ಮೈಸೂರು: ಗಣಪತಿ ವಿಸರ್ಜನೆ ವೇಳೆ ಇಬ್ಬರು ನೀರು ಪಾಲು
ಮೈಸೂರು, ಸೆಪ್ಟೆಂಬರ್ 2 : ಗಣಪತಿ ವಿಸರ್ಜನೆ ವೇಳೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ದುರಂತವೊಂದು ನಡೆದಿದ್ದು ಗಣೇಶನನ್ನು ನದಿಗೆ ಬಿಡುವ ವೇಳೆ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ವಿ.ಜಿ. ಕೊಪ್ಪಲು ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಮೃತರನ್ನು ಮಧು (22), ಮಂಜು (18) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಇರಿಸಿದ್ದ ಗಣೇಶನ ವಿಗ್ರಹವನ್ನು ವಿಸರ್ಜಿಸುವಾಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಖಿನ್ನತೆ: ಯುವತಿ ಆತ್ಮಹತ್ಯೆ
ಮಾನಸಿಕ ಖಿನ್ನತೆ ಹಿನ್ನಲೆಯಲ್ಲಿ ಯುವತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ನಿಮಿಷಾಂಬ ಬಡಾವಣೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಕುವೆಂಪುನಗರ ನಿಮಿಷಾಂಬ ಬಡಾವಣೆ ನಿವಾಸಿ ಗೌತಮಿ (23) ಎಂದು ಗುರುತಿಸಲಾಗಿದೆ. ಅನಾರೋಗ್ಯ ಸಮಸ್ಯೆ ಹಿನ್ನಲೆ, ಗೌತಮಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ












Click it and Unblock the Notifications