• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಬೀದಿ ನಾಯಿಗಳಿಗೂ ಸಿಗಲಿದೆ ಮಾನಸಿಕ ಚಿಕಿತ್ಸೆ

|

ಮೈಸೂರು, ಜೂನ್ 1: ಬೀದಿ ನಾಯಿಗಳು ಎಂದರೆ ವಿಚಿತ್ರವಾಗಿ ವರ್ತಿಸಿ ಜನರಿಗೆ ತೊಂದರೆ ನೀಡುವ ಪ್ರಾಣಿಗಳೆಂಬ ಭಾವನೆ ಜನರಲ್ಲಿದೆ. ಆದರೆ ಬೀದಿ ನಾಯಿಗಳು ಹೀಗಾಡಲು ಕಾರಣವೇನು? ಈಪ್ರಾಣಿಗಳಿಗೆ ಈ ರೀತಿಯ ಮನಸ್ಥಿತಿ ಬರಲು ಅವುಗಳ ಮಾನಸಿಕ ಸ್ಥಿಮಿತತೆಯ ಏರುಪೇರು ಕಾರಣ ಎನ್ನುತ್ತಾರೆ ವೈದ್ಯರು.

ಆದ್ದರಿಂದ ಇಂತಹ ಬೀದಿ ನಾಯಿಗಳಿಗೆ ಮಾನಸಿಕ ಚಿಕಿತ್ಸೆಯನ್ನು ನೀಡಿ ಗುಣಪಡಿಸುವ ಯೋಜನೆಯನ್ನು ಮೈಸೂರಿನಲ್ಲಿ ಕಾರ್ಯರೂಪಕ್ಕೆ ತರುತ್ತಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಯತ್ನ ಎಂಬ ಹೆಸರು ಪಡೆದುಕೊಳ್ಳಲಿದೆ.

ಆಸ್ಪತ್ರೆಯ ಆವರಣದಲ್ಲಿ ನವಜಾತ ಶಿಶುವನ್ನು ಕಿತ್ತುತಿಂದ ಬೀದಿ ನಾಯಿಗಳು

ವಿಚಿತ್ರವಾಗಿ ವರ್ತಿಸುವುದು, ಕಚ್ಚಲು ಬರುವುದು, ಇತರ ಪ್ರಾಣಿಗಳಿಗೆ ಕಿರುಕುಳ ನೀಡುವುದು ನಾಯಿಗಳಲ್ಲಿ ಸಹಜ. ಇಂತಹ ನಾಯಿಗಳು ಮಾನಸಿಕ ಖಿನ್ನತೆಯಿಂದ ನರಳುತ್ತಿರುತ್ತವೆ. ಇವು ಅಪಾಯಕಾರಿ ಕೂಡ. ಇದರಿಂದಾಗಿ ಎಷ್ಟೋ ಮಕ್ಕಳ ಮೇಲೆ ದಾಳಿ ನಡೆಸಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದೆಯೇ ಇವೆ. ಆದ್ದರಿಂದ ಇಂತಹ ನಾಯಿಗಳಿಗೆ ಮಾನಸಿಕ ಚಿಕಿತ್ಸೆ ನೀಡುವ ಅವಶ್ಯಕತೆಯನ್ನು ಕಂಡುಕೊಂಡೇ ಮೈಸೂರಿನಲ್ಲಿ ಕೇಂದ್ರವು ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದೆ.

ಖಾಸಗಿಯಾಗಿ ಸಾಕುಪ್ರಾಣಿಗಳ ಆರೈಕೆ ಮಾಡಲು ಸಾಕಷ್ಟು ಚಿಕಿತ್ಸಾ ಕೇಂದ್ರಗಳಿದೆ. ಆದರೆ ಬೀದಿನಾಯಿ, ಅನಾಥ ಪ್ರಾಣಿಗೆ ಚಿಕಿತ್ಸೆ ನೀಡಿ ಅವುಗಳನ್ನು ಯಥಾಸ್ಥಿತಿಗೆ ತರುವುದು ತುಂಬಾ ಅಪರೂಪ. ಹೈದರಾಬಾದ್, ಚೆನ್ನೈ, ಮುಂಬೈ ನಗರಗಳಲ್ಲಿ ಈ ರೀತಿಯ ಕೇಂದ್ರಗಳು ಇವೆ. ಇದೀಗ ಈ ತೆರನಾದ ಕೇಂದ್ರಗಳನ್ನು ಮೈಸೂರಿನಲ್ಲಿ ಸ್ಥಾಪಿಸುವ ಯೋಜನೆಯನ್ನು ಈಗಾಗಲೇ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.

ಮೈಸೂರಿನಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ

ಮೈಸೂರು ನಗರದಲ್ಲಿಯೇ 41 ಸಾವಿರ ಬೀದಿ ನಾಯಿಗಳಿವೆ. ಇವುಗಳನ್ನು ಹಿಡಿದು ಸಂತಾನ ಚಿಕಿತ್ಸೆ ಹಣ ನೀಡುತ್ತಿದ್ದರೂ ಯಾವುದೂ ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಇವುಗಳನ್ನು ಹತೋಟಿಗೆ ತರುವುದು ಮೈಸೂರು ನಗರಪಾಲಿಕೆ ದೊಡ್ಡ ತಲೆನೋವಾಗಿದೆ. ಮಾನಸಿಕ ಚಿಕಿತ್ಸಾ ಕೇಂದ್ರ ಆರಂಭವಾದ ನಂತರ ಇವುಗಳ ಕುರಿತಾಗಿ ದೂರು ನೀಡಿದಲ್ಲಿ, ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ನೀಡಲಾಗುತ್ತದೆ.

ಬೆಂಗಳೂರಲ್ಲಿ ಬೀದಿ ನಾಯಿಗಳಿಗಾಗಿ ಶ್ವಾನ ಶಾಲೆ ನಿರ್ಮಾಣ: ಗಂಗಾಂಬಿಕೆ

ಮಾನಸಿಕ ವೈದ್ಯರು ಇವುಗಳ ವರ್ತನೆಗೆ ಕಾರಣ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಕೆಲವು ದಿನಗಳಲ್ಲಿ ಅವುಗಳು ಯಥಾಸ್ಥಿತಿಗೆ ಬರುತ್ತವೆ. ನಂತರ ಇವುಗಳನ್ನು ಜನರಿಗೆ ದತ್ತು ನೀಡುವ ಪ್ರಯತ್ನವೂ ನಡೆಯುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಮೈಸೂರು ಮಹಾನಗರ ಪಾಲಿಕೆ, ಅನಾಥ ಪ್ರಾಣಿಗಳ ಪುನರ್ವಸತಿ ಕೇಂದ್ರವನ್ನು ಆರಂಭಿಸಲು 5 ಎಕರೆ ಜಾಗವನ್ನು ಈಗಾಗಲೇ ಮೀಸಲಿಟ್ಟಿದೆ. ಮೊದಲ ಹಂತದಲ್ಲಿ 1.4 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ. ಬೀದಿಯಲ್ಲಿ ಅಲೆಯುವ ಪ್ರಾಣಿಗಳಿಗೆ ಆಶ್ರಯ ನೀಡುವುದರ ಜೊತೆಗೆ ಮಾನಸಿಕ ಚಿಕಿತ್ಸಾ ವಿಭಾಗವನ್ನು ಇಲ್ಲಿ ಸ್ಥಾಪಿಸಲಾಗುತ್ತದೆ.

ಸಾಕಷ್ಟು ಸಮಯ ಈ ಅಧಿಕಾರಿಗಳ ತಂಡ ಯೋಜನೆಯ ಕುರಿತಾಗಿ ರೂಪುರೇಷೆಯನ್ನು ಅಧ್ಯಯನ ನಡೆಸಿತ್ತು. ಅದು ಇನ್ನು ಕೆಲವೇ ದಿನಗಳಲ್ಲಿ ಜಾರಿಗೆ ಬರುತ್ತದೆ ಎನ್ನುವುದು ಸಂತಸದ ವಿಚಾರ.

English summary
Street dogs will also get psychological treatment by a specialist at Mysuru. City Corporation is planning to introduce this plan in upcoming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X