ಮೈಸೂರು ಜೆಡಿಎಸ್​​​​ನಲ್ಲಿ ಮತ್ತೆ ಸ್ಫೋಟಗೊಂಡ ಭಿನ್ನಮತ!

ಮೈಸೂರು, ಜುಲೈ 10: ಮೊನ್ನೆಯಷ್ಟೇ ಜೆಡಿಎಸ್ ಮುಖಂಡ ರೇವಣ್ಣ ಅವರ ಪುತ್ರ ಪ್ರಜ್ವಲ್​​ ರೇವಣ್ಣ ಬಹಿರಂಗವಾಗಿಯೇ ಜೆಡಿಎಸ್​​ ವಿರುದ್ಧ ಅಪಸ್ವರ ಎತ್ತಿದ ಪ್ರಕರಣ ತಣ್ಣಗಾಗಿದ್ದು, ಈಗ ಮತ್ತೊಂದು ಮೈಸೂರು ಜೆಡಿಎಸ್​​​ನಲ್ಲಿ ಭಿನ್ನಮತ ಪ್ರಕರಣ ತಲೆದೂರಿದೆ.

ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ರಂಗಪ್ಪ ಇಂದು(ಜುಲೈ 10) ಅಧಿಕೃತವಾಗಿ ಜೆಡಿಎಸ್​​ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಈ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ. ಮೈಸೂರು ನಗರದ ಜೆಡಿಎಸ್​​ ಅಧ್ಯಕ್ಷ ಹರೀಶ್​​​ ಗೌಡ ರಂಗಪ್ಪ ಜೆಡಿಎಸ್​​​ ಸೇರ್ಪಡೆಯ ಬಗ್ಗೆ ಅಪಸ್ವರ ಎತ್ತಿದ್ದಾರೆ.

Unpleasure situation creates in Mysuru JDS again

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹರೀಶ್ ಗೌಡ ಅವರು ಹಲವಾರು ತಿಂಗಳುಗಳಿಂದ ಈ ಕ್ಷೇತ್ರದಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ತಮಗೆ ಈ ಕ್ಷೇತ್ರದಿಂದ ಟಿಕೆಟ್ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು.

ಆದರೆ ಇತ್ತೀಚಿಗೆ ಜೆಡಿಎಸ್​​​ನಲ್ಲಾದ ರಾಜಕೀಯ ಬೆಳವಣಿಗೆಯಿಂದ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಪ್ರೊ.ರಂಗಪ್ಪ ಅವರಿಗೆ ಚಾಮರಾಜ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಬಹುತೇಕ ಖಚಿತವಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜೆಡಿಎಸ್​​ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ಇಂದು ನಡೆಯುತ್ತಿರುವ ಪ್ರೊ.ರಂಗಪ್ಪನವರ ಪಕ್ಷಸೇರ್ಪಡೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹರೀಶ್​ ಗೌಡ ಕೇರಳದ ದೇಗುಲಗಳಿಗೆ ಬೇಟಿ ನೀಡಿದ್ದಾರೆ, ಇನ್ನು ಜೆಡಿಎಸ್​​ ನಾಯಕರು ಈ ಭಿನ್ನಮತವನ್ನ ಯಾವ ರೀತಿ ಶಮನಗೊಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+