ಪಂಚಾಯಿತಿ ಚುನಾವಣೆ; ಅಭ್ಯರ್ಥಿಯಿಂದ ಬೆಳ್ಳಿ ದೀಪ ವಿತರಣೆ
ಮೈಸೂರು, ಡಿಸೆಂಬರ್ 27: ಮೈಸೂರಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಮನೆ-ಮನೆಗೆ ಬೆಳ್ಳಿ ದೀಪಗಳನ್ನು ವಿತರಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶಾಸಕರಾದ ಜಿ. ಟಿ. ದೇವೇಗೌಡ ಅವರ ಸ್ವ ಗ್ರಾಮದಲ್ಲಿ ಇಂತಹ ಆರೋಪವನ್ನು ಮಾಡಲಾಗುತ್ತಿದೆ.
ಮೈಸೂರು ತಾಲೂಕು ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಅಭ್ಯರ್ಥಿ ರವಿ ಇ. ಪಿ. ಅವರು ಬೆಳ್ಳಿಯ ದೀಪವನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮತದಾರರ ಪ್ರತಿ ಮನೆಗೆ ದೀಪ ಹಂಚಿಕೆಯನ್ನು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ.
Gram Panchayat polls 2020 Voting Live: ಪಂಚಾಯಿತಿ ಫೈಟ್; 2ನೇ ಹಂತದ ಮತದಾನ
ಚುನಾವಣೆಗೆ ಸ್ಪರ್ಧಿಸಿರುವ ಇತರ ಅಭ್ಯರ್ಥಿಗಳು ಈ ಅಕ್ರಮದ ಬಗ್ಗೆ ಚುನಾವಣಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಸುಮಾರು 500 ಬೆಳ್ಳಿ ದೀಪಗಳನ್ನು ಹಂಚಿರುವ ಆರೋಪವನ್ನು ಮಾಡಲಾಗಿದೆ. ದೀಪ ಹಂಚಿಕೆ ಮಾಡಿರುವ ಗ್ರಾಮ ಶಾಸಕ ಜಿ. ಟಿ. ದೇವೇಗೌಡ ಅವರ ಸ್ವಗ್ರಾಮವಾಗಿದೆ.
ಮತದಾನ ಮಾಡಿದ ಅಭ್ಯರ್ಥಿ ಭಿಕ್ಷುಕ ಅಂಕ ನಾಯಕ; ಗೆಲುವಿನ ವಿಶ್ವಾಸ
ಮತದಾನ ಬಹಿಷ್ಕಾರ; ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ ಹಿನ್ನಲೆ ಇಮ್ಮಾವು ಗ್ರಾಮದಲ್ಲಿ ನೀರವ ಮೌನವಿದೆ. ಅಧಿಕಾರಿಗಳು ಮತಗಟ್ಟೆಯನ್ನೂ ತೆರೆದಿಲ್ಲ. ಮತದಾನ ನಡೆಯಬೇಕಿದ್ದ ಶಾಲೆಗೆ ಬೀಗವನ್ನು ಹಾಕಲಾಗಿದೆ.
ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!
ಏಷಿಯನ್ ಪೈಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗ ಭರವಸೆ ಈಡೇರದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಬರುವ ಗ್ರಾಮ ಇಮ್ಮಾವು.