ವ್ಯಾಸರಾಯ ಮಠದ ಪೀಠಾಧಿಪತಿ ವಿರುದ್ಧ ಎಫ್‌ಐಆರ್ ದಾಖಲು

ಮೈಸೂರು, ಮೇ.06:ವ್ಯಾಸರಾಯ ಮಠದ 41ನೇ ಪೀಠಾಧ್ಯಕ್ಷರ ಮೇಲೆ ಮೂಲ ಪ್ರತಿಮೆ ಬದಲು ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಮಠದ ಭಕ್ತರು ದೂರು ದಾಖಲಿಸಿದ್ದು, ಆಂಧ್ರಪ್ರದೇಶದ ಅನಂತಪುರದಲ್ಲಿ ವಿದ್ಯಾ ಶ್ರೀ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ.ಮಠದ ವೆಬ್‌ಸೈಟ್ ನಲ್ಲಿ ಪ್ರಕಟವಾದ ಫೋಟೋ, ಮೂಲ ವಿಗ್ರಹಕ್ಕೂ ವ್ಯತ್ಯಾಸವಿದ್ದು, ಮೂಲ ರೂಪದ ಡೂಪ್ಲಿಕೇಟ್ ವಿಗ್ರಹ ಮಾಡಿಟ್ಟಿರುವ ಶಂಕೆ ವ್ಯಕ್ತವಾಗಿದೆ.

The FIR was registered against Vidya Sri Swamiji of Vyasaraya Mutt

ಸದಾ ಕಾಲ ಮೂಲ ವಿಗ್ರಹಗಳು ಸ್ವಾಮೀಜಿ ಬಳಿಯೇ ಇರುವುದಾಗಿ ತಿಳಿದು ಬಂದಿದೆ. ಇನ್ನು ಮೂಲ ವಿಗ್ರಹ ಬದಲಾವಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ 40 ನೇ ಪೀಠಾಧಿಪತಿ ವಿದ್ಯಾಮನೊಹರ ತೀರ್ಥ ಸ್ವಾಮೀಜಿ, ಮೂಲ ವಿಗ್ರಹ ಪರಿಶೀಲನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

The FIR was registered against Vidya Sri Swamiji of Vyasaraya Mutt

ವಿಗ್ರಹ ಬದಲಾಣೆ ಬಗ್ಗೆ ಮೌನ ಮುರಿಯುವಂತೆ ಹಾಲಿ ಸ್ವಾಮೀಜಿ ಮೇಲೆ ಒತ್ತಾಯ ಕೇಳಿಬರುತ್ತಿದ್ದು, ಚಿನ್ನ, ತಾಮ್ರ, ಪಂಚಲೋಹ, ಬೆಳ್ಳಿ ಪ್ರತಿಮೆಗಳ ಬದಲಾವಣೆ ಬಗ್ಗೆ ಅನುಮಾನವಿದೆ.
ಇದೀಗ ಎಲ್ಲಾ ಮಾದರಿಯ ಪ್ರತಿಮೆಗಳ ಪರಿಶೀಲನೆಗೆ ಒತ್ತಾಯಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+