• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ : ಭೂಗತಲೋಕದ ಹೆಸರು ತಳುಕು

|

ಮೈಸೂರು, ಆಗಸ್ಟ್ 17: ಕುಟುಂಬ ಸದಸ್ಯರ ಜೊತೆ ತಾನೂ ಆತ್ಮಹತ್ಯೆಗೆ ಶರಣಾದ ನಗರದ ಉದ್ಯಮಿ ಓಂಪ್ರಕಾಶ್ ಭಟ್ಟಾಚಾರ್ಯ ಅವರ ಕುಟುಂಬ ವಾಸವಿದ್ದ ದಟ್ಟಗಳ್ಳಿಯ ನಿವಾಸಕ್ಕೆ ಬಿಗಿಭದ್ರತೆ ಹಾಕಲಾಗಿದೆ. ಅಲ್ಲದೇ ಈ ಆತ್ಮಹತ್ಯೆಯಲ್ಲಿ ಭೂಗತಲೋಕ ಹಾಗೂ ತೆರಿಗೆ ಇಲಾಖೆಯ ಹೆಸರೂ ತಳುಕು ಹಾಕಿದೆ.

ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಸಾವಿನ ಸುತ್ತ ಅನುಮಾನಗಳ ಹುತ್ತ

ಓಂಪ್ರಕಾಶ್ ಸ್ನೇಹಿತರೊಬ್ಬರು ಇವರು ಗಣಿ ಉದ್ಯಮ ನಡೆಸುತ್ತಿದ್ದರು ಎಂಬುದನ್ನು ತಿಳಿಸಿದ್ದಾರೆ. "ಈ ಹಿಂದೆ ಓಂಪ್ರಕಾಶ್ ಅವರು ನಮ್ಮ ಮನೆ ಪಕ್ಕ ವಾಸವಿದ್ದರು. ಬಳ್ಳಾರಿಯಲ್ಲಿ ಗಣಿ ಉದ್ಯಮ ಆರಂಭಿಸಿ, ಆದಾಯ ತೆರಿಗೆ ಇಲಾಖೆಯವರ ಕಿರುಕುಳಕ್ಕೆ ಒಳಗಾಗಿದ್ದರು. ಇವರ ಬಳಿ ಗಣಿ ಉದ್ಯಮ ನಡೆಸುವ ಪರವಾನಗಿಯೂ ಇತ್ತು" ಎಂದು ತಿಳಿಸಿದರು. "ಇದರ ಜತೆಗೆ, ದುಬೈನಲ್ಲೂ ಇವರು ಕೆಲವೊಂದು ವ್ಯವಹಾರ ಹೊಂದಿದ್ದರು. ಅದಕ್ಕಾಗಿಯೇ ಭದ್ರತೆಗೆ ಗನ್ ಮ್ಯಾನ್ ಹೊಂದಿದ್ದರು" ಎಂದು ಮತ್ತೊಬ್ಬ ಸ್ನೇಹಿತರು ತಿಳಿಸಿದ್ದಾರೆ.

 ಭೂಗತಲೋಕದ ಹೆಸರು ತಳುಕು

ಭೂಗತಲೋಕದ ಹೆಸರು ತಳುಕು

ಓಂಪ್ರಕಾಶ್ ಅವರ ಕುಟುಂಬ 4 ದಿನಗಳ ಹಿಂದೆಯೇ ಮನೆ ಬಿಟ್ಟು ತೆರಳಿದ್ದರೂ, ಆ. 15ರ ಹುಣ್ಣಿಮೆಯ ರಾತ್ರಿಯವರೆಗೂ ಕಾದದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಓಂಪ್ರಕಾಶ್ ಅವರ ತಂದೆ ಜ್ಯೋತಿಷಿ. ಇವರ ಕುಟುಂಬ ಧಾರ್ಮಿಕ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರಾಗಿದ್ದರು. ಹೀಗಾಗಿ, ಹುಣ್ಣಿಮೆಯ ರಾತ್ರಿಯಂದೇ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ವಾಮಾಚಾರದ ಕಾರಣ ಇರಬಹುದೇ ಎಂಬ ದೃಷ್ಟಿಕೋನದಿಂದಲೂ ತನಿಖೆ ಸಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಭೂಗತಲೋಕದ ಹೆಸರು ಥಳಕು

ಭೂಗತಲೋಕದ ಹೆಸರು ಥಳಕು

ಓಂ ಪ್ರಕಾಶ್ ಭಟ್ಟಾಚಾರ್ಯ ಅವರು ಎರಡು ವರ್ಷದ ಹಿಂದೆ ದಟ್ಟಗಳ್ಳಿಯಲ್ಲಿ ಮನೆಯನ್ನು ಖರೀದಿಸಿದರು. ಇದೇ ಮನೆಯನ್ನು ಬೇರೆಯವರು ಖರೀದಿಸುವುದರಲ್ಲಿ ಇದ್ದರು. ಆದರೆ ಹಟಕ್ಕೆ ಬಿದ್ದ ಅವರು 1 ಕೋಟಿ ರೂ ಬೆಲೆ ಬಾಳುವ ಮನೆಗೆ 1.5 ಕೋಟಿ ರೂ ಹಣ ನೀಡಿ ಖರೀದಿಸಿದ್ದರು ಎಂಬುದು ತಿಳಿದುಬಂದಿದೆ.

ಭೂಗತಲೋಕದ ಹೆಸರು ಥಳಕು

ಭೂಗತಲೋಕದ ಹೆಸರು ಥಳಕು

ಓಂಪ್ರಕಾಶ್ ಬಳ್ಳಾರಿಯಲ್ಲಿ ಗಣಿಗಾರಿಕೆಯಲ್ಲಿ ತೊಡಗಿದ್ದರು. ಜನಾರ್ದನ ರೆಡ್ಡಿಗೆ ಐಟಿ ಅಧಿಕಾರಿಗಳು ನೀಡಿದ ಶಾಕ್ ವೇಳೆಯೇ ಓಂಪ್ರಕಾಶ್ ಗಣಿಗಾರಿಕೆಯೂ ಸಂಕಷ್ಟಕ್ಕೆ ಸಿಲುಕಿತ್ತು. ಐಟಿ ಅಧಿಕಾರಿಗಳು 700-800 ಕೋಟಿ ರೂ. ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೀಡಾಗಿ ಸ್ನೇಹಿತರಿಂದ ಸಾಲ ಪಡೆದಿದ್ದರು. ಅಲ್ಲದೆ 15 ದಿನ, ತಿಂಗಳಿಗೊಮ್ಮೆ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಇದೆ ಎಂದು ದಿಲ್ಲಿಗೆ ಹೋಗಿ ಬರುತ್ತಿದ್ದರು.

ಗಣಿ ಉದ್ಯಮ ಕೈಕೊಟ್ಟ ಬಳಿಕ ರಿಯಲ್ ಎಸ್ಟೇಟ್ ಕಡೆಗೂ ವಾಲಿದ್ದಲ್ಲದೆ ಕುವೆಂಪುನಗರದಲ್ಲಿ ಡಾಟಾ ಬೇಸ್ ಕಂಪನಿ ಆರಂಭಿಸಿ ಅದರಲ್ಲೂ ಕೈ ಸುಟ್ಟು ಕೊಂಡಿದ್ದರೆನ್ನಲಾಗಿದೆ. ಗಣಿ ಮಾಫಿಯಾದ ಬೆದರಿಕೆ ಕರೆಗಳೂ ಬರುತ್ತಿದ್ದವು ಎನ್ನಲಾಗಿದ್ದು, ಗಣಿ ಉದ್ಯಮ, ಐಟಿ ಇಲಾಖೆ ಕಿರುಕುಳದಿಂದ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿರಬಹುದು ಎಂದು ಓಂಪ್ರಕಾಶ್ ಮಾವ ಶಾಂತಾರಾಮ್ ತಿಳಿಸಿದ್ದಾರೆ.

ಭೂಗತಲೋಕದ ಹೆಸರು ಥಳಕು

ಭೂಗತಲೋಕದ ಹೆಸರು ಥಳಕು

ಪ್ರಕರಣದ ತನಿಖೆಗಾಗಿ ಡಿವೈಎಸ್ಪಿ ಜೆ.ಮೋಹನ್, ಸಬ್ ಇನ್ ಸ್ಪೆಕ್ಟರ್ ಗಳಾದ ಲತೇಶ್ ಕುಮಾರ್, ಲೋಹಿತ ಕುಮಾರ್ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಚಾಮರಾಜನಗರ ಎಸ್ಪಿ ಎಚ್.ಡಿ. ಆನಂದ ಕುಮಾರ್ ಸೂಚಿಸಿದ್ದಾರೆ.

English summary
Underworld link on Family mass suicide case at Gudlupete Talluk. 5 of a same family committed suicide by shooting themselves August 16th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X