ಮೈಸೂರಿನಲ್ಲಿ ಯಡಿಯೂರಪ್ಪನ ಪರ ಸೋದರಿ ಮಗನಿಂದ ಪೂಜೆ
ಮೈಸೂರು, ಜುಲೈ 17: ಒಂದೆಡೆ ಸಿಎಂ ಕುಮಾರ ಸ್ವಾಮಿಯವರ ಪರ ನಾಳೆ ವಿಶ್ವಾಸ ಮತ ಯಾಚನೆ ಯಶಸ್ವಿಯಾಗಲಿ ಎಂದು ಪೂಜೆ ನಡೆಯುತ್ತಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಪೂಜೆಗಳು ನಡೆಯುತ್ತಿವೆ.
ಇಂದು ಕೂಡ ಯಡಿಯೂರಪ್ಪ ಅವರ ಸಹೋದರಿಯ ಪುತ್ರ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಗರದ ನಜರ್ ಬಾದ್ ನಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಮೈತ್ರಿ ಸರ್ಕಾರ ಪತನವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಯಡಿಯೂರಪ್ಪ ಅವರ ಸಹೋದರಿಯ ಮಗ ರಾಜೇಶ್ ಪೂಜೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, "ರಾಜ್ಯದಲ್ಲಿ ರಾಜಕೀಯ ಗ್ರಹಣ ಹೋಗಲಿ. ಯಡಿಯೂರಪ್ಪನವರ ನೇತೃತ್ವದ ಹೊಸ ಸರ್ಕಾರ ಬರಲಿ. ನಮ್ಮೆಲ್ಲರ ಆಶಯದಂತೆ ಬಿಜೆಪಿ ಸರ್ಕಾರ ರಚನೆಯಾಗಲಿ" ಎಂದರು.












Click it and Unblock the Notifications