ಮೈಸೂರಿನಲ್ಲಿ ಸ್ವಾಮೀಜಿ ಲೈಂಗಿಕ ಕಿರುಕುಳ ಪ್ರಕರಣ: ಶಿಷ್ಯನ ಬಂಧನ

ಮೈಸೂರು, ಸೆಪ್ಟೆಂಬರ್ 21 :ವಿವಾಹಿತ ಮಹಿಳೆಗೆ ಸ್ವಾಮೀಜಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ಶಿಷ್ಯನನ್ನು ಮೈಸೂರಿನ ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.

ಸ್ವಾಮೀಜಿಯ ಶಿಷ್ಯ ಅನಿಲ್ ಆಚಾರ್ಯನೇ ಬಂಧಿತ ಆರೋಪಿ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಈತನನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ ?

"ಸೆ.4ರಂದು ರಾತ್ರಿ 1 ಗಂಟೆಗೆ ನನ್ನ ಪತಿಯೊಂದಿಗೆ ಸ್ವಾಮೀಜಿ ಹಾಗೂ ಅವರ ಐವರು ಶಿಷ್ಯರು ಮನೆಯೊಳಗೆ ಪ್ರವೇಶಿಸಿ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಮುಂದಲೆ ಕೂದಲನ್ನು ಹಿಡಿದು ಎಳೆದಾಡಿ ನನ್ನ ಸೇವೆಗೆ ಬರುವುದಿಲ್ಲ ಎನ್ನುತ್ತೀಯಾ?' ಎಂದು ಸ್ವಾಮೀಜಿ ಹಲ್ಲೆ ನಡೆಸಿದರು.

Swamiji sexual harassment case:disciple arrested

ಮಲಗುವ ಕೋಣೆಗೆ ಎಳೆದೊಯ್ದು ನನ್ನ ಮನೋಕಾಮನೆ ಈಡೇರಿಸಿದರೆ ನಿನಗೆ ಒಳ್ಳೆಯದಾಗುತ್ತದೆ ಎಂದು ಲೈಂಗಿಕ ಕಿರುಕುಳ ನೀಡಿದರು. ಅಷ್ಟೇ ಅಲ್ಲದೇ, ನನ್ನ ಬಟ್ಟೆಗಳಿಗೂ ಬೆಂಕಿ ಹಚ್ಚಿದರು. ತಪ್ಪಿಸಿಕೊಳ್ಳುವ ಉದ್ದೇಶದಿಂದ ನಾನು ಎದುರು ಮನೆಗೆ ಹೋಗಲೆತ್ನಿಸಿದಾಗ ಸ್ವಾಮೀಜಿ ನನ್ನನ್ನು ಹಿಡಿದು ಬಲವಂತವಾಗಿ ಅವರ ಫಾರ್ಚೂನರ್ ಕಾರಿನಲ್ಲಿ ಕೂರಿಸಿಕೊಂಡರು.

3 ದಿನಗಳೊಳಗೆ ನನ್ನ ಸೇವೆಗೆ ನೀನು ಬರಬೇಕು' ಎಂದು ಎಚ್ಚರಿಸಿ ಕಳುಹಿಸಿದರು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದರು.

ಸೆಪ್ಟೆಂಬರ್.4ರಂದು ಈ ಘಟನೆ ನಡೆದಿದ್ದು ಸ್ವಾಮೀಜಿ, ಆಕೆಯ ಪತಿ ಹಾಗೂ ಇತರ 5 ಮಂದಿ ಕಿರುಕುಳ ನೀಡಿದ್ದರೆಂದು ಗೃಹಿಣಿ ಆರೋಪಿಸಿದ್ದರು. ಈ ಬಗ್ಗೆ ಸೆಪ್ಟೆಂಬರ್ 7ರಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ನಡೆದ ದಿನದಿಂದ ಸ್ವಾಮೀಜಿ ಹಾಗೂ ಮಹಿಳೆ ಪತಿ ನಾಪತ್ತೆಯಾಗಿದ್ದರು. ಈ ಘಟನೆ ನಡೆದ ವೇಳೆ ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯ ಸಹ ಇದ್ದರು. ಸದ್ಯ ಸಂತ್ರಸ್ತೆ ಅನಿಲ್ ಆಚಾರ್ಯರನ್ನು ಗುರುತಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+