Get Updates
Get notified of breaking news, exclusive insights, and must-see stories!

ಮೈಸೂರು: ಜಲಚರಗಳ ಅವಾಸಸ್ಥಾನಕ್ಕೆ ಧಕ್ಕೆ; ಗಿರಿ ಚಂದ್ರಶೇಖರ್ ಹೇಳಿದ್ದೇನು?

ಮೈಸೂರು, ಅಕ್ಟೋಬರ್‌, 14: ಇವತ್ತು ಕೆರೆಗಳಲ್ಲಿ ಬದುಕು ಕಟ್ಟಿಕೊಂಡಿರುವ ಪಕ್ಷಿಗಳು ಸೇರಿದಂತೆ ಜಲಚರಗಳಿಗೆ ನಗರೀಕರಣದ ಹೆಸರಿನಲ್ಲಿ ನಡೆಯುತ್ತಿರುವ ವಿಪರೀತ ಅಭಿವೃದ್ಧಿ ಕಾರ್ಯಗಳೇ ಕಂಟಕವಾಗಿ ಪರಿಣಮಿಸುತ್ತಿವೆ. ಇದರಿಂದಾಗಿ ಕೆರೆಗಳಲ್ಲಿ ಹೇರಳವಾಗಿ ಕಂಡು ಬರುತ್ತಿದ್ದ ಜಲಚರಗಳು ವಿನಾಶದ ಅಂಚಿಗೆ ಸರಿಯುತ್ತಿವೆ.

ಇವತ್ತು ಮೊದಲಿನಂತೆ ಕೆರೆಗಳ ದಡಗಳ ಮರಗಳಲ್ಲಿ ಪಕ್ಷಿಗಳು ಕಾಣಿಸುತ್ತಿಲ್ಲ. ಇದೆಲ್ಲವೂ ಪ್ರಕೃತಿಯಲ್ಲಿ ಅಸಮತೋಲನಕ್ಕೆ ಕಾರಣವಾಗಿವೆ. ಇವತ್ತಿನ ಜಲಚರಗಳ ಸಂಕಷ್ಟದ ಸ್ಥಿತಿಗೆ ಕಾರಣವೇನು ಎಂಬುದರ ಬಗ್ಗೆ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ವೈಜ್ಞಾನಿಕ ಸಹಾಯಕ ಗಿರಿ ಚಂದ್ರಶೇಖರ್ ತಿಳಿಸಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗುವ ಬಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Urban Development Activities ipmact on Aquatic animals and Birds in Mysuru

ಮೈಸೂರಿನಲ್ಲಿ ನಡೆದ ವಿಶ್ವ ಆವಾಸಸ್ಥಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನಾಗಲಿ, ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ, ಜಲಚರಗಳಾಗಲಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡು ಸಮರ್ಪಕವಾಗಿ ವಾಸ ಮಾಡಲು ಯೋಗ್ಯ ಆಗಿರುವ ಪ್ರದೇಶವೇ ಆವಾಸ ಸ್ಥಾನ.

ಆ ಪ್ರದೇಶವು ಅಲ್ಲಿ ವಾಸ ಮಾಡುವವರ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿರುವುದಲ್ಲದೇ, ಅವರ ಮನದಲ್ಲಿ ಸುರಕ್ಷಿತ ಎನ್ನುವ ಭಾವನೆ ಮೂಡಿರುತ್ತದೆ. ಈ ಪ್ರಕ್ರಿಯೆಯೂ ತಲೆಮಾರುನಿಂದ ತಲೆಮಾರಿಗೆ ವರ್ಗಾವಣೆಯಾಗಿರುತ್ತದೆ. ಇಂತಹ ಸರಪಳಿಯನ್ನು ಅಭಿವೃದ್ಧಿಯ ಹೆಸರನಲ್ಲಿ ತುಂಡರಿಸುವುದರಿಂದ ಅವುಗಳ ಸಹಜ ಬದುಕಿಗೆ ಅಡ್ಡಿಪಡಿಸಿದಂತೆ ಆಗುತ್ತದೆ. ಅಲ್ಲದೇ ಆವಾಸ ಸ್ಥಾನ ಎಂಬ ಪರಿಕಲ್ಪನೆಯನ್ನು ನಿರ್ನಾಮ ಮಾಡಿದಂತೆ ಅಗುತ್ತದೆ ಎಂದು ವಿವರಿಸಿದರು.

ಮೈಸೂರಿನ ಸುಪ್ರಸಿದ್ಧ ಕುಕ್ಕರಹಳ್ಳಿ ಕೆರೆಯಲ್ಲಿ ದಶಕಗಳ ಹಿಂದೆ ಅನೇಕ ಪಕ್ಷಿಗಳು ನೂರಾರು ಗೂಡುಗಳನ್ನು ಕಟ್ಟಿಕೊಂಡು, ಮರಿಗಳನ್ನು ಬೆಳೆಸುತ್ತಿದ್ದವು. ಫೆಲಿಕಾನ್ ಪೇಂಟೆಂಡ್ ಸ್ಟಾರ್ ಮುಂತಾದ ಪಕ್ಷಿಗಳ 200ರಿಂದ 300 ಗೂಡುಗಳು ಕಾಣಸಿಗುತ್ತಿದ್ದವು. ಆದರೆ ಈಗಿನ ಪರಿಸ್ಥಿತಿಯಲ್ಲಿ 5ರಿಂದ 10 ಗೂಡು ಕಾಣುತ್ತವೆ. ಅದೂ ಜನರು ವಾಯುವಿಹಾರ ಮಾಡುವ ಆಸುಪಾಸಿನಲ್ಲೇ ಇವೆ ಹೊರತು ನೀರಿನ ಮಧ್ಯದಲ್ಲಿ ಇರುವ ಮರಗಳಲ್ಲಿ ಕಾಣುತ್ತಿಲ್ಲ. ಇದಕ್ಕೆ ಕಾರಣ ಜಲಮೂಲ ಮಾಲೀನ್ಯವಾಗಿರುವುದಾಗಿದೆ.

ಇನ್ನೂ ನಗರದ ಮತ್ತೊಂದು ಕೆರೆಯಾದ ಲಿಂಗಾಬುಧಿಯಲ್ಲಿ ನಾಗರಹೊಳೆ ಬಿಟ್ಟರೆ ಅತಿ ಹೆಚ್ಚು ಪ್ರಬೇಧಗಳು ವಾಸ ಮಾಡುತ್ತಿದ್ದವು. ಅಂದರೆ, ನಾಗರಹೊಳೆಯಲ್ಲಿ 300ಕ್ಕೂ ಅಧಿಕ ಪ್ರಬೇಧ ಕಂಡುಬಂದರೆ, ಲಿಂಗಾಬುಧಿಯಲ್ಲಿ 270ಕ್ಕೂ ಹೆಚ್ಚು ಪ್ರಬೇಧಗಳು ವಾಸ ಮಾಡುತ್ತಿದ್ದವು. ಜಲಚರ ಪ್ರಾಣಿಗಳು, ವಲಸೆ ಹಕ್ಕಿಗಳು, ಸ್ಥಳೀಯ ಹಕ್ಕಿಗಳ ಕಲರವದಿಂದ ಕೂಡಿದ್ದ ಆ ಕೆರೆಯಲ್ಲಿ ಈಗ 20ರಿಂದ 30 ಪ್ರಬೇಧಗಳನ್ನು ಮಾತ್ರ ಕಾಣಬಹುದುದಾಗಿದೆ.

ಅದೇ ರೀತಿ ಹೆಬ್ಬಾಳು ಕೆರೆಯು ಬಾತುಗಳಿಗೆ ಪ್ರಸಿದ್ಧಿಯಾಗಿತ್ತು. ಯೂರೇಷಿಯಾ ದೇಶಗಳಿಂದ ಬಾತುಗಳು ವಲಸೆ ಬರುತ್ತಿದ್ದವು. ಆದರೆ ಈಗ ಆ ಕೆರೆಯು ಐಟಿ ಕಂಪೆನಿ ಉದ್ಯೋಗಿಗಳ ವಾಕಿಂಗ್ ಪಾತ್ ಆಗಿ ಮಾರ್ಪಟ್ಟಿದೆ. ಮೇಲ್ನೋಟಕ್ಕೆ ಕೆರೆ ಅಭಿವೃದ್ಧಿಯಾಗಿದೆ ಎಂದು ಕಂಡುಬಂದರೂ ಪಕ್ಷಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಿದೆ ಎಂದರು.

ಚಾಮರಾಜನಗರದ ಬದನಗುಪ್ಪೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಪ್ರದೇಶವನ್ನು ಸ್ಥಾಪನೆ ಮಾಡಿರುವುದರಿಂದ ಅಲ್ಲಿನ ಹುಲ್ಲುಗಾವಲಿನಲ್ಲಿ ವಾಸ ಮಾಡುತ್ತಿದ್ದ ಇಂಡಿಯನ್ ಕರ್ಸರ್ ಎಂಬ ಪಕ್ಷಿಯ ಸಂತತಿ ಕ್ಷೀಣಿಸಿದೆ. ಹಾಗೇ ಸಮೀಪದ ಬೆಟ್ಟದಲ್ಲಿ ಇದ್ದ ಕೃಷ್ಣಮೃಗಗಳು ಕೂಡ ಕಡಿಮೆಯಾಗಿವೆ. ಇದಕ್ಕೆ ಕಾರಣ ಅವೈಜ್ಞಾನಿಕವಾಗಿ ಅಭಿವೃದ್ಧಿ ಕೆಲಸ ಮಾಡುವುದು ಹಾಗೂ ಜಲಮೂಲವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಎಂದರು.

ಪಕ್ಷಿಗಳ ಬಗ್ಗೆ ಜನರಿಗೆ ಅಲ್ಲದೇ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗೂ ಅರಿವು ಇಲ್ಲ. ಸಫಾರಿಗೆ ಕರೆದುಕೊಂಡು ಹೋದ ಸಮಯದಲ್ಲಿ ಹುಲಿ, ಆನೆ ಮುಂತಾದ ಪ್ರಾಣಿಗಳ ಬಗ್ಗೆ ಎಲ್ಲರಿಗೂ ಗಮನವಿರುತ್ತದೆ ಹೊರತು ಪಕ್ಷಿಗಳ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಜನರಿಗೆ ತಿಳಿಸುವ ಕೆಲಸ ಮಾಡುವುದಿಲ್ಲ. ಆದ್ದರಿಂದ ಇದರ ಕಡೆ ಸಂಬಂಧಪಟ್ಟವರು ಗಮನಹರಿಸಿದರೆ ಪ್ರಕೃತಿಯನ್ನು ಸಮತೋಲನದಲ್ಲಿ ಇಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+