುಕ್ಕರಹಳ್ಳಿ ಕೆರೆ ರೈಲ್ವೆಗೇಟ್ ಜಂಕ್ಷನ್)- ಬಲತಿರುವು- ಬೋಗಾದಿ ರಸ್ತೆ- ತಿಪ್ಪೇಸ್ವಾಮಿ ಜಂಕ್ಷನ್- ಬಲತಿರುವು- ಬಯಲುರಂಗಮಂದಿರ ರಸ್ತೆ- ಎ.ವೆಂಕಟರಮಣಯ್ಯ ಜಂಕ್ಷನ್- ಎಡತಿರುವು- ಹುಣಸೂರು ರಸ್ತೆಯಲ್ಲಿ ಸಾಗುವುದು.
ವಾಹನ ನಿಲುಗಡೆ ಸ್ಥಳ
* ಪತ್ರಿಕಾ ಮಾಧ್ಯಮದವರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರುಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ವಾಹನಗಳನ್ನು ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದ ಮೈದಾನದಲ್ಲಿ ನಿಲ್ಲಿಸುವುದು
* ಸಾರ್ವಜನಿಕರ ದ್ವಿಚಕ್ರ ವಾಹನಗಳು ಮತ್ತು ಎಲ್‌ಎಂವಿ ವಾಹನಗಳನ್ನು ಕಾಳಿದಾಸ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆಯಿಂದ ವಾಲ್ಮೀಕಿ ರಸ್ತೆ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಪಾರ್ಶ್ವಗಳಲ್ಲಿ, ತರಾಸು ವೃತ್ತದಿಂದ ಪಶ್ಚಿಮಕ್ಕೆ ಕಾಳಿದಾಸ ರಸ್ತೆ ಜಂಕ್ಷನ್‌ವರೆಗೆ ಸಾಗಿರುವ ಎರಡೂ ಪಾರ್ಶ್ವಗಳಲ್ಲಿ, ಮಾನಸಗಂಗೋತ್ರಿ ಆವರಣದಲ್ಲಿರುವ ಮೈದಾನ, ಕಲಾಮಂದಿರ ಆವರಣ, ಕುಕ್ಕರಹಳ್ಳಿ ಕೆರೆಯ ಪೂರ್ವಭಾಗದಲ್ಲಿರುವ ವಾಹನ ನಿಲುಗಡೆ ಸ್ಥಳ.