ಮೈಸೂರು: ಮದುವೆ ದಿಬ್ಬಣಕ್ಕೆ ಹೊರಟಿದ್ದ ಟಾಟಾ ಎಸಿ ಪಲ್ಟಿ; ಇಬ್ಬರು ಸಾವು, 10ಕ್ಕೂ ಹೆಚ್ಚು ಗಾಯ

ಮೈಸೂರು, ಮಾರ್ಚ್ 29: ಮದುವೆ ದಿಬ್ಬಣಕ್ಕೆ ಹೊರಟಿದ್ದ ಟಾಟಾ ಎಸಿ ಪಲ್ಟಿಯಾಗಿ ಇಬ್ಬರು ಬಾಲಕಿರ ಸಾವನ್ನಪ್ಪಿದ್ದು, ೧೦ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಹೊಸೂರು-ಹಳಿಯೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದ್ದು, ಕುಪ್ಪೆ ಗ್ರಾಮದಿಂದ ಶ್ರೀರಾಮಪುರ ಗ್ರಾಮದ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವಾಹನ ಪಲ್ಟಿಯಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ವಾಹನ ನಾಲೆಗೆ ಉರುಳಿ ಅಪಘಾತವಾಗಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಬಾಲಕಿಯರು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಕುಪ್ಪೆ ಗ್ರಾಮದ ಕೃಷ್ಣಯ್ಯ ಪುತ್ರಿಯರಾದ ಪುಷ್ಪಲತಾ (10), ಪಲ್ಲವಿ (9) ಮೃತ ದುರ್ದೈವಿಗಳು.

Mysuru: Tata Ace Accident In KR Nagara Taluk: 2 Died And 10 Injured

ನಾಲೆಯಲ್ಲಿ ನೀರಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದ್ದು, ವಾಹನದಲ್ಲಿದ್ದ ಮದುಮಗಳು ಪಾರಾಗಿದ್ದಾಳೆ, ಗಾಯಾಳುಗಳು ಕೆ.ಆರ್ ನಗರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+