ದಸರೆಗೂ ಮುನ್ನ ಪ್ರಮೋದಾದೇವಿ ಒಡೆಯರ್ ಭೇಟಿ ಮಾಡಿದ ಮೈಸೂರಿನ ಉಭಯ ಸಚಿವರು

Recommended Video

      ದಾಸರಾಗೂ ಮುನ್ನ ರಾಣಿ ಪ್ರಮೋದಾದೇವಿ ಒಡೆಯರ್ ನ್ನ ಭೇಟಿ ಮಾಡಿದ ಜಿ ಟಿ ದೇವೇಗೌಡ | Oneindia Kannada

      ಮೈಸೂರು, ಸೆಪ್ಟೆಂಬರ್. 27: ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿರುವ ವೈಭವೋಪೇತ ದಸರಾಗೆ ಪೂರ್ವಭಾವಿಯಾಗಿ ಬುಧವಾರ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿ ದಸರಾ ಕುರಿತು ಮಾತುಕತೆ ನಡೆಸಿದರು.

      ಈ ವೇಳೆ ಮಾತನಾಡಿದ ಸಚಿವ ಜಿಟಿ ದೇವೇಗೌಡ, ಇದು ಸೌಜನ್ಯದ ಭೇಟಿ. ದಸರಾ ಮಹೋತ್ಸವಕ್ಕೆ ಕಾರ್ಯಕಾರಿ ಸಮಿತಿಯ ವತಿಯಿಂದ ಮತ್ತೊಂದು ದಿನ ಬಂದು ಅಧಿಕೃತವಾಗಿ ಆಹ್ವಾನ ನೀಡುತ್ತೇವೆ ಎಂದರು.

      ಸಚಿವರಾದ ಸಾ.ರಾ. ಮಹೇಶ್ ಮಾತನಾಡಿ, ರಾಜ್ಯಕ್ಕೆ ಮೈಸೂರು ರಾಜಮನೆತನದ ಕೊಡುಗೆ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪ್ರವಾಸೋದ್ಯಮ ರಾಯಭಾರಿಯಾಗುವಂತೆ ಮನವಿ ಮಾಡಿದ್ದೆವು. ಅವರು ಒಪ್ಪಿದ್ದಕ್ಕಾಗಿ ಅಭಿನಂದನೆ ಸಲ್ಲಿಸಲಾಯಿತು.

      Two Ministers met Member of Royal family Pramoda Devi Wadiyar

      ಸೆಪ್ಟೆಂಬರ್ 27 ರಂದು ಎಲ್ಲಾ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುವುದು ಎಂದು ತಿಳಿಸಿದರು. ಉಭಯ ಸಚಿವರಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸಾಥ್ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+