ಮೈಸೂರು ದಸರಾದಲ್ಲಿ ಮೋಡಿ ಮಾಡಿದ ಎ.ಆರ್ ರೆಹಮಾನ್ & ವಿಜಯ್ ಪ್ರಕಾಶ್
ಮೈಸೂರು, ಅಕ್ಟೋಬರ್ 10: ಮೈಸೂರು ದಸರಾ ಆರಂಭವಾಗಿ ಎಂಟು ದಿನಗಳಾಗಿವೆ. ಪೂಜೆ ಪುನಸ್ಕಾರಗಳ ಜೊತೆಗೆ ಪ್ರತಿ ದಿನವು ಒಂದಲ್ಲಾ ಒಂದು ವಿಶೇಷ ಆಚರಣೆ, ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಯುವ ದಸರಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು ತಮ್ಮ ಹಾಡಿನ ಮೂಲಕವೇ ನೆರೆದಿದ್ದವರನ್ನು ಬೆರಗುಗೊಳಿಸಿತು. ಸಂಗೀತದ ಅದ್ಭುತ ಕ್ಷಣಕ್ಕೆ ಜನಸ್ತೋಮ ಸಾಕ್ಷಿ ಆಯಿತು.
ಹೌದು, ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದ ಹೊರ ಭಾಗದ ಉತ್ತನಹಳ್ಳಿ ಆವರಣದಲ್ಲಿ ಯುವ ದಸರಾದ 4 ನೇ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದು ಸಂಗೀತ, ಗಾಯನದ ಮೂಲಕ ಅದ್ದೂರಿ ಯಶಸ್ವಿ ಕಂಡಿತು. ಖ್ಯಾತ ಸುಪ್ರಸಿದ್ಧ ಸಂಗೀತ ನಿರ್ದೇಶಕರು ಮತ್ತು ಸಂಯೋಜಕರಾದ ಎ.ಆರ್ ರೆಹಮಾನ್ ಕಂಠ ಸಿರಿಯೂ ಯುವ ದಸರಾ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತುಂಬಿದ್ದನ್ನು ಸಹಸ್ರಾರು ಜನ ಕಣ್ತುಂಬಿಕೊಂಡರು.

ಎಆರ್ ರೆಹಮಾಣ್ ಅವರು, ಜೈ ಹೊ...ಹಾಡನ್ನು ಹಾಡುತ್ತ ವೇದಿಕೆ ಬಂದು ಎಲ್ಲರನ್ನು ತಲ್ಲಣಗೊಳಿಸಿದರು. ನೋಡುಗರ ಎದ್ದೆ ಜಲ್ಲೆನಿಸುವಂತೆ ಮಾಡಿದರು. ದೇಶ ಭಕ್ತಿ ಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿ ರೋಮಾಂಚನಗೊಳಿಸಿದರು. ಅವರು ಒಂದೊಂದು ಹಾಡಿಗೆ ನೆರೆದಿದ್ದ ಯುವ ಸಮೂಹ ಕೇಕೆ ಹಾಕುತ್ತ ಕುಣಿದು ಕುಪ್ಪಳಿಸಿತು.
ಎ .ಆರ್ ರೆಹಮಾನ್ ಅವರ ಕಂಠದಿಂದ ಮೂಡಿಬಂದ ಧಮ್ ದಾರ ಧಮ್ ದಾರ ಮಾಸ್ತು ಧಮ್ ದಾರ ಗೀತೆಗೆ ಪ್ರೇಕ್ಷಕರು ಸಂಭ್ರಮವನ್ನು ಇಮ್ಮಡಿಗೊಳಿಸಿತು. ಅಲ್ಲದೇ ಡ್ಯಾನ್ಸಿಂಗ್ ಸ್ಟಾರ್ ಪ್ರಭು ದೇವ ಅವರ ಚಿತ್ರದ ಹಾಡಿಗೆ ಸಾರ್ವಜನಿಕರು ಮನಸೋತರು ಎಂದರೆ ತಪ್ಪಾಗಲಾರುದ.
ಸಂಗೀತ ವಲಯದಲ್ಲಿ ಸಾಕಷ್ಟು ಹೆಸರು ಮಾಡಿರುವ ರೆಹಮಾನ್ ಅವರು ಅನೇಕ ಗೀತೆ ಹಾಡಿದ್ದಾರೆ. ಈ ಬಾರಿ ದಸರಾದಲ್ಲಿ ಲೈವ್ ವೀಕ್ಷಣೆ ಮಾಡಿ ಖುಚಿಪಟ್ಟಿದ್ದಾರೆ. ವೇದಿಕೆಯಲ್ಲಿ ವಿರಪಂಡಿಯನ್ ಚಿತ್ರದ ಗೀತೆಗೆ ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಧ್ವನಿ ಗೂಡಿಸಿದರು.
ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಅವರ ಮಧುರ ಕಂಠಕ್ಕೆ ಬೆರಗುಗೊಂಡ ವೇದಿಕೆ ಮುಂಭಾಗದ ಜನರು ಹೆಜ್ಜೆ ಹಾಕಿದರು. ಅಲ್ಲದೇ ಅವರು ನಾಟ್ಯ ಮಾಡುತ್ತಲೇ ಹಾಡಿದ್ದು, ಯುವ ಮನಸ್ಸಿಗೆ ಇಳಿಯಿತು.
ಇವರು ಮಾತ್ರಲ್ಲದೇ ತಮ್ಮ ಮಾಧುರ್ಯ ಕಂಠದಿಂದ ಕನ್ನಡದ ಸಾಕಷ್ಟು ಹಾಡುಗಳನ್ನು ಹಾಡಿ ಪ್ರಖ್ಯಾತರವಾಗಿರುವ ಗಾಯಕ ವಿಜಯ್ ಪ್ರಕಾಶ್ ಅವರು ಪಲ್.ಪಲ್ ಹೆ ಬಾರಿ ಗೀತೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ರಾಮ ನಿನ್ನ ಮನದಲ್ಲಿ ರಾಮ ನನ್ನ ಮನದಲ್ಲಿ ಎಂಬ ಹಾಡು ಹಾಡಿದರು. ಅವರ ಸುಮಧುರ ಕಂಠದಿಂದ ಹಾಡು ಮೈಸೂರು ಜನರನ್ನು ಸಂಗೀತದಲ್ಲಿ ತೇಲುವಂತೆ ಮಾಡಿತು. ಇವರೊಂದಿಗೆ ವಿವಿಧ ಭಾಷೆಗಳಲ್ಲಿ ಗಾಯಕಿ ಶ್ವೇತಾ ಮೋಹನ್ ಅವರ ಧ್ವನಿಗೂಡಿಸಿ ಸಾಥ್ ಕೊಟ್ಟರು.
ಕಾರ್ಯಕ್ರಮದಲ್ಲಿ ಹಿಂದಿಯ ಹಲವು ಹಾಡುಗಳು ಮೊಳಗಿದವು. ಇನ್ನೂ ಸುಮಾರು 20 ಕ್ಕಿಂತ ಹೆಚ್ಚಿನ ವಿವಿಧ ತಮಿಳು ಹಿಂದಿ ಕನ್ನಡ ಗೀತೆಗಳ ಮೂಲಕ ಎ ಅರ್ ರೆಹಮಾನ್ ಮತ್ತು ತಂಡದ ಗಾಯಕರು ಯುವ ಜನತೆಯ ಗಮನ ಸೆಳೆದಿದ್ದು ಕಂಡು ಬಂತು.
ಯುವ ದಸರಾ: ಸಂಗೀತ ಆಲಿಸಲು ಬಂತು ಜನಸಾಗರ
ಇಬ್ಬುರು ಖ್ಯಾತ ಗಾಯಕರು ಯುವ ದಸರಾ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವುದು ಗೊತ್ತಾಗುತ್ತಿದ್ದಂತೆ ಸಂಗೀತಾಸಕ್ತರು ದೌಡಾಯಿಸಿದರು. ನಾಲ್ಕನೇ ದಿನದ ಯುವ ದಸರಾ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಹಿಂದೆಂದೂ ನೋಡಿರದ ರೀತಿಯಲ್ಲಿ ಜನರು ಆಗಮಿಸಿದ್ದು ವಿಶೇಷವಾಗಿತ್ತು.
ಹೀಗೆ ಜನಸಾಗರ ಹರಿದು ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ವಹಿಸಿದ್ದರು. ಆದರೆ ಕೆಲವು ಭಾರಿ ಜನರನ್ನು ನಿಭಾಯಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟರು. ಕಾರ್ಯಕ್ರಮವಿದ್ದ ಆವರಣ, ಹತ್ತಿರ ರಸ್ತೆಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.












Click it and Unblock the Notifications