ಮೈಸೂರು: ಹುಲಿ ದಾಳಿಗೆ ಗ್ರಾಪಂ ಮಾಜಿ ಸದಸ್ಯ ಬಲಿ, ನರಹಂತಕನ ಪತ್ತೆಗೆ ಕೋಂಬಿಂಗ್‌ ಶುರು

ಮೈಸೂರು, ನವೆಂಬರ್‌ 08: ಮೈಸೂರು ಜಿಲ್ಲೆಯಲ್ಲಿ ಚಿರತೆ ಹಾವಳಿ ಕಡಿಮೆ ಆಗಿದ್ದು, ಹುಲಿ ದಾಳಿ ಮತ್ತೆ ಮುನ್ನಲೆಗೆ ಬಂದಿದೆ. ಸರಗೂರು ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ನಿವಾಸಿಯೊಬ್ಬರನ್ನು ಹುಲಿ‌ಕೊಂದು ಹಾಕಿದೆ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(೪೨) ಮೇಲೆ ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ.

ಬಾಲಾಜಿ ನಾಯ್ಕ ಜಮೀನಿನಲ್ಲಿ ದನ ಕಾಯುತ್ತಿದ್ದರು. ಈ ವೇಳೆ ಹುಲಿ ಏಕಾಏಕಿ ದಾಳಿ ಮಾಡಿದೆ. ಹುಲಿ ದಾಳಿಗೆ ರೈತ ಬಾಲಾಜಿ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ದೇಹವನ್ನು ಹುಲಿ ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಈ ವೇಳೆ ದನಗಳು ಚದುರಿ ಓಡಿದ್ದು, ಹುಲಿ ದಾಳಿ ಮಾಡಿದ ದೃಶ್ಯವನ್ನು ಪಕ್ಕದ ಜಮೀನಿನಲ್ಲಿ ದನಕಾಯುವ ವ್ಯಕ್ತಿ ಕಂಡು ವಿಷಯವನ್ನು ಗ್ರಾಮಸ್ಥರಿಗೆ ಮುಟ್ಟಿಸಿದ್ದಾರೆ.

Tiger Attack: Former Grama Panchayat Members Killed By Tiger In Mysuru

ನಂತರ ಗ್ರಾಮಸ್ಥರು ಬಂದು ನೋಡಿದಾಗ ಬಾಲಾಜಿ ನಾಯ್ಕ ಅವರ ಎಡ ಕಾಲು, ದೇಹದ ಕೆಲ ಭಾಗಗಳು, ತಲೆಯನ್ನು ಹುಲಿ ಕಿತ್ತು ತಿಂದಿದೆ ಎನ್ನಲಾಗಿದೆ. ಮೃತ ಬಾಲಾಜಿ ನಾಯ್ಕಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಮನೆಯ ಆಧಾರ ಸ್ತಂಭವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ

ರೈತನ ಮೇಲೆ ಹುಲಿ ದಾಳಿ ನಡೆಸಿರುವ ಸ್ಥಳದಿಂದ ಮೊಳೆಯೂರು ವಲಯ ಅರಣ್ಯದ ಕಚೇರಿ ಸಮೀಪದಲ್ಲೇ ಇದ್ದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ವಿವಿಧ ಘೋಷಣೆ ಕೂಗಿದರು. ಇದಲ್ಲದೆ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಎಚ್ಚರಿಕೆ ನೀಡಿದರು.

15 ಲಕ್ಷ ರೂಪಾಯಿ ಪರಿಹಾರ ವಿತರಣೆ

ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರು ಮೃತರ ಕುಟುಂಬದೊಂದಿಗೆ ನಿಂತು ಸಾಂತ್ವನ ಹೇಳಿ 15 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಬಳಿಕ ಮಂಗಳವಾರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Tiger Attack: Former Grama Panchayat Members Killed By Tiger In Mysuru

ಹುಲಿ ಸೆರೆಗೆ ಕೋಂಬಿಂಗ್‌ ಆರಂಭ

ಸದ್ಯ ಬಾಲಾಜಿ ನಾಯ್ಕ ಅವರನ್ನು ಕೊಂದು ತಿಂದ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 50 ಕ್ಯಾಮೆರಾಗಳನ್ನು ಇರಿಸಿ ಹುಲಿಯ ಚಲನವಲನದ ಮೇಲೆ ನಿಗಾವಹಿಸಿದೆ. ಅಲ್ಲದೆ ರಾಂಪುರ ಆನೆ ಶಿಬಿರದಿಂದ ಈರಣ್ಯ ಮತ್ತು ರೋಹಿತ ಎಂಬ ಎರಡು ಸಾಕಾನೆಗಳು ಕರೆತರಲಾಗುತ್ತಿದ್ದು, ಕೋಂಬಿಂಗ್‌ ಆರಂಭಿಸುವ ಜೊತೆಗೆ 2-3 ಬೋನುಗಳನ್ನು ಇರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಸ್ಥಳದಲ್ಲಿ ಬಂಡೀಪುರ ಸಿಎಫ್ ರಮೇಶ್ ಕುಮಾರ್, ಎಸಿಎಫ್‌ಗಳಾದ ಪರಮೇಶ್, ಆರ್‌ಎಫ್‌ಒ ಅಮೃತಾ, ಎಸ್‌ಟಿಪಿಎಫ್ ಸಿಬ್ಬಂದಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂತಾದವರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+