ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗರಹೊಳೆಯಲ್ಲಿ ಕಾಣೆಯಾಗಿದ್ದ ಮೂರು ಹುಲಿ ಮರಿಗಳು ಪತ್ತೆ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್‌, 16: ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟ ಹುಲಿಯ ಮೂರು ಮರಿಗಳ ದೃಶ್ಯ ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ಸೆರೆಯಾಗಿವೆ. ಕಾಣೆಯಾಗಿದ್ದ ಹುಲಿ ಮರಿಗಳು ಪತ್ತೆಯಾದ ತಕ್ಷಣ ವನ್ಯಜೀವಿ ಆಸಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಜಮೀನಿನಲ್ಲಿ ಅಳವಡಿಸಿದ್ದ ಉರುಳಿಗೆ 12 ವರ್ಷದ ಹೆಣ್ಣು ಹುಲಿ ಮೃತಪಟ್ಟಿತ್ತು. ಅಲ್ಲದೆ, ಹೆಣ್ಣು ಹುಲಿಗೆ ಮೂರು ಮರಿಗಳಿರುವುದು ಗೊತ್ತಾಗಿತ್ತು. ಪುಟ್ಟ ಮರಿಗಳಾದ ಕಾರಣ ಇವುಗಳು ಹಸಿವಿನಿಂದ ಸಾಯಬಹುದು ಅಥವಾ ಜಾನುವಾರುವಾರು, ಜನರು ಬೇಟೆ ಆಡಬಹುದು ಎಂಬ ಆತಂಕವೂ ಎದುರಾಗಿತ್ತು. ಆಗ ಮತ್ತಿಗೂಡು ಆನೆ ಶಿಬಿರದ ಭೀಮ ಮತ್ತು ಅಭಿಮನ್ಯು ಸೇರಿದಂತೆ 4 ಸಾಕಾನೆಗಳೊಂದಿಗೆ ಭಾನುವಾರ ಬೆಳಗ್ಗಿನಿಂದ ಅರಣ್ಯ ಸಿಬ್ಬಂದಿ ಕೂಂಬಿಂಗ್ ಪ್ರಾರಂಭಿಸಿದ್ದರು. ಹುಲಿ ಹೆಜ್ಜೆಗುರುತು ಪತ್ತೆಯಾದ ಮೂರು ಕಡೆ ಬೋನ್ ಇರಿಸಲಾಗಿತ್ತು. ಅಲ್ಲದೇ, ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು.

ನಾಗರಹೊಳೆಯಲ್ಲಿ ಮೂರು ಹುಲಿ ಮರಿಗಳಿಗಾಗಿ ಅರಣ್ಯ ಇಲಾಖೆಯಿಂದ ಹುಡುಕಾಟನಾಗರಹೊಳೆಯಲ್ಲಿ ಮೂರು ಹುಲಿ ಮರಿಗಳಿಗಾಗಿ ಅರಣ್ಯ ಇಲಾಖೆಯಿಂದ ಹುಡುಕಾಟ

Three missing tiger cubs found in Nagarahole, video captured on CC camera

ಕಾಣೆಯಾಗಿದ್ದ ಮೂರು ಹುಲಿ ಮರಿಗಳು ಪತ್ತೆ

ವಲಯದ ಅರಣ್ಯ ಅಂಚಿನಿಂದ ಸುಮಾರು 1 ಕಿಲೋ ಮೀಟರ್‌ ಕಾಡಿನ ಒಳಗೆ ಅಳವಡಿಸಿದ್ದ ಟ್ರ್ಯಾಪಿಂಗ್ ಕ್ಯಾಮೆರಾದಲ್ಲಿ ನವೆಂಬರ್‌ 16ರ ಬೆಳಗ್ಗೆ ಮೂರು ಮರಿಗಳು ಜಿಂಕೆ ತಿನ್ನುವ, ಆಟವಾಡುವ ದೃಶ್ಯ ಸೆರೆಯಾಗಿದೆ. ಇದರಲ್ಲಿ ಎರಡು ಮರಿಗಳು ಚೆನ್ನಾಗಿ ಕಂಡು ಬರುತ್ತಿದ್ದು, ಮತ್ತೊಂದು ಮರಿ ಇನ್ನೊಂದು ಭಾಗದಲ್ಲಿ ಕಂಡು ಬರುವುದು ಅಸ್ಪಷ್ಟವಾಗಿ ಕಾಣುತ್ತದೆ. ಇನ್ನಿತರ ಕೆಲವು ಸ್ಥಳಗಳಲ್ಲಿ ಮರಿ ಹುಲಿಗಳು ಓಡಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದಿದೆ.

Three missing tiger cubs found in Nagarahole, video captured on CC camera

''ಟ್ರ್ಯಾಪಿಂಗ್ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಮರಿ ಹುಲಿಗಳ ಛಾಯಾಚಿತ್ರ ಮತ್ತು ದಶ್ಯವಾಳಿಗಳನ್ನು ಗಮನಿಸಲಾಗುದ್ದು, ಮೂರು ಹುಲಿ ಮರಿಗಳು ಆರೋಗ್ಯವಾಗಿರುವುದು ಕಂಡುಬಂದಿದೆ,'' ಎಂದು ಹುಣಸೂರು ಉಪ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಹುಲಿ ಯೋಜನೆ ನಿರ್ದೆಶಕ ಹರ್ಷವರ್ಧನ್ ನರಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Three missing tiger cubs found in Nagarahole of mysuru,Three tiger cubs video captured in CC camera, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X