ಚೂಡಿದಾರ ಧರಿಸುವ ವಿಚಾರಕ್ಕೆ ಜಗಳವಾಗಿ ನೇಣಿಗೆ ಶರಣಾದ ಅಕ್ಕ-ತಂಗಿ
ಮೈಸೂರು, ಆಗಸ್ಟ್ 31: ಬಟ್ಟೆ ಧರಿಸುವ ವಿಚಾರಕ್ಕಾಗಿ ಜಗಳವಾಡಿ ಮನನೊಂದ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮೈಸೂರಿನ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಕಾಳಬಸವಹುಂಡಿ ಗ್ರಾಮದ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾದ ಅನು(16) ಹಾಗೂ ಕವಿತಾ (30) ಮೃತ ಸಹೋದರಿಯರು. ಚೂಡಿದಾರಕ್ಕಾಗಿ ಎಸ್‍ಎಸ್‍ಎಲ್ ಎಸಿ ಓದುತ್ತಿದ್ದ ಅನು ಮೂಗಿಯಾಗಿದ್ದ ಅಕ್ಕ ಕವಿತಾಳೊಂದಿಗೆ ಜಗಳವಾಡಿದ್ದಳು. ಇದರಿಂದ ಮನನೊಂದ ಅನು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನು ಅನು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಮೃತದೇಹದ ಮುಂದೆ ರೋಧಿಸುತ್ತಿದ್ದರು.
ಈ ವೇಳೆ ಹಿತ್ತಲಿಗೆ ಹೋದ ಕವಿತಾ ಕೇಬಲ್ ವೈರ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರ ಮೃತ ದೇಹವನ್ನು ತಲಕಾಡು ಸಮುದಾಯ ಆಸ್ಪತ್ರೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ
ಗೋವುಗಳನ್ನು ಉಳಿಸಲು ಹೋಗಿ ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿಯಾದ ಘಟನೆ ಮೂಡಿಗೆರೆ-ಬಾಳೆಹೊನ್ನೂರು ಮಾರ್ಗದಲ್ಲಿ ಸಂಭವಿಸಿದೆ. ಡಿಕ್ಕಿಯಾದ ಪರಿಣಾಮ ಬಸ್ ಮೇಲೆ ಲೈಟ್ ಕಂಬ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಲೈಟ್ ಕಂಬಕ್ಕೆ ಗುದ್ದಿದ ಬಸ್ ಆನಂತರ ಚರಂಡಿಗೆ ಇಳಿದಿದೆ. ಬಸ್ ನಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಮೂಡಿಗೆರೆಯ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.












Click it and Unblock the Notifications