ಮೈಸೂರಿನ ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯಲ್ಲಿ ಹಾವನ್ನು ರಕ್ಷಿಸಿದ ಸ್ನೇಕ್ ಶ್ಯಾಂ

ಮೈಸೂರು, ಡಿಸೆಂಬರ್ 13 : ಇಂದು ಸುಬ್ರಹ್ಮಣ್ಯ ಷಷ್ಠಿ ಹಬ್ಬದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದ್ದು, ಪ್ರತಿಷ್ಠಿತ ಸಿದ್ದಲಿಂಗಪುರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಸಡಗರದಿಂದ ಷಷ್ಠಿ ಜಾತ್ರೆ ನಡೆಯುತ್ತಿದೆ.

ಸಿದ್ದಲಿಂಗಪುರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೂ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಮುಂಜಾನೆಯಿಂದಲೇ ಅಪಾರ ಜನಸ್ತೋಮ ಹರಿದು ಬರುತ್ತಿದೆ. ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಸರತಿಸಾಲಿನಲ್ಲಿ ನಿಂತು ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆಯುತ್ತಿದ್ದಾರೆ.

ದೇವಾಲಯದಲ್ಲಿ ಷಷ್ಠಿ ಜಾತ್ರೆ ಹಿನ್ನೆಲೆ, ತಾತ್ಕಾಲಿಕವಾಗಿ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಮಧ್ಯರಾತ್ರಿ 12ರವರೆಗೂ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

Subrahmanya Sashti Fair is held today

ಬದಲಿ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಹೆದ್ದಾರಿಯಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಅಂಗಡಿ- ಮುಂಗಟ್ಟುಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿದ್ದು, ಜಾತ್ರೆಗೆ ಪೊಲೀಸ್ ಭದ್ರತೆ ವಹಿಸಲಾಗಿದೆ.

ಅಂದಹಾಗೆ ಮೈಸೂರಿನಲ್ಲಿ ಷಷ್ಠಿ ಹಬ್ಬದ ದಿನವೂ ಉರಗ ತಜ್ಞ ಸ್ನೇಕ್ ಶ್ಯಾಂ ಅವರು ಹಾವನ್ನು ರಕ್ಷಿಸಿದ್ದಾರೆ. ಹೌದು, ಸುಬ್ರಮಣ್ಯಸ್ವಾಮಿ ದೇಗುಲದ ಬಳಿ ಜಾತ್ರೆ ನಡೆಯುತ್ತಿದ್ದು, ಜಾತ್ರೆಯಲ್ಲಿ ಭಕ್ತರ ಮುಂದೆ ಹಾವು ಆಡಿಸುತ್ತಿದ್ದ ವ್ಯಕ್ತಿಯಿಂದ ಸ್ನೇಕ್ ಶ್ಯಾಮ್ ಅವರು ಹಾವನ್ನು ರಕ್ಷಿಸಿದ್ದಾರೆ.

Subrahmanya Sashti Fair is held today

ಹಾಗೆಯೇ ಇದೇ ವೇಳೆ ನಿಜ ನಾಗರಕ್ಕೆ ಹಾಲು ಎರೆಯುತ್ತಿದ್ದ ಭಕ್ತರಿಗೆ ಹಾಲು ಎರೆಯೆದಂತೆ ಮನವಿ ಮಾಡಿ "ಹಾವು ಹಾಲು ಕುಡಿಯುವುದಿಲ್ಲ. ಬೆಣ್ಣೆ, ತುಪ್ಪ, ಹಾಲು ಹಾಕುವುದರಿಂದ ಹಾವು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ದೇವರ ಮೇಲೆ ಭಕ್ತಿ ಇರಲಿ, ಮೂಢನಂಬಿಕೆ ಬೇಡ. ಇತ್ತೀಚಿನ ದಿನಗಳಲ್ಲಿ ಹಾವುಗಳ ವಾಸಸ್ಥಾನ ನಾಶವಾಗುತ್ತಿವೆ. ಹಾವುಗಳು ನಾಶವಾದರೆ ಮಾನವ ಸಂಕುಲಕ್ಕೆ ಕಂಟಕ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+