ಮೈಸೂರು ಮೃಗಾಲಯಕ್ಕೆ ನೆರವು ಕೇಳಿ ಇನ್ಫೋಸಿಸ್ ಸುಧಾಮೂರ್ತಿಗೆ ಪತ್ರ

ಮೈಸೂರು, ಮೇ 02: ಕೊರೊನಾ ಲಾಕ್ ಡೌನ್ ನಿಂದಾಗಿ ಮೈಸೂರು ಮೃಗಾಲಯವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೆಲವೇ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ‌.ಸೋಮಶೇಖರ್, ಮೃಗಾಲಯಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದರು.

Recommended Video

      ಪೊಲೀಸನ್ನು ಕಾರ್ ಬಾನೆಟ್ ಮೇಲೆ ಕೂರಿಸಿಕೊಂಡು ಹೋಗಿದ್ದಕ್ಕೆ ವ್ಯಕ್ತಿ ಅರೆಸ್ಟ್ | Oneindia Kannada

      ಇದೀಗ ಮೃಗಾಲಯದ ಸಹಾಯಕ್ಕೆ ನಿಲ್ಲಲು ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಡಾ‌.ಸುಧಾಮೂರ್ತಿ ಅವರಿಗೆ ಮನವಿ ಮಾಡಿದ್ದಾರೆ. ಸುಧಾ ಮೂರ್ತಿ ಅವರಿಗೆ ಪತ್ರ ಬರೆದಿರುವ ಜಿಲ್ಲಾ ಉಸ್ತುವಾರಿ ಸಚಿವರು, "ದೇಶದ ಆರ್ಥಿಕತೆಯಲ್ಲಿ ಇನ್ಫೋಸಿಸ್ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಅದೇ ರೀತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮೈಸೂರು ಮೃಗಾಲಯಕ್ಕೆ ಸಹಾಯ ನೀಡಿ" ಎಂದು ಮನವಿ ಮಾಡಿದ್ದಾರೆ.

      ST Somashekhar Written Letter To Infosys Sudha Murthy Asking Help To Mysuru Zoo

      ಮೃಗಾಲಯದ ಪ್ರಾಣಿ, ಪಕ್ಷಿಗಳಿಗೆ ಆಹಾರ ಮತ್ತು ಇನ್ನಿತರೆ ಸೌಲಭ್ಯಗಳಿಗೆ ತೊಂದರೆಯಾಗಿದೆ. ಹೀಗಾಗಿ ಮೃಗಾಲಯಕ್ಕೆ ಆರ್ಥಿಕ ಸಹಾಯ ನೀಡಿ ನೆರವಾಗಿ. ಭಗವಂತನ ಕೃಪೆಯಿಂದ ಮತ್ತಷ್ಟು ಹೆಚ್ಚಿನ ಸೇವೆ ಸಲ್ಲಿಸಲು ನಿಮಗೆ ಆಯಸ್ಸು, ಆರೋಗ್ಯವನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಸೋಮಶೇಖರ್ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+