ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಭಾಷಣ ಟೀಕಿಸಿದ ಕಾಂಗ್ರೆಸ್ಗೆ ಎದುರೇಟು ಕೊಟ್ಟ ಸೋಮಣ್ಣ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 03: "ಕಾಂಗ್ರೆಸ್ ನವರದ್ದು ಕಾಮಾಲೆ ಕಣ್ಣು, ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ. ಹೀಗಾಗಿ ಪ್ರಧಾನಿ ಭಾಷಣವನ್ನು ಟೀಕಿಸುತ್ತಿದ್ದಾರೆ" ಎಂದು ಮೈಸೂರಿನಲ್ಲಿ ಕಾಂಗ್ರೆಸ್ ನಾಯಕರಿಗೆ ಎದುರೇಟು ನೀಡಿದ್ದಾರೆ ಸಚಿವ ವಿ.ಸೋಮಣ್ಣ.

ನಿನ್ನೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಮೋದಿ ಅವರು ಮಾಡಿದ ಭಾಷಣದ ಬಗ್ಗೆ ಟೀಕಿಸಿದ ಕಾಂಗ್ರೆಸ್ ವಿರುದ್ಧವಾಗಿ ಹರಿಹಾಯ್ದ ವಿ ಸೋಮಣ್ಣ ಮಾತಿನಲ್ಲೇ ಎದುರೇಟು ನೀಡಿದ್ದಾರೆ. ನೆರೆ ಪರಿಹಾರದ ಕುರಿತು ಟೀಕಿಸಿದ ಕಾಂಗ್ರೆಸ್ ಗೆ ಉತ್ತರವಾಗಿ, ಇನ್ನೆರಡು ದಿನಗಳಲ್ಲಿ ಮೋದಿ ಅವರಿಂದ ರಾಜ್ಯಕ್ಕೆ ಒಳ್ಳೆ ಸುದ್ದಿ ಸಿಗಲಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನೂ ಹಣ ನೀಡದ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಲು ಆದೇಶಿಸಿದ್ದಾರೆ.

"ಇನ್ನೆರಡು ದಿನಗಳಲ್ಲಿ ಪ್ರಧಾನಿಯಿಂದ ಶುಭಸುದ್ದಿ"

"ಮಾಧ್ಯಮಗಳಲ್ಲಿ ಪ್ರಧಾನಿ ಭಾಷಣಕ್ಕೆ ಸಿಕ್ಕ ಪ್ರಚಾರ ನೋಡಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನಿಸುತ್ತದೆ. ಕಾಂಗ್ರೆಸ್ಸಿಗರು ಹಾಗೂ ಕುಮಾರ ಸ್ವಾಮಿಯವರಿಗೆ ಸುಮ್ಮನೆ ಮೈ ಪರಚಿಕೊಳ್ಳುವ ಅಭ್ಯಾಸ ಇದೆ. ಹಾಗಾಗೇ ಈ ರೀತಿಯೆಲ್ಲಾ ಮಾತನಾಡುತ್ತಿದ್ದಾರೆ" ಎಂದು ಜರಿದಿದ್ದಾರೆ ವಿ.ಸೋಮಣ್ಣ.

ಮೋದಿ ತುಮಕೂರು ರ‍್ಯಾಲಿ ಜವಾಬ್ದಾರಿಯಿಂದ ಬಿಎಸ್ವೈ ಪರಮಾಪ್ತ ದೂರ..ದೂರ..ಮೋದಿ ತುಮಕೂರು ರ‍್ಯಾಲಿ ಜವಾಬ್ದಾರಿಯಿಂದ ಬಿಎಸ್ವೈ ಪರಮಾಪ್ತ ದೂರ..ದೂರ..

"ಮೋದಿ ಬಂದಿರುವುದು ಹೆಮ್ಮೆ ವಿಚಾರ"

ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು. ಯಾವುದೋ ವಿಚಾರಕ್ಕೆ ಇನ್ನೇನನ್ನು ಸೇರಿಸಿ‌ ಮಾತನಾಡಬಾರದು. ಪ್ರಧಾನ ಮಂತ್ರಿಗಳು ಮಾತನಾಡಿದ್ದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ ಸೋಮಣ್ಣ. "ಎರಡು ಬಾರಿ ಪ್ರಧಾನ ಮಂತ್ರಿಗಳು ಆ ಪುಣ್ಯ ಕ್ಷೇತ್ರಕ್ಕೆ ಬಂದಿರುವುದು ಹೆಮ್ಮೆಯ ವಿಚಾರ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಲಿ" ಎಂದು ತಿರುಗೇಟು ನೀಡಿದ್ದಾರೆ.

 ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನೂ ಸಿಕ್ಕಿಲ್ಲ ಹಣ

ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನೂ ಸಿಕ್ಕಿಲ್ಲ ಹಣ

ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನೂ ಹಣ ದೊರಕಿಲ್ಲ. ಈ ಕುರಿತು ಅಧಿಕಾರಿಯೊಬ್ಬರಿಗೆ ವೇದಿಕೆಯಲ್ಲೇ ಬೆವರಿಳಿಸಿದರು ಮೈಸೂರು ಉಸ್ತುವಾರಿ ಸಚಿವರಾದ ವಿ ಸೋಮಣ್ಣ. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಯುವಜನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸೋಮಣ್ಣ, ಈಗಲೇ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. "ಈತನನ್ನು ಈಗಲೇ ಸಸ್ಪೆಂಡ್ ಮಾಡಿ. ಮಕ್ಕಳಿಗೆ ಕೊಡುವ ಹಣನಾದ್ರು ಕೊಡಬೇಕಲ್ವ? ಅದನ್ನು ತಿಂದು ತೇಗಿದ್ದಾನೆ. ಈ ಕ್ರೀಡೆಗಾಗಿ 7 ಕೋಟಿ ಕೊಟ್ಟಿದ್ದೇವೆ. ಮೊದಲು ಈ ಅಧಿಕಾರಿ ವರದಿ ಕೊಡಿ" ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಎಲ್ಲ ಸಿಎಂ ಕೈಯಲ್ಲಿದೆ ಎಂದ ವಸತಿ ಸಚಿವ ವಿ.ಸೋಮಣ್ಣಎಲ್ಲ ಸಿಎಂ ಕೈಯಲ್ಲಿದೆ ಎಂದ ವಸತಿ ಸಚಿವ ವಿ.ಸೋಮಣ್ಣ

"ಎಂ.ಜಿ. ರಸ್ತೆಯಲ್ಲಿ ಹೊಸ ವರ್ಷಾಚರಣೆ ನಿಲ್ಲಿಸಬೇಕು"

ಬೆಂಗಳೂರು ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆ ವಿಚಾರವಾಗಿ ಮಾತನಾಡಿದ ಅವರು, "ಮೊದಲು ಈ ರಸ್ತೆಯಲ್ಲಿ ಹೊಸ ವರ್ಷಾಚರಣೆ ರದ್ದು ಪಡಿಸುವ ಕುರಿತು ಚಿಂತನೆ ಮಾಡಬೇಕಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ನಾನು 45 ವರ್ಷದಿಂದ ಬೆಂಗಳೂರಿನಲ್ಲಿ ಇದ್ದೀನಿ. ಅಂದಿನಿಂದ ಅದೊಂದೇ ರಸ್ತೆ ಇದೆ. ಇನ್ನಾದರೂ ಆ ರಸ್ತೆಯಲ್ಲಿನ ಆಚರಣೆಯನ್ನು ನಿಲ್ಲಿಸಿ ಬೇರೆ ಕಡೆ ಆಚರಿಸಲು ಚಿಂತನೆ ಮಾಡಬೇಕಿದೆ. ಇದಕ್ಕೆ ಎಲ್ಲರ ಸಲಹೆ ಪಡೆಯುತ್ತೇವೆ" ಎಂದು ಹೇಳಿದ್ದಾರೆ.

English summary
"Congress is anger over the popularity of bjp. So they are critisizing the speach" reacted V somanna in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X