ಎಚ್.ಡಿ.ಕೋಟೆ ರೆಸಾರ್ಟ್ ರೂಂನಲ್ಲಿ ಕಳ್ಳತನ; 24 ಗಂಟೆಯಲ್ಲಿ ಸಿಕ್ಕಿಬಿದ್ದ ಆರೋಪಿ

ಮೈಸೂರು, ನವೆಂಬರ್ 23: ವಾರಾಂತ್ಯ ಕಳೆಯಲು ಬೆಂಗಳೂರಿನಿಂದ ಬಂದು ಕಬಿನಿ ಹಿನ್ನೀರಿನ ಸಮೀಪದ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರೊಬ್ಬರ ಚಿನ್ನಾಭರಣ, ಹಣ, ಲ್ಯಾಪ್ ಟಾಪ್ ಕಳುವಾಗಿರುವ ಘಟನೆ ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ನಡೆದಿದ್ದು, ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿರುವ ಪೊಲೀಸರು, ಓರ್ವವನ್ನು ಬಂಧಿಸುವ ಜತೆಗೆ 5 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ಬದನಕುಪ್ಪೆ ಗ್ರಾಮದ ಜಯರಾಜು (35) ಬಂಧಿತ ಆರೋಪಿ. ನ.21ರಂದು ಎಚ್.ಡಿ.ಕೋಟೆ ತಾಲೂಕಿನ ಬದನಕುಪ್ಪೆ ಗ್ರಾಮದ ಬಳಿಯ ರ ರೆಸಾರ್ಟ್ ನ ಕೊಠಡಿಯೊಂದರಲ್ಲಿ ಕಳ್ಳತನ ನಡೆದ ಬಗ್ಗೆ ತಾಲೂಕಿನ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನ ಸುಧೀರ್‌ ಯಜವತ್ ಎಂಬುವವರು ಶನಿವಾರ ಬಂದು ಬದನಗುಪ್ಪೆ ಗ್ರಾಮದಲ್ಲಿರುವ ರೆಸಾರ್ಟ್‌ ನಲ್ಲಿ ವಾಸ್ತವ್ಯ ಹೂಡಿದ್ದರು. ಅದೇ ದಿನ ರಾತ್ರಿ ಊಟಕ್ಕೆಂದು ರೆಸಾರ್ಟ್‌ ನ ಡೈನಿಂಗ್‌ ಹಾಲ್‌ ಗೆ ಹೋಗಿದ್ದಾಗ ಇವರ ರೂಮಿನಿಂದ 60 ಸಾವಿರ ನಗದು, ಚಿನ್ನದ ಕೈ ಚೈನ್, ಲ್ಯಾಪ್ ಟಾಪ್ ಕಳುವಾಗಿತ್ತು.

Mysuru: Theft At HD Kote Resort Police Arrested Person Within 24 Hours

ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ಆರೋಪಿ ಜಯರಾಜ್ ನನ್ನು ಬಂಧಿಸಿ, ವಿಚಾರಣೆ ನಡೆಸಿದ ಸಂದರ್ಭ ಆರೋಪಿಯು ಕಳ್ಳತನ ಮಾಡಿದ್ದ 5 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಜಯರಾಜು ಈ ಹಿಂದೆ ಇದೇ ರೆಸಾರ್ಟ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು, ಈ ವೇಳೆ ಅಲ್ಲಿನ ವ್ಯವಸ್ಥೆಗಳ ಬಗ್ಗೆ ತಿಳಿದುಕೊಂಡು ಈ ಕೃತ್ಯವೆಸಗಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+