ವಿಷಪ್ರಸಾದ ಪ್ರಕರಣದ ಆರೋಪಿಗಳಿಗೆ ಸಿಕ್ತು ಕೈದಿ ನಂಬರ್

ಮೈಸೂರು, ಡಿಸೆಂಬರ್ 22 : ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷ ಪ್ರಸಾದ ತಯಾರಿಸಿದ ಆರೋಪಿಗಳಿಗೆ ಕೈದಿ ಸಂಖ್ಯೆ ನೀಡಲಾಗಿದೆ.

ನಾಲ್ವರು ಆರೋಪಿಗಳನ್ನು ಶನಿವಾರ ಬೆಳಗಿನ ಜಾವ ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಪೊಲೀಸರ ಬಿಗಿ ಭದ್ರತೆಯಲ್ಲಿ ಕರೆತರಲಾಗಿದ್ದು, ಪ್ರಕರಣದ ನಾಲ್ವರು ಆರೋಪಿಗಳಿಗೆ ಮೈಸೂರು ಕೇಂದ್ರ ಖೈದಿಗಳ ಸಂಖ್ಯೆ ನೀಡಲಾಗಿದೆ. ಪ್ರಸಾದ ಪ್ರಕರಣದ ಮೊದಲನೇ ಆರೋಪಿಯಾದ ಇಮ್ಮಡಿ ಮಹದೇವಸ್ವಾಮಿ - 13218, ಎರಡನೇ ಆರೋಪಿ ಅಂಬಿಕಾ-13221, ಮೂರನೇ ಆರೋಪಿ ಮಾದೇಶ- 13220, ನಾಲ್ಕನೇ ಆರೋಪಿಯಾದ ದೊಡ್ಡಯ್ಯ-13219 ಸಂಖ್ಯೆಯನ್ನು ನೀಡಲಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನ್ಯಾಯಾಧೀಶರ ಮುಂದೆ ಶುಕ್ರವಾರ ಈ ನಾಲ್ವರು ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಿದಾಗ, ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದರು. ನಾಲ್ವರ ಆರೋಗ್ಯ ಉತ್ತಮವಾಗಿದೆ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಆನಂದರೆಡ್ಡಿ ಮಾಹಿತಿ ನೀಡಿದ್ದಾರೆ.

sulwadi poison accused has got the prisoner number

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಸೇವನೆಯಿಂದ 17 ಮಂದಿ ಮೃತಪಟ್ಟಿದ್ದು, ಈಗಲೂ 41 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+