• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತ:ದರ್ಶನ್ ತಾಯಿ ಮೀನಾ ತೂಗುದೀಪ

|
   ನಟ ದರ್ಶನ್ ತಾಯಿ ಮೀನಾ ತೂಗುದೀಪ ಸುಮಲತಾ ಬಗ್ಗೆ ಹೇಳಿದ್ದು ಹೀಗೆ

   ಮೈಸೂರು, ಏಪ್ರಿಲ್‌ 10:ನನ್ನ ಮಗ ಯಾರ ಪರ ಪ್ರಚಾರ ಮಾಡುತ್ತಿದ್ದಾನೋ, ಅವರು ವಿಜಯಶಾಲಿಯಾಗಲಿದ್ದಾರೆ ಎಂದು ನಟ ದರ್ಶನ್ ತಾಯಿ ಹಾಗೂ ಕಾಂಗ್ರೆಸ್ ಮುಖಂಡರಾದ ಮೀನಾ ತೂಗುದೀಪ ಹಾರೈಸಿದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಪ್ರಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ನನ್ನ ಮಗ ಯಾರ ಪರ ಪ್ರಚಾರ ಮಾಡುತ್ತಿದ್ದಾನೆ ಅವರು ಗೆದ್ದು ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

   ಮಂಡ್ಯದ ಸಾಕ್ಷಾತ್ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್!

   ಮಂಡ್ಯ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಲೇ ಇದೆ. ಇಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ನಡುವೆ ನೇರಾ ಹಣಾಹಣಿ ಏರ್ಪಟಿದ್ದು, ಅಭ್ಯರ್ಥಿಗಳ ಬಗ್ಗೆ ರಾಜಕೀಯ ನಾಯಕರುಗಳು ಕೊಡುತ್ತಿರುವ ಹೇಳಿಕೆಗಳು ರಾಜ್ಯ, ದೇಶದ ಮಟ್ಟದಲ್ಲಿ ಗಮನ ಸೆಳೆದು ಎಲ್ಲೆಡೆ ಚರ್ಚೆಯಾಗುತ್ತಿವೆ.

   ಇದೀಗ ದರ್ಶನ್ ತಾಯಿ ಮೀನಾ ಅವರು ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತ ಎಂದು ಹೇಳಿಕೆ ನೀಡಿರುವುದು ಮೈತ್ರಿ ಪಕ್ಷದ ನಾಯಕರ ನಿದ್ದೆಗೆಡಿಸುವುದಂತು ಖಚಿತ.

   English summary
   Lok Sabha Elections 2019:Challenging Star Darshan Mother Meena Thoogudeepa said that Sumalatha victory in Mandya is sure. But i am not talking about my son's campaign.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X