ಮೈಸೂರು ರೈಲ್ವೆ ನಿಲ್ದಾಣಕ್ಕೆ ಶೀಘ್ರವೇ ಬರಲಿದೆ ಮೂರನೇ ಪ್ರವೇಶ ದ್ವಾರ
ಮೈಸೂರು, ಡಿಸೆಂಬರ್ 1: ರಾಜಧಾನಿ ಬೆಂಗಳೂರು ನಂತರ ಮೈಸೂರು ಅತಿ ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ರೈಲ್ವೇ ನಿಲ್ದಾಣಕ್ಕೆ ಮೂರನೇ ಪ್ರವೇಶ ದ್ವಾರ ನಿರ್ಮಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗ ಮುಂದಾಗಿದೆ.
ಮೈಸೂರು ರೈಲ್ವೆ ನಿಲ್ದಾಣಕ್ಕೆ ಈಗಾಗಲೇ ಎರಡು ಪ್ರವೇಶ ದ್ವಾರವಿದೆ. ಒಂದು ಮುಖ್ಯ ರೈಲ್ವೆ ನಿಲ್ದಾಣ ಪ್ರವೇಶ ದ್ವಾರ. ಮತ್ತೊಂದು ರೈಲ್ವೆ ಮ್ಯೂಸಿಯಂ ಬಳಿ ಇದೆ. ಇದೀಗ ವಾಣಿ ವಿಲಾಸ ನೀರು ಸರಬರಾಜು ಕಚೇರಿ ಬಳಿ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಹೊಸ ಪ್ರವೇಶ ದ್ವಾರ ನಿರ್ಮಿಸಲು ಉದ್ದೇಶಿಸಿದೆ.

ಇದರಿಂದ ಬನ್ನಿಮಂಟಪದಿಂದ ಬರುವ ಜನರಿಗೆ ಅನುಕೂಲವಾಗಲಿದೆ. ಸುಮಾರು 1.5 ಕಿ.ಮೀ ಉಳಿತಾಯವಾಗುತ್ತದೆ. ಅಲ್ಲದೆ, ಅಶೋಕಪುರಂ ರೈಲ್ವೆ ನಿಲ್ದಾಣ ಬೇರೆ ಆಗಿರುವುದರಿಂದ ಜೆ.ಪಿ.ನಗರ, ಶ್ರೀರಾಂಪುರ ಸೇರಿದಂತೆ ಇತರರು ಅಲ್ಲಿಂದಲೇ ಪ್ರಯಾಣಿಸುತ್ತಾರೆ. ಹೀಗಾಗಿ ಹೊಸ ಪ್ರವೇಶ ದ್ವಾರವೂ ಟ್ರಾಫಿಕ್ ತಡೆಗಟ್ಟಲು ಕೂಡ ಸಹಕಾರಿಯಾಗಲಿದೆ.
ಎಲ್ಲಿ ದ್ವಾರ ನಿರ್ಮಾಣ? ಪ್ರಸ್ತುತ ವಾಣಿ ವಿಲಾಸ ನೀರು ಸರಬರಾಜು ಕಚೇರಿ ಬಳಿ ರೈಲ್ವೆ ಇಲಾಖೆಗೆ ಸೇರಿದ ಜಾಗವಿದೆ. ಅಲ್ಲಿಯೇ ಹೊಸ ಪ್ರವೇಶ ದ್ವಾರ ತಲೆ ಎತ್ತಲಿದೆ. ಇಲ್ಲಿಂದಲೇ ಎರಡನೇ ಪ್ರವೇಶ ದ್ವಾರಕ್ಕೂ ನೇರ ಎಂಟ್ರಿ ಕೊಡಬಹುದಾ ಎಂಬ ಚರ್ಚೆ ನಡೆಯುತ್ತಿದೆ.
ಇದರಿಂದ ್ಲಾಟ್ರಂಗಳ ಸಂಖ್ಯೆಯೂ ಹೆಚ್ಚಾಗಲಿದೆ. ಜತೆಗೆ ಹೆಚ್ಚುವರಿ ರೈಲನ್ನೂ ಓಡಿಸಬೇಕು. ಇಲ್ಲಿಂದಲೇ ಟಿಕೆಟ್ ಪಡೆದು, ವಾಹನ ನಿಲ್ಲಿಸಿ ್ಲಾಟ್ರಂಗೆ ತೆರಳಬಹುದು. ಇದರಿಂದ ಪ್ರಯಾಣಿಕರ ಸಮಯವೂ ಉಳಿಯುತ್ತದೆ. ಮೈಸೂರು ಪಾರಂಪರಿಕತೆಗೆ ಧಕ್ಕೆಯಾಗದಂತೆ ಮೂರನೇ ಪ್ರವೇಶ ದ್ವಾರವನ್ನು ನಿರ್ಮಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.
''ಕೇಂದ್ರ ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿದ್ದೇವೆ. ಅಲ್ಲದೆ, ಕಂಪನಿಯೊಂದು ನೀಲಿನಕ್ಷೆ ಸಿದ್ಧಪಡಿಸುತ್ತಿದೆ. ಅದು ಇನ್ನೂ ಅಂತಿಮಗೊಂಡಿಲ್ಲಘಿ. ಮೂರನೇ ಪ್ರವೇಶ ದ್ವಾರವನ್ನು ನೇರವಾಗಿ ಎರಡನೇ ಪ್ರವೇಶ ದ್ವಾರಕ್ಕೆ ಜೋಡಿಸಬಹುದು ಎಂಬ ಚಿಂತನೆಯೂ ಇದೆ. ಇದರಿಂದ ಜನರಿಗಂತೂ ಅನುಕೂಲವಾಗಲಿದೆ,'' ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ತಿಳಿಸಿದ್ದಾರೆ.
ಮೈಸೂರು ರೈಲು ನಿಲ್ದಾಣದಿಂದ ಅಂದಾಜು 50 ಸಾವಿರಕ್ಕೂ ಹೆಚ್ಚು ಜನರು ನಿತ್ಯ ಪ್ರಯಾಣಿಸುತ್ತಾರೆ. ಇದರಲ್ಲಿ ಉದ್ಯೋಗಸ್ಥರು, ವಿದ್ಯಾರ್ಥಿಗಳು, ಮಹಿಳೆಯರ ಸಂಖ್ಯೆಯೇ ಹೆಚ್ಚು. ಮೈಸೂರು-ಬೆಂಗಳೂರು ರೈಲಿಗಂತೂ ಹೆಚ್ಚಿನ ಬೇಡಿಕೆ ಇದೆ. ಇದನ್ನು ಗಮನಿಸಿ ನೈರುತ್ಯ ರೈಲ್ವೆ ಮೈಸೂರು ವಿಭಾಗವು ಟಿಕೆಟ್ ಕೌಂಟರ್ನಲ್ಲಿ ಸರತಿ ಸಾಲು ತಪ್ಪಿಸಲು ಹಾಗೂ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ನೀಡುವ ಉದ್ದೇಶದಿಂದ ಮೂರನೇ ಪ್ರವೇಶ ದ್ವಾರ ತೆರೆಯಲು ನಿರ್ಧರಿಸಿದೆ.
''ವಾಣಿ ವಿಲಾಸ ನೀರು ಸರಬರಾಜು ಕಚೇರಿ ಸಮೀಪ ಮೂರನೇ ಪ್ರವೇಶ ದ್ವಾರ ಬರಲಿದೆ. 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ನೀಲಿನಕ್ಷೆ ಅಂತಿಮಗೊಂಡ ತಕ್ಷಣ ಡಿಪಿರ್ಆ ಕೆಲಸ ಶುರುವಾಗುತ್ತದೆ. ಇದರ ಜತೆಗೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕೆಲಸವೂ ನಡೆಯುತ್ತಿದೆ,'' ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.












Click it and Unblock the Notifications