ನಿಮ್ಮ ಮೊಬೈಲ್ ಗೆ ಬರಲಿದೆ ಗುಡುಗು-ಮಳೆಯ ಸಂಪೂರ್ಣ ಮಾಹಿತಿ
ಮೈಸೂರು, ಏಪ್ರಿಲ್ 27 : ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸಿ ನೈಸರ್ಗಿಕ ವಿಕೋಪದಿಂದಾಗುವ ಅನಾಹುತವನ್ನು ತಲುಪಿಸುವ ನಿಟ್ಟಿನಲ್ಲಿ ನೂತನ ವ್ಯವಸ್ಥೆ ಜಾರಿಗೆ ತರಲು ಮೈಸೂರು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಕಳೆದ ಕೆಲವು ದಿನಗಳಿಂದಮಳೆ, ಸಿಡಿಲು ಮುನ್ಸೂಚನೆಯನ್ನು ನೀಡುತ್ತಿದ್ದು ಇದು ಬಹುತೇಕ ನಿಜವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೂ ಇಂತಹ ಮಾಹಿತಿಯನ್ನು ತಲುಪಿಸುವ ಕುರಿತು ಮಾತುಕತೆ ಮುಂದಾಗಿದೆ.
ಮಳೆ - ಗುಡುಗಿನ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಮಳೆ, ಬಿರುಗಾಳಿ, ಚಂಡಮಾರುತ, ಸುನಾಮಿ, ಸಿಡಿಲು ಮುಂತಾದ ನೈಸರ್ಗಿಕ ವಿಕೋಪ ಮಾಹಿತಿಯನ್ನು ಮುಂಚಿತವಾಗಿ ಪಡೆಯುತ್ತಿದ್ದ ಇವುಗಳನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೊಬೈಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಸುಮಾರು ಮೂರು ಗಂಟೆಗಳ ಮುನ್ನವೇ ಯಾವ ಪ್ರದೇಶದಲ್ಲಿ ಸಿಡಿಯು ಬಡಿಯಲಿದೆ, ಎಲ್ಲಿ ಮಳೆಯಾಗಲಿದೆ ? ಮಳೆಯ ಪ್ರಮಾಣ ಎಷ್ಟಿರಲಿದೆ ? ಅನ್ನುವ ಕುರಿತು ಖಚಿತ ಮಾಹಿತಿಯನ್ನುವಿಕೋಪ ಉಸ್ತುವಾರಿ ಇಲಾಖೆ ನೀಡುತ್ತಿದೆ.

ಆದರೆ ಬಹುತೇಕ ಜಿಲ್ಲೆಗಳಲ್ಲಿ ಈ ಮಾಹಿತಿ ಜಿಲ್ಲಾಡಳಿತದಲ್ಲಿಯೇ ಉಳಿಯುತ್ತಿದೆ. ಇದು ಜನಸಾಮಾನ್ಯರಿಗೆ ತಲುಪಿಸುವವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ರವರು , ಕೆಲ ದಿನಗಳಿಂದ ಇಂತಹ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಳೆ ಹಾಗೂ ಸಿಡಿಲಿನ ಮುನ್ಸೂಚನೆ ಬರಲಾಗುತ್ತಿದ್ದು, ವಿಶೇಷವೆಂದರೆ ಮೂರು ಗಂಟೆಗೆ ಮುನ್ನವೇ ಹೊರಬರುವ ಮಾಹಿತಿ ನಿಜವಾಗುತ್ತಿದೆ.
ಮೂರು ಗಂಟೆಗೆ ಮುನ್ನವೇ ಮಳೆ - ಗುಡುಗಿನ ಕುರಿತು ಜಿಲ್ಲಾಡಳಿತದಿಂದ ಮುನ್ಸೂಚನೆಹೊರಬರುತ್ತಿರುವುದು ವಾಹನ ಸವಾರರಿಗೆ ವರದಾನವಾಗಲಿದೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಮಳೆ ಬಂದಾಗ ಟ್ರಾಫಿಕ್ ಜಾಮ್ ಕಾಣಿಸಿಕೊಳ್ಳುತ್ತದೆ. ಮಳೆ ನಿಂತ ನಂತರವೂ ಗೋಳು ಮುಂದುವರಿಯಲಿದೆ.
ಮಳೆಯಲ್ಲಿ ಸಿಲುಕಿ ದ್ವಿಚಕ್ರ ವಾಹನ ಸವಾರರು ಪರದಾಡುವುದು ಸಾಮಾನ್ಯ ದೃಶ್ಯವಾಗಿತ್ತು. ಆದರೆ ಹವಾಮಾನ ಮುನ್ಸೂಚನೆ ದೊರೆತಲ್ಲಿ ವಾಹನ ಸವಾರರು ಮುಂಚಿತವಾಗಿ ಮನೆ ಸೇರಿಕೊಳ್ಳಬಹುದು.ಇದರಿಂದ ಟ್ರಾಫಿಕ್ ಜಾಮ್ ಹಾಗೂ ಅನಾಹುತವನ್ನು ತಪ್ಪಿಸಿಕೊಳ್ಳಬಹುದು. ಇದೀಗ ಜಿಲ್ಲಾಧಿಕಾರಿಗಳಿಗೆ ಕಾಲಕ್ಕೆ ಬರುತ್ತಿರುವುದು ಇದಕ್ಕೂ ಅನುಕೂಲವಾಗುತ್ತಿದೆ
ಇನ್ನು ಈ ಮಾಹಿತಿಯನ್ನುಸಾಮಾನ್ಯರ ಮೊಬೈಲ್ ಗೂ ತಲುಪಿಸುವ ವ್ಯವಸ್ಥೆ ಆಗಬೇಕಾಗಿದೆ. ಆಸಕ್ತರ ಮೊಬೈಲ್ ಗೆ ನೇರವಾಗಿ ತಲುಪಬೇಕಾಗಿದೆ. ಆದರೆ ಎಸ್ಎಂಎಸ್ ಅಲರ್ಟ್ ಗೆ ವೆಚ್ಚವಾಗುವುದರಿಂದ ಯಾರು ಭರಿಸುವುದು ಎನ್ನುವ ಪ್ರಶ್ನೆ ಹಾಗೂ ಉಚಿತವಾಗಿ ತಲುಪುವ ಸಾಧ್ಯತೆ ಕುರಿತು ಪರಿಶೀಲನೆ ನಡೆಯುತ್ತಿದೆ. ಇನ್ನು ಮಾಹಿತಿ ತಲುಪಿಸುವ ಕುರಿತು ಜಿಲ್ಲಾಧಿಕಾರಿಅಭಿರಾಮ್ ಶಂಕರ್ ರವರು ತಾವೇ ನೈಸರ್ಗಿಕ ವಿಕೋಪ ಉಸ್ತುವಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿಯೂ ತಿಳಿಸಿದ್ದಾರೆ.












Click it and Unblock the Notifications