ಮೈಸೂರು ವಿವಿ ಪ್ರಕರಣ: ಟಾಪರ್ ವಿದ್ಯಾರ್ಥಿಯಿಂದಲೇ ಕೃತ್ಯ!
ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ಸಂಖ್ಯೆ ಅಶ್ಲೀಲ ವೆಬ್ ಸೈಟ್ ವೊಂದಕ್ಕೆ ಅಪ್ ಲೋಡ್ ಮಾಡಿದ್ದು ವಿಶ್ವವಿದ್ಯಾಲಯದ ಟಾಪರ್ ವಿದ್ಯಾರ್ಥಿ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ.
ಮೈಸೂರು, ಏಪ್ರಿಲ್ 28: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ಸಂಖ್ಯೆ ಅಶ್ಲೀಲ ವೆಬ್ ಸೈಟ್ ವೊಂದಕ್ಕೆ ಅಪ್ ಲೋಡ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲೇ ಓದುತ್ತಿರುವ ಟಾಪರ್ ವಿದ್ಯಾರ್ಥಿಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಜಯಂತ್ ಕುಮಾರ್ ಎಂಬುವವರು, ತಾವೇ ಈ ಕೆಲಸ ಮಾಡಿದ್ದಾಗಿ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.[ಅಶ್ಲೀಲ ವೆಬ್ ಸೈಟ್ ಪ್ರಕರಣ: ಮೈಸೂರು ವಿವಿ ಪ್ರಾಧ್ಯಾಪಕರ ಕೈವಾಡ?]

ಜಯಂತ್ ಕುಮಾರ್, ಟಾಪರ್ ವಿದ್ಯಾರ್ಥಿಯಾಗಿದ್ದು, ಯಾವ ಕಾರಣಕ್ಕಾಗಿ ಈ ಕೆಲಸ ಮಾಡಿದರು ಎಂಬುದು ತನಿಖೆಯ ನಂತರ ತಿಳಿಯಲಿದೆ.
ಘಟನೆಯ ಹಿನ್ನೆಲೆ :
ಪರಿಸರ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಮೊಬೈಲ್ ಫೋನ್ ಗೆ ಅನಾಮಧೇಯ ಕರೆಗಳು ಹಾಗೂ ಅಶ್ಲೀಲ ಸಂದೇಶಗಳು ಕೆಲ ದಿನಗಳ ಹಿಂದೆ ಬರತೊಡಗಿದ್ದವು. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯರು, ಇದರ ಹಿನ್ನೆಲೆ ಬೆನ್ನಟಿದಾಗ ಅಶ್ಲೀಲ ವೆಬ್ ಸೈಟ್ ಒಂದಕ್ಕೆ ಇವರ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು ಅಪ್ಲೋಡ್ ಮಾಡಿರುವುದು ತಿಳಿಯಿತು. ಈ ವಿಷಯವನ್ನು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ತಂದಿದ್ದರು.












Click it and Unblock the Notifications