ನಂಜನಗೂಡಿನಲ್ಲಿ ಬಾಲಕನನ್ನು ಕಿಡ್ನ್ಯಾಪ್ ಮಾಡಿ 10 ಸಾವಿರ ರೂ.ಗೆ ಬೇಡಿಕೆಯಿಟ್ಟ ಯುವಕರು

ಮೈಸೂರು, ಜನವರಿ 28: ಇಬ್ಬರು ಯುವಕರು ಬಾಲಕನೊಬ್ಬನನ್ನು ಅಪಹರಣ ಮಾಡಿ 10ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಪಟ್ಟಣದ ಸಿಟಿಜನ್ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿರುವ ಸುಹಾಸ್ ಅಪಹರಣಕ್ಕೊಳಗಾಗಿದ್ದ ಬಾಲಕ. ಸುಹಾಸ್ ಹೋಗುತ್ತಿದ್ದಾಗ ಇಬ್ಬರು ಯುವಕರು ಆತನನ್ನು ಅಡ್ಡಗಟ್ಟಿದ್ದಾರೆ. ನಂತರ ಆತನನ್ನು ಬಲವಂತದಿಂದ ಬೈಕ್ ನಲ್ಲಿ ಕೂರಿಸಿಕೊಂಡು ಹಂಡುವಿನಹಳ್ಳಿ ಬಡಾವಣೆಗೆ ಕರೆದೊಯ್ದಿದ್ದಾರೆ.

ಸುಹಾಸ್ ಗೆ ಚಾಕು ತೋರಿಸಿ ಹತ್ತು ಸಾವಿರ ತಂದುಕೊಡಬೇಕೆಂದು, ಇಲ್ಲದಿದ್ದರೆ ಶಾಲೆಗೆ ಹೋಗುವಾಗ ಅಡ್ಡ ಹಾಕಿ ಎಳೆದೊಯ್ದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸುಮಾರು 4 ತಾಸುಗಳ ಕಾಲ ಬಾಲಕನನ್ನು ಇಟ್ಟುಕೊಂಡು ನಂತರ ಬಿಟ್ಟು ಕಳುಹಿಸಿದ್ದಾರೆ. ಮನೆಗೆ ಬಂದ ಬಾಲಕ ನಡೆದ ಘಟನೆ ಕುರಿತು ಮನೆಯಲ್ಲಿ ತಿಳಿಸಿದಾಗ ಭಯಭೀತರಾದ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾರೆ.

Two young men kidnapped a boy in Mysuru

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕನಿಂದ ಆರೋಪಿಗಳ ಚಹರೆ ಬಗ್ಗೆ ಮಾಹಿತಿ ಪಡೆದು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.

ರಸ್ತೆ ಮಧ್ಯೆ ಆಟೋ ಚಾಲಕನ ಬರ್ಬರ ಹತ್ಯೆ

ಮೈಸೂರಿನ ಮಹಾರಾಜ ಗ್ರೌಂಡ್ ನ ಸಮೀಪ ಫಯರ್ ಬ್ರಿಗೆಡ್ ರಸ್ತೆಯಲ್ಲಿ ತಡರಾತ್ರಿ ಆಟೋ ಚಾಲಕನ ಬರ್ಬರ ಹತ್ಯೆಯಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಜನ ಬೆಚ್ಚಿ ಬಿದ್ದಿದ್ದಾರೆ.
ಮುನೇಶ್ವರ ನಗರದ ಆಟೋ ಚಾಲಕ ಮನು (ಜಾನಿ) ಹತ್ಯೆಗೆಡಾದ ದುರ್ದೈವಿ. ಲಾಂಗು ಮಚ್ಚುಗಳಿಂದ ಮನುಗೆ ಹಲ್ಲೆ ಮಾಡಲಾಗಿದೆ.ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದಂತೆ ಲಕ್ಷ್ಮೀಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+