ಟಿಪ್ಪು ಪಠ್ಯ ತೆಗೆದು ಹಾಕುವ ನಿರ್ಧಾರ; ತನ್ವೀರ್ ಸೇಠ್ ಹೇಳಿದ್ದು ಹೀಗೆ...

ಮೈಸೂರು, ಅಕ್ಟೋಬರ್ 31: ಮಾಜಿ ಸಚಿವ ತನ್ವೀರ್ ಸೇಠ್ ಟಿಪ್ಪು ಪಠ್ಯವನ್ನು ತೆಗೆದು ಹಾಕುವ ನಿರ್ಧಾರವನ್ನು ಖಂಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸಾಧನೆಯನ್ನು ಮಕ್ಕಳು ಓದುವುದು ಬೇಕಾಗಿಲ್ಲ, ಬದಲಿಗೆ ಯಡಿಯೂರಪ್ಪ ಜೈಲಿಗೆ ಹೋದ ವಿಚಾರವನ್ನು ಮುಂದಿನ ಪೀಳಿಗೆಯ ಮಕ್ಕಳು ಓದಬೇಕಿದೆ ಎಂದು ಟಾಂಗ್ ನೀಡಿದ್ದಾರೆ.

"ಆಪರೇಷನ್ ಕಮಲ, ಗಣಿ ಲೂಟಿ ಮಾಡಿರುವುದು ಬಿಜೆಪಿಯ ಇತಿಹಾಸ. ಇದನ್ನೇ ಮುಂದಿನ ಪೀಳಿಗೆಯ ಮಕ್ಕಳು ಓದಲಿ ಎಂದು ಬಯಸಿದ್ದಾರೆ. ಬಿಜೆಪಿಯವರು ಬ್ರಿಟಿಷರ ಪರ ನಿಂತವರು, ಗಾಂಧೀಜಿಯನ್ನು ಕೊಂದವರು. ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇಲ್ಲ. ಬದಲಿಗೆ ತಮ್ಮದೇ ಆದ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಇದು ಯಶಸ್ವಿ ಆಗದು, ಬಿಜೆಪಿಯದು ಹಿಟ್ಲರ್ ನ ಸಾಮ್ರಾಜ್ಯಕ್ಕಿಂತ ಕೀಳು" ಎಂದು ವಾಗ್ದಾಳಿ ನಡೆಸಿದರು.

Tanveer Sait Reaction On Removal Of Tipu Sultan Name From Text Book

"ಅಲ್ಪಸಂಖ್ಯಾತ ಸಮುದಾಯ ಎಂದಿಗೂ ಟಿಪ್ಪು ಜಯಂತಿ ಮಾಡಿ ಎಂದು ಸರ್ಕಾರವನ್ನು ಕೇಳಿರಲಿಲ್ಲ. ಅಲ್ಲದೆ ಪಠ್ಯದಲ್ಲಿ ಸೇರಿಸಲು ಕೂಡ ಕೇಳಿರಲಿಲ್ಲ. ಟಿಪ್ಪು ಓರ್ವ ಸ್ವಾತಂತ್ರ್ಯ ಹೋರಾಟಗಾರ. ಆದರೆ ಅದನ್ನು ವ್ಯವಸ್ಥಿತವಾಗಿ ತಿರುಚಿ ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಹಾಗೂ ಅವರ ಪರ ಮಾತನಾಡುವವರನ್ನು ಘಾತಕ ಶಕ್ತಿಗಳಂತೆ ಬಿಂಬಿಸಲಾಗುತ್ತಿದೆ" ಎಂದು ಬಿಜೆಪಿ ವಿರುದ್ಧ ಅಸಮಾಧಾನಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+