ಅರಮನೆ ನಗರಿ ಮೈಸೂರಿನಲ್ಲಿ ಬಂದ್ ಗಿಲ್ಲ ಬೆಂಬಲ
ಮೈಸೂರು, ಜೂನ್ 12: ಕರ್ನಾಟಕ ಬಂದ್ ಗೆ ಅರಮನೆ ನಗರಿ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇರಳ, ಆಂಧ್ರಪ್ರದೇಶ, ತಮಿಳುನಾಡಿಗೆ ಎಂದಿನಂತೆ ಬಸ್ ಸಂಚಾರಿಸುತ್ತಿವೆ. ಶಾಲಾ- ಕಾಲೇಜುಗಳು ತೆರೆದಿವೆ. ಬಲವಂತವಾಗಿ ಅಂಗಡಿ ಮುಚ್ಚಿಸದಂತೆ ಜಿಲ್ಲಾಡಳಿತದಿಂದ ಸೂಚನೆ ಸಹ ಬಂದಿದೆ.
ಮಹಾದಾಯಿಸೇರಿದಂತೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗಿರುವುದನ್ನು ಖಂಡಿಸಿ, ಇಂದು ( ಜೂ. 12) ಕನ್ನಡ ವಾಟಾಳ್ ಪಕ್ಷದ ಮಮುಖಂಡ ವಾಟಾಳ್ ನಾಗರಾಜ ಕರ್ನಾಟಕ ಬಂದ್ ಗೆ ಕರೆನೀಡಿದ್ದರು. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯ, ಕೆಲವು ತಾಲೂಕುಗಳನ್ನು ಬಿಟ್ಟರೆ ಬೇರೆಲ್ಲೂ ಬಂದ್ ಗೆ ಬೆಂಬಲ ಸಿಕ್ಕುತ್ತಿಲ್ಲ.

ಅಂತೆಯೇ ಮೈಸೂರಿನ ಜನ ಬಂದ್ ಗೆ ಯಾವ ರೀತಿಯ ಬೆಂಬಲವನ್ನೂ ನೀಡದಿರುವುದರಿಂದ, ಮಾಮೂಲಿನಂತೆ ಜನಜೀವನ ನಡೆಯುತ್ತಿದೆ.












Click it and Unblock the Notifications