ಮೈಸೂರು ಜಿಲ್ಲೆಯಾದ್ಯಂತ 4 ಲಕ್ಷ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಾಟ
ಮೈಸೂರು, ಆಗಸ್ಟ್ 15: ಮನೆಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಕೇಂದ್ರ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 250 ಗ್ರಾಪಂಗಳಿವೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೆ 550 ಬಾವುಟಗಳನ್ನು ವಿತರಿಸುವ ಗುರಿಯನ್ನು ಜಿಲ್ಲಾ ಪಂಚಾಯಿತಿ ಇಟ್ಟುಕೊಂಡಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 4,45,000 ಮನೆಗಳಿದ್ದು, ಇಲ್ಲಿಯವರೆಗೆ 140, 800 ಬಾವುಟಗಳನ್ನು ವಿತರಣೆ ಮಾಡಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಬಾವುಟಗಳನ್ನು ಗ್ರಾಮ ಪಂಚಾಯಿತಿ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಂಚೆ ಇಲಾಖೆ ಮೂಲಕ ಬಿಡಿಸಿ ಜನರಿಗೆ ವಿತರಿಸಲಾಗಿದೆ.

" ನಗರಪಾಲಿಕೆ ವ್ಯಾಪ್ತಿಗೆ ಒಳಪಡುವ 65 ವಾರ್ಡ್‌ಗಳಿಗೂ ನಮ್ಮ ಸಿಬ್ಬಂದಿಗಳೇ ಹೋಗಿ ಬಾವುಟ ವಿತರಣೆ ಮಾಡಿದ್ದಾರೆ. ಕೆಲವರು ಪಾಲಿಕೆಗೆ ಬಂದು ಖರೀದಿಸಿದ್ದಾರೆ. ಒಟ್ಟು 1.5 ಲಕ್ಷ ಬಾವುಟಗಳನ್ನು ನಾಗರಿಕರಿಗೆ ವಿತರಿಸಲಾಗಿದೆ, ಹೊರಗಡೆಯಿಂದ ಖರೀದಿಸಿ ಬಾವುಟಗಳನ್ನು ವಿತರಣೆ ಮಾಡಲಾಗಿದೆ" ಎಂದು ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ," ತಿಳಿಸಿದ್ದಾರೆ.
ಸ್ಥಳೀಯವಾಗಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಬಾವುಟಗಳನ್ನು ಹೊಲಿಸಲು ಜಿಲ್ಲಾ ಪಂಚಾಯತಿನಿರ್ಧರಿಸಿತ್ತು. ಅದರಂತೆ ಜಿಲ್ಲೆಯಲ್ಲಿ 18 ಮಹಿಳಾ ಸ್ವಸಹಾಯ ಸಂಘಗಳು ಬಾವುಟವನ್ನು ತಯಾರಿಸಿ ವಿತರಣೆ ಮಾಡಿವೆ. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಪ್ರತಿಮನೆಯಲ್ಲೂ ತಿಂಗ ಹಾರಿಸುವ ಅಭಿಯಾನದ ಅಂಗವಾಗಿ ಇಡೀ ದೇಶದಲ್ಲಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಆಗಸ್ಟ್ 13ರಿಂದ ಚಾಲನೆ ಸಿಕ್ಕಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಹಿರಿಯ ಸಾಹಿತಿ ಎಸ್. ಎಲ್.ಭೈರಪ್ಪ ಅವರ ಮನೆಯ ಮೇಲೆ ತ್ರಿವರ್ಣ ಧ್ಚಜ ಹಾರಿಸಲಾಗಿದೆ.

18 ಕೇಂದ್ರದಲ್ಲಿ ತಯಾರಿ
ಮೈಸೂರಿನ ಎಲ್ಲಾ ತಾಲೂಕಿನಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಬಾವುಟ ತಯಾರಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರತಿ ತಾಲೂಕಿನಲ್ಲಿ ಎರಡು ಕೇಂದ್ರಗಳಂತೆ ಒಟ್ಟು 18 ಮಹಿಳಾ ಸ್ವಸಹಾಯ ಕೇಂದ್ರಗಳಲ್ಲಿ ಒಂದೂವರೆ ಲಕ್ಷ ಬಾವುಟಗಳನ್ನು ತಯಾರಿಸಿ ಅದನ್ನು ಎಲ್ಲಾ ಗ್ರಾಪಂ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗಿದೆ. ಜಿಲ್ಲಾಡಳಿತಕ್ಕೂ ಒಂದಷ್ಟು ಬಾವುಟಗಳನ್ನು ಜಿಪಂ ವತಿಯಿಂದ ವಿತರಣೆ ಮಾಡಲಾಗಿದೆ. ಉಳಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 50 ಸಾವಿರ ಬಾವುಟಗಳನ್ನು ವಿತರಣೆ ಮಾಡಲಾಗಿದೆ.
ಎರಡು ವಿಧದ ಬೆಲೆ
ಸ್ವಸಹಾಯ ಸಂಘಗಳ ಮಹಿಳೆಯರು ಸಿದ್ಧಪಡಿಸಿಕೊಟ್ಟಿರುವ ಪ್ರತಿ ರಾಷ್ಟ್ರಧ್ವಜಕ್ಕೆ ಎರಡು ವಿಧದ ಬೆಲೆ ನಿಗದಿಪಡಿಲಾಗಿತ್ತು 16/22 ಅಳತೆಯ ಬಾವುಟಕ್ಕೆ 32 ರೂ. ಹಾಗೂ 20/30 ಅಳತೆಯ ಬಾವುಟಕ್ಕೆ 14 ನಿಗದಿಪಡಿಸಲಾಗಿತ್ತು. ಇದಲ್ಲದೆ ನಗರಪಾಲಿಕೆಯಿಂದಲೂ ಮೈಸೂರು ನಗರದ ವಿವಿಧ ಮನೆಗಳಿಗೆ ಬಾವುಟ ವಿತರಣೆ ಮಾಡಲಾಗಿತ್ತು ಇದಕ್ಕೆ 25 ರೂ. ನಿಗದಿಪಡಿಸಲಾಗಿತ್ತು.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications