• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಂಬೂ ಸವಾರಿ ಟಿಕೆಟ್ ಸೋಲ್ಡ್ ಔಟ್

|

ಮೈಸೂರು, ಅ.10 : ದಸರಾ ಜಂಬೂ ಸವಾರಿ ಮತ್ತು ಪಂಜಿನ ಕವಾಯಿತಿನ ಟಿಕೆಟ್ ಗಳು ಲಭ್ಯವಿಲ್ಲ. ಟಿಕೆಟ್ ಮಾರಾಟ ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಇದರಿಂದ ಬಹಳಷ್ಟು ಪ್ರವಾಸಿಗರಿಗೆ ನಿರಾಸೆಯಾಗಿದೆ.

ಅ.14ರಂದು ನಡೆಯುವ ಜಂಬೂ ಸವಾರಿ ವೀಕ್ಷಿಸಲು ಜಿಲ್ಲಾಡಳಿತ 1000 ಮತ್ತು 500 ಮುಖಬೆಲೆಯ 2,800 ಟಿಕೆಟ್ ಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿತ್ತು. ಬುಧವಾರ ಟಿಕೆಟ್ ಮಾರಾಟ ಪ್ರಾರಂಭವಾಯಿತು ಅಂದು ಸಂಜೆಯೊಳಗೆ ಟಿಕೆಟ್ ಗಳು ಖಾಲಿಯಾಗಿವೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಟಿಕೆಟ್ ಗಳಿ ಪ್ರವಾಸಿಗರು ಕೈಗೆ ತಲುಪಿವೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ಅಧಿಕಾರಿಗಳು ಟಿಕೆಟ್ ಪಡೆಯವಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುಮಾರು 200 ಟಿಕೆಟ್ ಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡಲಾಗಿದೆ. ಪಂಜಿನ ಕವಾಯಿತು ವೀಕ್ಷಿಸಲು 7000 ಟಿಕೆಟ್ ಗಳನ್ನು ಮುದ್ರಿಸಲಾಗಿತ್ತು ಅವುಗಳ ಮುಖಬೆಲೆ 200ರೂ. ಆಗಿತ್ತು. ಅವುಗಳ ಕೂಡಾ ಸೋಲ್ಡ್ ಔಟ್ ಆಗಿದೆ.

ಜಂಬೂ ಸವಾರಿ ನೋಡಲು ಭಾನುವಾರ ಮತ್ತು ಸೋಮವಾರ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಟಿಕೆಟ್ ಲಭ್ಯವಿಲ್ಲ. ಆದ್ದರಿಂದ ಜಂಬೂ ಸವಾರಿ ತೆರಳುವ ಮಾರ್ಗದಲ್ಲಿ ನಿಂತು ದಸರಾ ಸಂಭ್ರಮ ಕಣ್ತುಂಬಿಕೊಳ್ಳಬಹುದು.

ಪ್ರತಿವರ್ಷ ಜಂಬೂ ಸವಾರಿಗೆ ಎರಡು ದಿನಗಳಿರುವಾಗ ಜಂಬೂ ಸವಾರಿ ಮತ್ತು ಪಂಜಿನ ಕವಾಯಿತಿನ ಟಿಕೆಟ್ ಗಳನ್ನು ಮಾರಾಟಕ್ಕೆ ಇಡಲಾಗುತ್ತಿತ್ತು. ಈ ಬಾರಿ ಮುಂಚಿತವಾಗಿ ಟಿಕೆಟ್ ಮಾರಾಟ ಮಾಡಲಾಗಿದೆ.

ಪ್ರತಿವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತ್ರ ಟಿಕೆಟ್ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮೈಸೂರು ಮಹಾನಗರ ಪಾಲಿಕೆ ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಟಿಕೆಟ್ ಮಾರಾಟ ಮಾಡಲಾಗಿದೆ. ಸಾರ್ವಜನಿಕರಿಗೆ ಈ ಕುರಿತು ಸರಿಯಾದ ಮಾಹಿತಿ ನೀಡಿಲ್ಲ ಎಂಬ ಆರೋಪವು ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tickets for the Dasara procession and torchlight parade on October 14 were sold out within hours of being made available. Up for grabs were 2,800 tickets for the Dasara procession in Rs 1,000 and Rs 500 denominations. The sale started on Wednesday and by Thursday evening, all the tickets were sold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more