Get Updates
Get notified of breaking news, exclusive insights, and must-see stories!

ಪೂರ್ವ ಮುಂಗಾರು ಮಳೆ: ಮೈಸೂರಿನ ಕಬಿನಿ ಜಲಾಶಯಕ್ಕೆ ಮತ್ತೆ ಬರುತ್ತಿದೆ ಜೀವಕಳೆ..!

ಮೈಸೂರು, ಮೇ 26: ಮುಂಗಾರು ಮಳೆ ಸುರಿದಾಗ ಮೊದಲು ಭರ್ತಿಯಾಗುವ ಜಲಾಶಯ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿರುವ ಕಬಿನಿ ಜಲಾಶಯ ಈ ಬಾರಿಯ ಬಿಸಿಲ ಧಗೆಗೆ ಬತ್ತಿಹೋಗುವ ಸ್ಥಿತಿಗೆ ತಲುಪಿತ್ತಲ್ಲದೆ, ಮುಂದೇನು ಎಂಬ ಭಯವನ್ನು ಜನವಲಯಲ್ಲಿ ಸೃಷ್ಟಿ ಮಾಡಿತ್ತು. ಆದರೀಗ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಬತ್ತಿದ ಜಲಾಶಯಕ್ಕೆ ಜೀವ ಕಳೆ ತಂದಿದೆ.

ಬೇಸಿಗೆಯಲ್ಲಿ ಜಲಾಶಯದ ನೀರಿನ ಮಟ್ಟ ತೀರಾ ಇಳಿಕೆಯಾದ ಕಾರಣ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದ ಪಳೆಯುಳಿಕೆಗಳು ಹೊರ ಕಾಣಿಸಿದ್ದವು. ಇದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದೇ ರೀತಿ ಬಿಸಿಲಿನ ಧಗೆ ಮುಂದುವರೆದರೆ ಮುಂದೆ ನೀರಿಗೆ ಪರಿತಪಿಸ ಬೇಕಾಗುತ್ತದೆ ಎಂದು ಜನ ಆತಂಕಗೊಂಡಿದ್ದರು. ಜಲಾಶಯದಲ್ಲಿ ನೀರಿನ ಪ್ರಮಾಣ ಈ ಮಟ್ಟಿಗೆ ಇಳಿಕೆ ಕಂಡಿರಲಿಲ್ಲ. 2016ರಲ್ಲಿ ಮಳೆಯಿಲ್ಲದೆ ಪಳೆಯುಳಿಕೆ ಕಾಣಿಸಿದ್ದವು. ಇದಾದ ನಂತರ ಈ ಬಾರಿಯೇ ಹಿನ್ನೀರಿನಲ್ಲಿ ಮುಳುಗಿರುವ ಪಳೆಯುಳಿಕೆ ಕಾಣಿಸುವ ಮಟ್ಟಿಗೆ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು.

The Water Level In Kabini Reservoir Increasing Due To Monsoon Rain

ಹಾಗೆನೋಡಿದರೆ ಕಬಿನಿ ಜಲಾಶಯ ನಮ್ಮ ರಾಜ್ಯದಲ್ಲಿ ಅದರಲ್ಲೂ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನಲ್ಲಿದ್ದರೂ ಈ ಜಲಾಶಯಕ್ಕೆ ನೀರು ಹರಿದು ಬರುವುದು ಕೇರಳ ರಾಜ್ಯದಿಂದ ಹೀಗಾಗಿ ಕೇರಳಕ್ಕೆ ಮಾನ್ಸೂನ್ ಕಾಲಿಟ್ಟು ವಯನಾಡು ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ಜಲಾಶಯವನ್ನು ತಲುಪುತ್ತದೆ. ಹೀಗಾಗಿಯೇ ರಾಜ್ಯದಲ್ಲಿರುವ ಇತರೆ ಜಲಾಶಯಗಳು ಭರ್ತಿಯಾಗುವ ಮುನ್ನವೇ ಇದು ಭರ್ತಿಯಾಗಿ ಗಮನಸೆಳೆಯುತ್ತದೆ. ಈ ಬಾರಿ ಜನವರಿಯಿಂದ ಏಪ್ರಿಲ್ ತಿಂಗಳ ಅಂತ್ಯದವರೆಗೂ ಮಳೆ ಸುರಿದಿರಲಿಲ್ಲ. ಹೀಗಾಗಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿತ್ತು.

ಆಶಾದಾಯಕವಾದ ಪೂರ್ವ ಮುಂಗಾರು ಮಳೆ

ಇದೀಗ ಕಳೆದ ಎರಡು ವಾರಗಳಿಂದ ಪೂರ್ವ ಮುಂಗಾರು ಆಶಾದಾಯಕವಾಗಿರುವ ಹಿನ್ನಲೆಯಲ್ಲಿ ಕೇರಳ ಮತ್ತು ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಮುಂಗಾರು ಆರಂಭಕ್ಕೂ ಮುನ್ನವೇ ದಿನದಿಂದ ದಿನಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿರುವುದು ಜಲಾಶಯವನ್ನು ಅವಲಂಬಿಸಿರುವ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ಅದರಲ್ಲೂ ನೀರಿಲ್ಲದೆ ಭತ್ತ ಇನ್ನಿತರೆ ಕೃಷಿ ಮಾಡದೆ ಕೈಕಟ್ಟಿ ಕುಳಿತ ರೈತರಿಗೆ ಈ ಬಾರಿಯಾದರೂ ಎಂದಿನಂತೆ ಕೃಷಿ ಮಾಡಬಹುದೆಂಬ ಆಶಾಭಾವನೆಯನ್ನು ಹುಟ್ಟುಹಾಕಿದೆ.

The Water Level In Kabini Reservoir Increasing Due To Monsoon Rain

ಸದ್ಯ ಎಲ್ಲ ಕಡೆಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಮಳೆಯಿಂದ ಅನಾಹುತಗಳು ಸಂಭವಿಸಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮಳೆಗೆ ಜಲಾಶಯ ಮಾತ್ರವಲ್ಲದೆ, ಬತ್ತಿದ ಕೆರೆಗಳಲ್ಲಿಯೂ ನೀರು ಕಾಣಿಸುತ್ತಿದೆ. ಮಳೆಯಿಂದ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ನಾಲ್ಕು ಸಾವಿರ ಕ್ಯುಸೆಕ್ ಗಿಂತ ಜಾಸ್ತಿಯಿದ್ದು, ಸದ್ಯ ಎರಡು ಅಡಿಗಿಂತ ಜಾಸ್ತಿ ನೀರಿನ ಮಟ್ಟ ಹೆಚ್ಚಿದೆ. ಇದು ಖುಷಿಯ ವಿಚಾರವಾಗಿದೆ.

ಈ ಬಾರಿ ಕಬಿನಿ ಬೇಗ ಭರ್ತಿಯಾಗುವ ನಿರೀಕ್ಷೆ

ಈಗ 2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2258.29 ಅಡಿಗಳಿಗಿಂತಲೂ ಜಾಸ್ತಿ ನೀರಿದೆ. ಮಳೆ ಜಾಸ್ತಿಯಾದಂತೆ ಒಳಗೆ ಹರಿದು ಬರುವ ನೀರಿನ ಪ್ರಮಾಣವೂ ಜಾಸ್ತಿಯಾಗಲಿದೆ. ಜಲಾಶಯ ಬೇರೆ ಜಲಾಶಯಗಳಿಗೆ ಹೋಲಿಸಿದೆ ಚಿಕ್ಕದ್ದೇ. ಇದು ಭರ್ತಿಯಾದರೆ 9.52 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಆದರೀಗ 6.70 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ. ಮುಂದೆ ಮಳೆ ಬಂದರೆ ಜಲಾಶಯ ಬಹುಬೇಗವೇ ಭರ್ತಿಯಾಗಬಹುದು ಎಂಬ ನಿರೀಕ್ಷೆ ಮಾಡಲಾಗುತ್ತದೆ. ಈಗಿನಂತೆಯೇ ಮಳೆ ಸುರಿದು ಕೇರಳಕ್ಕೆ ಮಾಸಾಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸಿದರೆ ಜುಲೈನಲ್ಲೇ ಕಬಿನಿ ಜಲಾಶಯ ಭರ್ತಿಯಾದರೂ ಅಚ್ಚರಿಪಡಬೇಕಾಗಿಲ್ಲ.

The Water Level In Kabini Reservoir Increasing Due To Monsoon Rain

ಕಬಿನಿ ಜಲಾಶಯ ಯಾವಾಗಲೂ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲೇ ಭರ್ತಿಯಾಗುತ್ತದೆ. ಅತಿಹೆಚ್ಚು ಸಮಯ ಜೂನ್ ಅಂತ್ಯದಲ್ಲೇ ಭರ್ತಿಯಾಗಿ ಜುಲೈ ಆರಂಭದಲ್ಲೇ ಬಾಗಿನ ಸ್ವೀಕರಿಸಿದ ನಿದರ್ಶನಗಳಿವೆ. ಕಳೆದ ವರ್ಷ ಕೇರಳದ ವೈನಾಡು ಪ್ರಾಂತ್ಯದಲ್ಲಿ ಮುಂಗಾರು ಮಳೆ ಕ್ಷೀಣಗೊಂಡ ಕಾರಣದಿಂದ ಭರ್ತಿಯಾಗಿರಲಿಲ್ಲ.

ಭರ್ತಿಯಾಗುವ ಹಂತ ತಲುಪಿದ ಸಂದರ್ಭ ತಮಿಳುನಾಡಿಗೆ ನೀರು ಹರಿಸಲಾಗಿತ್ತು. ಹೀಗಾಗಿ ಭರ್ತಿಯಾಗಲಿಲ್ಲ ಜತೆಗೆ ಬಾಗಿನ ಸ್ವೀಕರಿಸುವ ಭಾಗ್ಯವೂ ಜಲಾಶಯಕ್ಕೆ ಒದಗಿ ಬಂದಿರಲಿಲ್ಲ. ಆದರೆ ಈಗಿನ ವಾತಾವರಣವನ್ನು ನೋಡಿದರೆ, ಜುಲೈ ಮೂರನೇ ವಾರದಲ್ಲೇ ಜಲಾಶಯ ಭರ್ತಿಯಾಗುವ ಆಶಾಭಾವ ಮೂಡಿದೆ. ಆದಷ್ಟು ಬೇಗ ಜಲಾಶಯ ಭರ್ತಿಯಾಗಿ ರೈತರ ಸಂಕಷ್ಟ ನೀಗಿ ಎಂದಿನಂತೆ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಗಲಿ ಎಂಬುದೇ ಎಲ್ಲರ ಆಶಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+