ಮದುವೆ ಗಂಡು ಯಾರೆಂಬುದು ನಾಳೆ ಗೊತ್ತಾಗಲಿದೆ:ಶಾಸಕ ಎಸ್.ಎ.ರಾಮದಾಸ್

ಮೈಸೂರು, ಮಾರ್ಚ್ 18:ನಾಳೆ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಯಾರೆಂದು ಗೊತ್ತಾಗಲಿದೆ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಗಂಡು ಯಾರು ಎಂಬುದು ನಾಳೆ ಗೊತ್ತಾಗಲಿದ್ದು, ಮದುವೆ ಗಂಡಿಗೆ ನಾಳೆ ಕಂಕಣ ಕಟ್ತೀವಿ.ಮದುವೆ ಮನೆಯ ಎಲ್ಲಾ ಗಂಡುಗಳಿಗೆ ಕಂಕಣ ಕಟ್ಟಿ, ಬಳಿಕ ಆಯಾ ಕ್ಷೇತ್ರಗಳಿಗೆ ಕರೆದುಕೊಂಡು ಬರುತ್ತೇವೆ ಎಂದರು.

ಯಾರೇ ಬಂದರೂ ಈ ಕ್ಷೇತ್ರವನ್ನು ಗೆಲ್ಲುತ್ತೇವೆ. ಹೊಸ ಗಂಡಾದ್ರು ಸರಿ, ಹಳೆ ಗಂಡಾದ್ರು ಸರಿ.ನಾವು ಕರ್ನಾಟಕದಲ್ಲಿ 28 ಕ್ಷೇತ್ರದಲ್ಲಿ ಗೆಲ್ಲಬೇಕು ಎಂದುಕೊಂಡಿದ್ದೇವೆ. ಮೋದಿ ಮುಖ ನೋಡಿ ಚುನಾವಣೆ ಕೆಲಸ ಮಾಡುತ್ತೇವೆ. ಲೋಕಸಭಾ ಚುನಾವಣೆಗೆ ಸ್ಥಳೀಯ ನಾಯಕತ್ವದ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ, ನಮಗೆ ಮೋದಿ ಅಷ್ಟೇ ಎಂದರು.

Tomorrow will be known candidate of Mysore-Kodagu constituency

ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಯೋಜನೆ ರೂಪು ರೇಷೆಯಲ್ಲಿ ಸಾಕಷ್ಟು ನ್ಯೂನ್ಯತೆಯಿದೆ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಹೃದಯಾಘಾತದಿಂದ ತೊಂದರೆ ಆಗುತ್ತದೆ. ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕೆಂಬ ಕಾನೂನು ಸರಿಯಲ್ಲ. ದೇಶದ ಯಾವುದೇ ರಾಜ್ಯದಲ್ಲಿ ಆಯುಷ್ಮಾನ್ ಯೋಜನೆಯಲ್ಲಿಲ್ಲದ ತೊಂದರೆ ರಾಜ್ಯದಲ್ಲಿ ಮಾತ್ರ ಏಕೆ ಎಂದು ರಾಮದಾಸ್ ಪ್ರಶ್ನಿಸಿದರು.

ನರೇಂದ್ರ ಮೋದಿಗೆ ಕೆಟ್ಟ ಹೆಸರು ತರಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ಆಯುಷ್ಮಾನ್ ಭಾರತದ ಆರೋಗ್ಯ ಕರ್ನಾಟಕ ಯೋಜನೆ ರೂಪುರೇಷೆಗಳನ್ನು ಸರಿಪಡಿಸಬೇಕು. ಈ ಕುರಿತು ಹೋರಾಟ ನಡೆಸುತ್ತೇವೆ. ನಾಳೆ ಕೆ.ಆರ್.ಆಸ್ಪತ್ರೆ ಬಳಿ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ರಾಮದಾಸ್ ಎಚ್ಚರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+