ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೋತ್ತರ ಸಮೀಕ್ಷೆ ನಿಜವಾದ ಉದಾಹರಣೆ ಇಲ್ಲ:ವಿಜಯಶಂಕರ್

|
Google Oneindia Kannada News

ಮೈಸೂರು, ಮೇ 21: ಚುನಾವಣೋತ್ತರ ಸಮೀಕ್ಷೆಗಳು ನಿಜವಾದ ಉದಾಹರಣೆ ಇತಿಹಾಸದಲ್ಲಿ ಇಲ್ಲ ಎಂದು ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಚುನಾವಣಾ ಸಮೀಕ್ಷೆ ಗಮನಿಸಿ, ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿಲ್ಲ. ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ವಿಧಾನಸಭೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸಮೀಕ್ಷೆ ನೀಡಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಹೀಗಾಗಿ ಸಮೀಕ್ಷೆಗಳನ್ನು ನಾವು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.

There is no real example of after election survey:Vijayashankar

ಸರ್ಕಾರ ಉಳಿಸಿಕೊಳ್ಳಿ: ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಟಾಸ್ಕ್!ಸರ್ಕಾರ ಉಳಿಸಿಕೊಳ್ಳಿ: ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಟಾಸ್ಕ್!

ಕಾಂಗ್ರೆಸ್ ಗೆ ಬಹುಮತ ಬರುವುದಿಲ್ಲ. ಬಿಜೆಪಿಗೂ ಬಹುಮತ ಬರುವುದಿಲ್ಲ. ಅತಂತ್ರ ಫಲಿತಾಂಶ ಬರುತ್ತದೆ. ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಯುಪಿಎ ತೃತೀಯ ರಂಗ ಜಾತ್ಯತೀತ ಪಕ್ಷಗಳು ಸರ್ಕಾರ ರಚಿಸಲಿದೆ. ಮೈಸೂರು - ಕೊಡಗು ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ. ಜೆಡಿಎಸ್ ಶೇ 10 - 20 ಇಪ್ಪತ್ತರಷ್ಟು ಮತಗಳು ಸಮಸ್ಯೆಯಾಗಬಹುದು. ಆದರೆ ಜೆಡಿಎಸ್ ಬೆಂಬಲ ಸಿಕ್ಕಿದೆ. ಕಾಂಗ್ರೆಸ್ ಗೆ ಸಾಂಪ್ರದಾಯಿಕ ಶಕ್ತಿಯಿದೆ. ಹೀಗಾಗಿ ನಾನು ಗೆದ್ದೇ ಗೆಲ್ಲುತ್ತೇನೆ. ರಾಜ್ಯದಲ್ಲಿ ಅಚ್ಚರಿ ಫಲಿತಾಂಶ ಬರಲಿದೆ. ಅಲ್ಲಿಯವರೆಗೂ ಸ್ವಲ್ಪ ತಾಳ್ಮೆ ತಂದುಕೊಳ್ಳಿ ಎಂದು ವಿಜಯಶಂಕರ್ ತಿಳಿಸಿದರು.

English summary
Mysuru – Kodagu congress candidate Vijayshankar expressed his reaction about election survey. He said that there was no real example of election survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X