ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಘನ ತ್ಯಾಜ್ಯ ನಿರ್ವಹಣೆ, ದಕ್ಷಿಣ ಭಾರತದಲ್ಲೇ ಹುಣಸೂರಿಗೆ ಅಗ್ರಸ್ಥಾನ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 24: ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ದಾಖಲೆ ಬರೆದಿದೆ. ಅತ್ಯುತ್ತಮ ಘನ ತ್ಯಾಜ್ಯ ನಿರ್ವಹಣೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನವನ್ನು ಹುಣಸೂರು ತನ್ನದಾಗಿಸಿಕೊಂಡಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ ಪ್ರಕಟಿಸಿದ ಸ್ವಚ್ಛ್ ಸರ್ವೇಕ್ಷಣ್ 2018 ರ ಪಟ್ಟಿಯಲ್ಲಿ ಹುಣಸೂರು 476ಕ್ಕೆ 280 ಅಂಕಗಳನ್ನು ಪಡೆದು ದಕ್ಷಿಣ ಭಾರತಕ್ಕೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕುಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು

ಹುಣಸೂರು ನಗರ ಪ್ರತಿದಿನಕ್ಕೆ ಪ್ರತಿಯೊಬ್ಬರಿಂದ 390 ಗ್ರಾಂ ತ್ಯಾಜ್ಯ ಸಂಗ್ರಹಿಸುತ್ತದೆ. ಈ ಮೂಲಕ ಪ್ರತಿದಿನ ಸಂಗ್ರಹಿಸುವ ತ್ಯಾಜ್ಯದ ಪ್ರಮಾಣ 21.9 ಟನ್ ಆಗಿದೆ.

Swachh Survekshan 2018: Hunsur tops in solid waste management in South

ಹುಣಸೂರು ನಗರ ಸಭೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಅಭಿನಂದನಾರ್ಹ ಕೆಲಸಗಳನ್ನು ನಡೆಸುತ್ತಿದೆ. ಉದಾಹರಣೆ ಆ ದಿನ ಸಂಗ್ರಹಿಸಿದ ತ್ಯಾಜ್ಯವನ್ನು ಅಂದೇ ಸಂಸ್ಕರಣೆ ಮಾಡಲಾಗುತ್ತದೆ.

ಹುಣಸೂರಿನಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆ ಇದ್ದು, ಪ್ರತಿ ಮನೆ ಬಾಗಿಲಿಗೆ ಹೋಗಿ ದಿನವೂ ಕಸವನ್ನು ಸಂಗ್ರಹಣೆ ಮಾಡಲಾಗುತ್ತದೆ. ಇದನ್ನು ಆಟೋ ರಿಕ್ಷಾಗಳಲ್ಲಿ ಸಾಗಿಸಲಾಗುತ್ತದೆ. ಪ್ರತೀ ರಿಕ್ಷಾದಲ್ಲೂ ಪಾಲಿಥೀನ್ ಬ್ಯಾಗ್ ಗಳಳಿರುತ್ತವೆ. ಘನ ತ್ಯಾಜ್ಯವನ್ನು ಈ ಬ್ಯಾಗ್ ಗಳಿಗೆ ಹಾಕಲಾಗುತ್ತದೆ.

ಇನ್ನು ತೆಲಂಗಾಣದ ಸಿದ್ದಿಪೇಟೆ ಎರಡನೇ ಸ್ಥಾನ ಮತ್ತು ಮೈಸೂರಿನ ಪಿರಿಯಾಪಟ್ಟಣ ಮೂರನೇ ಸ್ಥಾನವನ್ನು ಪಡೆದಿದೆ. ಇನ್ನು ಟಾಪ್ 20 ಸ್ಥಾನಗಳಲ್ಲಿ ಕರ್ನಾಟಕದ ಹುಣಸೂರು, ಪಿರಿಯಾಪಟ್ಟಣ ಮಾತ್ರವಲ್ಲದೇ ದಕ್ಷಿಣ ಕನ್ನಡದ ಪುತ್ತೂರು ಮತ್ತು ಮೂಲ್ಕಿಯೂ ಸ್ಥಾನ ಪಡೆದಿದೆ.

English summary
Hunsur town in Mysuru district won the Best City in Solid Waste Management in South Zone in the Swachh Survekshan 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X