ಪ್ರಧಾನಿ ಮೋದಿ ರೋಡ್ ಶೋ: ಮೈಸೂರು ನಗರದ ಪ್ರಮುಖ ಈ ಏಳು ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್‌ 30ರಂದು ಮೈಸೂರಿಗೆ ಆಗಮಿಸಿ ರೋಡ್ ಶೋ ನಡೆಸುವ ಹಿನ್ನೆಲೆಯಲ್ಲಿ

ಅಂದು ಗಣ್ಯರು ಸಂಚರಿಸುವ ಮಾರ್ಗಗಳು ಹಾಗೂ ರೋಡ್ ಶೋ ನಡೆಸುವ ಮಾರ್ಗಗಳಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Traffic Restrictions On Seven Major Roads Of Mysuru City For PM Modi Road Show

ಸಂಚಾರ ನಿರ್ಬಂಧಿಸಿರುವ ಮಾರ್ಗಗಳು

ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್‌ವರೆಗಿನ ರಾಧಾಕೃಷ್ಣ ಮಾರ್ಗ, ಮುಡಾ ಜಂಕ್ಷನ್‌ನಿಂದ ರಾಮಸ್ವಾಮಿ ವೃತ್ತದವರೆಗಿನ ಜೆ.ಎಲ್.ಬಿ ರಸ್ತೆ, ರಾಮಸ್ವಾಮಿ ವೃತ್ತದಿಂದ ಗನ್‌ಹೌಸ್ ವೃತ್ತದವರೆಗಿನ ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತದಿಂದ ಹೈವೆ ವೃತ್ತದವರೆಗಿನ ಸಯ್ಯಾಜಿರಾವ್ ರಸ್ತೆ, ಹೈವೆ ವೃತ್ತದಿಂದ ಎಲ್‌ಐಸಿ ವೃತ್ತದವರೆಗಿನ ನೆಲ್ಸನ್ ಮಂಡೇಲಾ ರಸ್ತೆ, ಎಲ್‌ಐಸಿ ವೃತ್ತದಿಂದ ಕೆಂಪೇಗೌಡ ವೃತ್ತದವರೆಗಿನ ಹಳೆ ಮೈಸೂರು-ಬೆಂಗಳೂರು ರಸ್ತೆ. ಕೆಂಪೇಗೌಡ ವೃತ್ತದಿಂದ ಮೈಸೂರು ವಿಮಾನ ನಿಲ್ದಾಣದವರೆಗಿನ ರಿಂಗ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಬದಲಿ ಮುಖ್ಯ ರಸ್ತೆಗಳು

*ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್ವರೆಗಿನ ರಾಧಕೃಷ್ಣ ಮಾರ್ಗದಲ್ಲಿ ಸಂಚರಿಸಬೇಕಾದವರು, ರೈಲ್ವೇ ಅಂಡರ್ ಬ್ರಿಡ್ಜ್- ಡಾ. ಪದ್ಮ ವೃತ್ತ- ಅಗ್ನಿಶಾಮಕ ಠಾಣೆ ಜಂಕ್ಷನ್- ಏಕಲವ್ಯ ವೃತ್ತ- ಕೋರ್ಟ್ ಜಂಕ್ಷನ್-ಆರ್.ಟಿ.ಒ ವೃತ್ತ- ಅಗ್ರಹಾರ ವೃತ್ತ ಎಂ.ಜಿ ರಸ್ತೆ ಅಂಡರ್ ಅಡ್ - ಎಂ.ರ್ಆ.ಸಿ ವೃತ್ತ ಕಡೆಯಿಂದ ಸಾಗುವುದು. ಇದಲ್ಲದೇ ರೈಲ್ವೇ ಅಂಡರ್ ಬ್ರಿಡ್ಜ್- ಕಲಾಮಂದಿರ ಜಂಕ್ಷನ್- ಮೆಟ್ರೋಪೋಲ್ ವೃತ್ತ- ದಾಸಪ್ಪ ವೃತ್ತ ಕೆ.ಆರ್.ಎಸ್.ರಸ್ತೆ ಕಡೆಯಿಂದ ಸಂಚರಿಸಬಹುದು. ರೈಲ್ವೇ ಅಂಡರ್ ಬ್ರಿಡ್ಜ್- ಕಲಾಮಂದಿರ ಜಂಕ್ಷನ್- ಹುಣಸೂರು ರಸ್ತೆ ಕಡೆಯಿಂದ ಸಂಚರಿಸಬಹುದು.

* ಮುಡಾ ಜಂಕ್ಷನ್ನಿಂದ ರಾಮಸ್ವಾಮಿ ವೃತ್ತದವರೆಗಿನ ಜೆ.ಎಲ್.ಎ ಮಾರ್ಗದಲ್ಲಿ ಸಂಚರಿಸಬೇಕಾದವರು (ಬದಲಿ ಮಾರ್ಗ) ರೈಲ್ವೇ ಅಂಡರ್ ಬ್ರಿಡ್ಜ್ ಕಲಾಮಂದಿರ ಜಂಕ್ಷನ್- ಮೆಟ್ರೋಪೋಲ್ ವೃತ್ತ- ದಾಸಪ್ಪ ವೃತ್ತ- ಕೆ.ಆರ್.ಎಸ್.ರಸ್ತೆ ಕಡೆಯಿಂದ ಸಾಗುವುದು. ರೈಲ್ವೇ ಅಂಡರ್ ಬ್ರಿಡ್ಜ್ - ಕಲಾಮಂದಿರ ಜಂಕ್ಷನ್- ಹುಣಸೂರು ರಸ್ತೆ ಕಡೆಯಿಂದ ಸಾಗುವುದು. ರೈಲ್ವೇ ಅಂಡರ್ ಬ್ರಿಡ್ಜ್ - ಡಾ.ಪದ್ಮ ವೃತ್ತ- ಅಗ್ನಿಶಾಮಕ ಠಾಣಿ ಜಂಕ್ಷನ್- ಏಕಲವ್ಯವೃತ್ತ ಕೋರ್ಟ್ ಜಂಕ್ಷನ್- ಆರ್‌.ಟಿ.ಓ ವೃತ್ತ- ಅಗ್ರಹಾರ ವೃತ್ತ- ಎಂ.ಜಿ ರಸ್ತೆ ಅಂಡ ಅಡ್- ಎಂ.ಆರ್.ಸಿ. ವೃತ್ತ ಕಡೆಯಿಂದ ಸಾಗಬಹುದು.

*ರಾಮಸ್ವಾಮಿ ವೃತ್ತದಿಂದ ಗನ್‌ಹೌಸ್ ವೃತ್ತದವರೆಗಿನ ಚಾಮರಾಜ ಜೋಡಿ ರಸ್ತೆ ಸಂಚರಿಸಬೇಕಾದವರು (ಬದಲಿ ಮಾರ್ಗ) ಹಾರ್ಡಿಂಗ್ ವೃತ್ತ, ಕುಸ್ತಿ ಅಖಾಡ- ಎಡತಿರುವು-ಮಂಟಪ-ರಾಜಹಂಸ ಎಲೆತೋಟ ಕಡೆಯಿಂದ ಸಾಗಬಹುದು.

ಏಕಲವ್ಯ ವೃತ್ತ- ಕೋರ್ಟ್ ಜಂಕ್ಷನ್- ಆರ್.ಟಿ.ಓ ವೃತ್ತ- ಅಗ್ರಹಾರ ವೃತ್ತ- ಎಂ.ಜಿ. ರಸ್ತೆ ಅಂಡರ್ ಬ್ರಿಡ್ಜ್- ಎಂ.ಆರ್.ಸಿ ವೃತ್ತ ಕಡೆಯಿಂದ ಸಾಗುವುದು. ಏಕಲವ್ಯ ವೃತ್ತ- ಅಗ್ನಿಶಾಮಕ ಠಾಣಿ ಜಂಕ್ಷನ್- ಡಾ.ಪದ್ಯ ವೃತ್ತ- ರೈಲ್ವೇ ಅಂಡರ್ ಬ್ರಿಡ್ಜ್-ಬೋಗಾಧಿ ರಸ್ತೆ ಕಡೆಯಿಂದ ಸಾಗುವುದು. ಏಕಲವ್ಯ ವೃತ್ತ- ಅಗ್ನಿಶಾಮಕ ಠಾಣಿ ಜಂಕ್ಷನ್- ಡಾ.ಪದ್ಮ ವೃತ್ತ- ರೈಲ್ವೇ ಅಂಡರ್ ಬ್ರಿಡ್ಜ್-ಕಲಾಮಂದಿರ ಜಂಕ್ಷನ್ - ಹುಣಸೂರು ರಸ್ತೆ ಕಡೆಯಿಂದ ಸಾಗಬಹುದು

* ಬಸವೇಶ್ವರ ವೃತ್ತದಿಂದ ಹೈವೇ ವೃತ್ತದವರೆಗಿನ ಸಯ್ಯಾಜಿರಾವ್ ರಸ್ತೆ (ಬದಲಿಮಾರ್ಗ): ಹಾರ್ಡಿಂಗ್ ವೃತ್ತ- ಜೂ ರಸ್ತೆ- ಎಂಆರ್‌ಸಿ ವೃತ್ತ- ರಾಜಹಂಸ ಜಂಕ್ಷನ್- ಜೆಎಲ್ಬಿ ರಸ್ತೆಘಿ. ಏಕಲವ್ಯ ವೃತ್ತ- ಕೋರ್ಟ್ ಜಂಕ್ಷನ್- ಆರ್‌ಟಿಓ ವೃತ್ತ- ಅಗ್ರಹಾರ ವೃತ್ತ- ಎಂ.ಜಿ ರಸ್ತೆ. ಅಂಡರ್ ಬ್ರಿಡ್ಜ್- ಎಂಆರ್‌ಸಿ ವೃತ್ತ ಕಡೆಯಿಂದ ಸಾಗುವುದು ಹಾರ್ಡಿಂಗ್ ವೃತ್ತ- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ - ಪೈವ್ ಲೈಟ್ ವೃತ್ತ- ಕಾಳಕಾಂಬ ಜಂಕ್ಷನ್ ಕಡೆಯಿಂದ ಸಾಗುವುದು.

ನೆಹರು ವೃತ್ತ- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ- ಪೈವ್‌ಲೈಟ್ ವೃತ್ತ- ಕಾಳಿಕಾಂಬ ಜಂಕ್ಷನ್- ಕಡೆಯಿಂದ ಸಾಗುವುದು. ನೆಹರು ವೃತ್ತ- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ- ಹಾರ್ಡಿಂಗ್ ವೃತ್ತ- ಜೂ ರಸ್ತೆ ಎಂಆರ್‌ಸಿ ವೃತ್ತ- ರಾಜಹಂಸ ಎಲೆತೋಟ ಜಂಕ್ಷನ್- ಜೆಎಲ್ಬಿ ರಸ್ತೆ- ಆರ್‌ಟಿಒ ವೃತ್ತ- ಕೋರ್ಟ್ ಜಂಕ್ಷನ್ ಏಕಲವ್ಯ, ಅಗ್ನಿಶಾಮಕ ಠಾಣೆ ಜಂಕ್ಷನ್- ಡಾ.ಪದ್ಮ ವೃತ್ತ-ರೈಲ್ವೇ ಅಂಡರ್ ಬ್ರಿಡ್ಜ್ ಕಲಾಮಂದಿರ ಜಂಕ್ಷನ್ ಕಡೆಯಿಂದ ಸಾಗುವುದು. ಜೆ.ಕೆ ಗ್ರೌಂಡ್- ರೈಲು ನಿಲ್ದಾಣ ದಾಸಪ್ಪ ವೃತ್ತ- ಮೆಟ್ರೋಪೋಲ್ ವೃತ್ತ- ಕಲಾಮಂದಿರ- ರೈಲ್ವೇ ಅಂಡರ್ ಬ್ರಿಡ್ಜ್- ಡಾ. ಪದ್ಮ ವೃತ್ತ- ಅಗ್ನಿಶಾಮಕ ಠಾಣೆ ಜಂಕ್ಷನ್- ಏಕಲವ್ಯ ವೃತ್ತ- ಕೋರ್ಟ್ ಜಂಕ್ಷನ್- ಆರ್‌ಟಿಒ ವೃತ್ತ- ಅಗ್ರಹಾರ ವೃತ್ತ- ಎಂ.ಜಿ ರಸ್ತೆ ಅಂಡರ್ ಬ್ರಿಡ್ಜ್ - ಎಂ.ಆರ್‌ಸಿ ವೃತ್ತ ಕಡೆಯಿಂದ ಸಾಗುವುದು.

ಆಕಾಶವಾಣಿ ವೃತ್ತ- ವಾಲ್ಮೀಕಿ ರಸ್ತೆ- ಕಲಾಮಂದಿರ- ರೈಲ್ವೇ ಅಂಡರ್ ಬ್ರಿಡ್ಜ್- ಡಾ.ಪದ್ಮ ವೃತ್ತ- ಅಗ್ನಿಶಾಮಕ ಠಾಣೆ ಜಂಕ್ಷನ್- ಏಕಲವ್ಯ ವೃತ್ತ- ಕೋರ್ಟ್ ಜಂಕ್ಷನ್- ಆರ್‌ಟಿಒ ವೃತ್ತ- ಅಗ್ರಹಾರ ವೃತ್ತ- ಎಂ.ಜಿ ರಸ್ತೆ ಅಂಡ ಅದ್- ಎಂಆರ್‌ಸಿ ವೃತ್ತ ಕಡೆಯಿಂದ ಸಾಗಬೇಕು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+