ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಡಿ.ಬಿ.ಕುಪ್ಪೆ ಆರೋಗ್ಯ ಕೇಂದ್ರದ ಔಷಧಿ ವಾಪಸ್!

ಕುಗ್ರಾಮಗಳಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಕರ್ತವ್ಯಕ್ಕೆ ಬರಲು ವೈದ್ಯರು ತಯಾರಿಲ್ಲ. ಆದ್ದರಿಂದ ಬಡವರಿಗೆಂದು ಸರ್ಕಾರ ಕಳಿಸುವ ಔಷಧಗಳೂ ಉಪಯೋಗಕ್ಕೆ ಬರುತ್ತಿಲ್ಲ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 22: ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದ ಸರ್ಕಾರ ಔಷಧಿಗಳನ್ನು ಪೂರೈಸುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಈ ಆರೋಗ್ಯ ಕೇಂದ್ರಗಳಿಗೆ ಸರ್ಕಾರ ವೈದ್ಯರನ್ನು ನೇಮಕ ಮಾಡದ ಹಿನ್ನಲೆಯಲ್ಲಿ ಔಷಧಿಯನ್ನು ರೋಗಿಗಳಿಗೆ ನೀಡಲಾಗದೆ ವಾಪಸ್ ಕೊಂಡೊಯ್ಯುತ್ತಿರುವ ಘಟನೆಗಳು ಮೈಸೂರಿನ ಡಿಬಬಿ.ಕುಪ್ಪೆ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬಡವರು, ಕೂಲಿ ಕಾರ್ಮಿಕರು ಇರುವುದರಿಂದ ಅವರ ಆರೋಗ್ಯವಲ್ಲದೆ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒತ್ತು ನೀಡಲಾಗಿದೆ. ಆದರೆ ಇವತ್ತು ಹೆಚ್ಚಿನ ಆರೋಗ್ಯ ಕೇಂದ್ರಗಳು ಇದ್ದೂ ಇಲ್ಲದಂತಾಗಿವೆ. ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಕ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದ್ದರೆ, ಮತ್ತೊಂದೆಡೆ ಕುಗ್ರಾಮಗಳಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಕರ್ತವ್ಯಕ್ಕೆ ಬರಲು ವೈದ್ಯರು ತಯಾರಿಲ್ಲ. ಇಂತಹ ಹಗ್ಗಜಗ್ಗಾಟದಲ್ಲಿ ಬಡವರು ಸಿಕ್ಕಿ ನರಳಾಡುತ್ತಿದ್ದಾರೆ.[ಜೂನ್ ಆರಂಭದಲ್ಲಿ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ?!]

There is no docters in many of primary health centres

ಈ ನಡುವೆ ಎಚ್.ಡಿ.ಕೋಟೆ ತಾಲೂಕಿನ ಗಡಿಭಾಗದ ಗ್ರಾಮ ಡಿ.ಬಿ.ಕುಪ್ಪೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗಿದ್ದ ಔಷಧಿಗಳನ್ನು ವಾಪಾಸ್ಸು ಪಡೆದ ಘಟನೆ ವರದಿಯಾಗಿದೆ. ಇದು ಅಚ್ಚರಿಯಾದರೂ ಸತ್ಯ. ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಅವಧಿ ಮೀರಿದ ಔಷಧಿಗಳನ್ನು ಹಿಂಪಡೆಯವುದು ಮಾಮೂಲಿ. ಆದರೆ ಇಲ್ಲಿ ಔಷಧಿಗಳನ್ನು ವಾಪಸ್ ಪಡೆಯಲು ಕಾರಣ ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ.[ಎಚ್.ಡಿ.ಕೋಟೆಯಲ್ಲಿನ್ನೂ ಪತ್ತೆಯಾಗದ ಹುಲಿ, ಗ್ರಾಮಸ್ಥರಿಗಿಲ್ಲ ನೆಮ್ಮದಿ!]

ಕೆಲವರು ಹೇಳುವ ಪ್ರಕಾರ ಡಿ.ಬಿ.ಕುಪ್ಪೆ ಎಚ್.ಡಿ.ಕೋಟೆ ತಾಲೂಕಿನ ಗಡಿಯಂಚಿನಲ್ಲಿದ್ದು, ಕುಗ್ರಾಮವಾದ ಕಾರಣ ಯಾವ ವೈದ್ಯರೂ ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸಲು ಒಪ್ಪುತ್ತಿಲ್ಲವಂತೆ. ಬಂದರೂ ರಜೆ ಮೇಲೆ ತೆರಳಿ ಬಳಿಕ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ ಎನ್ನುವುದು ಕೆಲವರ ಆರೋಪ. ಹೀಗಾಗಿ ಇಲ್ಲಿಗೆ ಸರ್ಕಾರ ಔಷಧಿಯನ್ನು ಕಳುಹಿಸಿದರೂ ಜನರ ಉಪಯೋಗಕ್ಕೆ ಬರುತ್ತಿಲ್ಲ.[ಮೈಸೂರಿನಲ್ಲಿ ಮಂಡ್ಯರಮೇಶ್ ರಿಂದ ಬೇಸಿಗೆ ಶಿಬಿರ]

There is no docters in many of primary health centres

ಔಷಧಿಯನ್ನು ವಾಪಸ್ ಪಡೆದ ಬಗ್ಗೆ ಸ್ಪಷ್ಟನೆ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಟಿ.ರವಿ ಅವರು ಡಿ.ಬಿ.ಕುಪ್ಪೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಳಿಸಿದ ವೈದ್ಯರು ಅಲ್ಲಿಗೆ ತೆರಳಿ ಕರ್ತವ್ಯ ಮಾಡಲು ನಿರಾಕರಿಸಿದ್ದಾರೆ. ಹಾಗಾಗಿ ಅಲ್ಲಿಗೆ ಸರಬರಾಜು ಮಾಡಿದ ಔಷಧಿಗಳು ಉಪಯೋಗಕ್ಕೆ ಬಾರದೆ ಉಳಿದುಕೊಂಡಿದ್ದವು. ಅವುಗಳನ್ನು ವಾಪಸ್ ಪಡೆದು ಬೇರೆ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿರುವುದಾಗಿ ಹೇಳಿದ್ದಾರೆ.

English summary
A primary health centre in D.B.Kuppe, near H.D.Kote in Mysuru returning the medicines which has sent by government for people. There is no docters in the health centre. So inevitably the medicines are returning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X