ಮೈಸೂರು: ಪ್ರೇಯಸಿಯನ್ನು ಹತ್ಯೆಗೈದ ಹಂತಕ ಬಂಧನ
ಮೈಸೂರು, ನವೆಂಬರ್ 6: ಪ್ರೇಯಸಿಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ತಾಲೂಕಿನ ಮಂಗಳೂರುಮಾಳ ಗ್ರಾಮದ ಮಾದೇಶ ಅಲಿಯಾಸ್ ಪೂಜಾರಿ ಮಹದೇವ(23) ಬಂಧಿತ ಆರೋಪಿ. ಈತ ಅದೇ ಗ್ರಾಮದ ವ್ಯಕ್ತಿಯೊಬ್ಬರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ.

.ಮಾದೇಶನೊಂದಿಗೆ ಮಾತ್ರವಲ್ಲದೆ ಬೇರೊಬ್ಬರೊಂದಿಗೂ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಈ ವಿಚಾರದಲ್ಲಿ ಇಬ್ಬರಿಗೂ ಕಲಹವಾಗಿದೆ. ಆಗ ಮಾದೇಶ ಆಕೆಯನ್ನು ಗ್ರಾಮದ ಕಾಲುವೆ ಬಳಿ ಕರೆದೊಯ್ದು ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದು ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ಎಸ್ಪಿ ರವಿ ಡಿ.ಚನ್ನಣನವರ್ ಸೂಚನೆಯಂತೆ ಎ.ಎಸ್.ಪಿ.ರುದ್ರಮುನಿರವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಭಾಸ್ಕರ್‍ರೈರವರ ನೇತೃತ್ವದ ತಂಡ ರಚಿಸಲಾಗಿತ್ತು.
ಈ ವೇಳೆ ಹಂತಕ ಹನಗೂಡಿನ ವೈನ್ ಸ್ಟೋರ್‍ಗೆ ಕುಡಿಯಲು ಬರುತ್ತಾನೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications