ತನ್ವೀರ್ ಸೇಠ್ ಹಲ್ಲೆ ಪ್ರಕರಣ; ಗನ್ ಮ್ಯಾನ್ ಅಮಾನತು
ಮೈಸೂರು, ನವೆಂಬರ್ 19: ಶಾಸಕ ತನ್ವೀರ್ ಸೇಠ್ ಅವರ ಮೇಲೆ ಭಾನುವಾರ ರಾತ್ರಿ ನಡೆದ ಹಲ್ಲೆ ಪ್ರಕರಣ ಸಂಬಂಧ ಅವರ ಗನ್ ಮ್ಯಾನ್ನನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಖಾಸಗಿ ಮದುವೆ ಸಮಾರಂಬದಲ್ಲಿ ಭಾಗಿಯಾಗಿದ್ದ ಶಾಸಕರ ಮೇಲೆ ಫರ್ಹಾನ್ ಎಂಬ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ್ದ. ತೀವ್ರ ಗಾಯಗೊಂಡ ಶಾಸಕರು ಕೊಲಂಬಿಯಾ ಏಷ್ಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹಲ್ಲೆ ತಡೆಯುವಲ್ಲಿ ವಿಫಲನಾದ ಶಾಸಕರ ಗನ್ ಮ್ಯಾನ್ ಫೈರೋಜ್ ಖಾನ್ ಎಂಬಾತನನ್ನು ನಗರ ಪೋಲೀಸ್ ಅಯುಕ್ತ ಕೆ.ಟಿ. ಬಾಲಕೃಷ್ಣ ಅವರು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಫರ್ಹಾನ್ ನನ್ನು 12 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದು, ಈತನನ್ನು ಡಿಸಿಪಿ ಮುತ್ತುರಾಯ ನೇತೃತ್ವದ ಪೊಲೀಸರ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ಆರೋಪಿ ಫರ್ಹಾನ್ ಕುಟುಂಬಸ್ಥರು ಗೌಸಿಯಾ ನಗರದಿಂದ ಸೋಮವಾರ ರಾತ್ರೋ ರಾತ್ರಿ ಮನೆ ಖಾಲಿ ಮಾಡಿ ಪರಾರಿ ಆಗಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ವಿಚಾರಣೆಗೆ ಹೆದರಿ ತಂದೆ ತಾಯಿ, ತಂಗಿ ಇದ್ದ ಕುಟುಂಬ ಪರಾರಿ ಆಗಿದೆ ಎಂದು ಶಂಕಿಸಲಾಗಿದೆ.












Click it and Unblock the Notifications