ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಕಾರಣಕ್ಕೆ ಮಡಿಕೇರಿಯಿಂದ ಎಚ್.ಡಿ.ಕೋಟೆಗೆ ಶಿಫ್ಟ್‌ ಆಯ್ತಾ ಸೋನಿಯಾ ವಾಸ್ತವ್ಯ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು,ಅಕ್ಟೋಬರ್ 3 : ಇತ್ತೀಚೆಗೆ ಮಡಿಕೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದ್ದ ಸಂದರ್ಭ ಮೊಟ್ಟೆ ಎಸೆತ ಸೇರಿದಂತೆ ಅಹಿತಕರ ಘಟನೆಗಳು ಸಂಭವಿಸಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ವಾಸ್ಯವ್ಯ ಹೂಡುವ ಜಾಗವನ್ನು ಎಚ್.ಡಿ.ಕೋಟೆಗೆ ಬದಲಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕಬಿನಿ ಹಿನ್ನೀರಿನಲ್ಲಿರುವ ಆರೆಂಜ್ ಕೌಂಟಿ ಹೋಟೆಲ್‌ನಲ್ಲಿ ಸೋಮವಾರ ಸಂಜೆ ವಾಸ್ತವ್ಯ ಹೂಡಿದ್ದಾರೆ. ಎಚ್.ಡಿ. ಕೋಟೆ ತಾಲೂಕಿಗೆ ಆಗಮಿಸಿದ ಸೋನಿಯಾಗಾಂಧಿ ಅವರನ್ನು ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಇನ್ನಿತರ ಸ್ಥಳೀಯ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು. ಪಕ್ಷದ ವರಿಷ್ಠರು ತಮ್ಮ ಕ್ಷೇತ್ರದಲ್ಲಿ 2ನೇ ಬಾರಿ ಉಳಿಯುತ್ತಿರುವುದು ಸಂತೋಷದ ವಿಚಾರ. ವಾಸ್ತವ್ಯದ ದೃಷ್ಟಿಯಿಂದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಎಚ್.ಡಿ.ಕೋಟೆಯಲ್ಲಿ ವಾಸ್ತವ್ಯವಿರುವ ಸೋನಿಯಾ ಗಾಂಧಿ ಅಕ್ಟೋಬರ್ 6ರಂದು ಪಾಂಡವಪುರ ತಾಲೂಕಿನ ಬೆಲ್ಲಾಳೆ ಗ್ರಾಮದಿಂದ ಆರಂಭವಾಗುವ ಭಾರತ್ ಐಕ್ಯತಾ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಭಾರತ್ ಜೋಡೋ ಯಾತ್ರೆ: ಒಂದೇ ದಿನದಲ್ಲಿ ಮಠ, ಮಸೀದಿ, ಚರ್ಚ್‌ಗೆ ರಾಹುಲ್ ಗಾಂಧಿ ಭೇಟಿಭಾರತ್ ಜೋಡೋ ಯಾತ್ರೆ: ಒಂದೇ ದಿನದಲ್ಲಿ ಮಠ, ಮಸೀದಿ, ಚರ್ಚ್‌ಗೆ ರಾಹುಲ್ ಗಾಂಧಿ ಭೇಟಿ

ಪೊಲೀಸ್ ಬಿಗಿ ಭದ್ರತೆ

ಸೋನಿಯಾಗಾಂಧಿ ಆಗಮನದ ಹಿನ್ನೆಲೆಯಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಮುಂಚಿತವಾಗಿಯೇ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಛಾಯಾಚಿತ್ರ ತೆಗೆಯುವುದನ್ನೂ ನಿಷೇಧಿಸಲಾಗಿತ್ತು. ಮಾತ್ರವಲ್ಲದೇ ಕೆಲಸ ಮಾಡುವ ಸಿಬ್ಬಂದಿಯ ಮೊಬೈಲ್ ಸೀಜ್ ಮಾಡಲಾಗಿತ್ತು. ಮೈಸೂರಿನಿಂದ ಜೀರೊ ಟ್ರಾಫಿಕ್‌ನಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಪಿ ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿ ರಕ್ಷಣೆ ಒದಗಿಸಿದರು.

Sonia Gandhi will Stay In a Resort In Kabini Instead of Madikeri

ಮೈಸೂರು-ಮಾನಂದವಾಡಿ ರಸ್ತೆಯ ಮೂಲಕ ಎಚ್.ಡಿ. ಕೋಟೆ ತಾಲೂಕಿನ ಹ್ಯಾಂಡ್‌ ಪೋಸ್ಟ್, ಅಂತರಸಂತೆ, ಕಾರಾಪುರ ಜಂಗಲ್ ಲಾಡ್ಜ್‌ಗೆ ಬಂದರು. ನಂತರ ವಿಶೇಷ ಬೋಟ್ ಮುಖಾಂತರ ಕಬಿನಿ ಹಿನ್ನೀರಿನಲ್ಲಿರುವ ಆರೆಂಜ್ ಕೌಂಟಿ ಹೋಟೆಲ್‌ಗೆ ತೆರಳಿ ವಾಸ್ತವ್ಯ ಹೂಡಿದರು. ಆರೆಂಜ್ ಕೌಂಟಿಗೆ ತೆರಳುವ ಮಾರ್ಗದ ರಸ್ತೆ ತೀರಾ ಹದಗೆಟ್ಟಿರುವ ಕಾರಣ ಕಾರಾಪುರ ಜಂಗಲ್ ಲಾಡ್ಜ್ ಮೂಲಕ ಅಲ್ಲಿಂದ ಆರೆಂಜ್ ಕೌಂಟಿ ರೆಸಾರ್ಟ್‌ಗೆ ತೆರಳಿದರು.

ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಅಗ್ರಗಣ್ಯ ಮುಖಂಡರೆಲ್ಲರೂ ಸೇರಿದ್ದಾರೆ. ಈ ಸಂದರ್ಭದಲ್ಲಿ ಸದ್ಯದಲ್ಲಿಯೇ ನಡೆಯಲಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ವಿಚಾರ ಹಾಗೂ ರಾಜ್ಯದ ಮುಖಂಡರೊಂದಿಗೆ ಸ್ಥಳೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.

English summary
Congress President Sonia Gandhi reach to Mysuru on Monday (Oct 03) for participate Bharat Jodo Yatra, she will stay in Kabai resort instead of Madikeri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X