ಸಿಎಂ ಯಡಿಯೂರಪ್ಪಗೆ ಧಮ್ ಇಲ್ಲ: ಸಿಡಿದ ಸಿದ್ಧರಾಮಯ್ಯ
ಮೈಸೂರು, ಜೂನ್ 19: 'ಸಿಎಂ ಯಡಿಯೂರಪ್ಪಗೆ ಧಮ್ ಇಲ್ಲ' ಹೀಗೆಂದು ಹೇಳಿರುವುದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ. ಮೈಸೂರಿನಲ್ಲಿ ಇಂದು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡರು.
Recommended Video
''ಪ್ರಧಾನಿ ಮೋದಿ ಹೇಳಿದ ಹಾಗೆ ಯಡಿಯೂರಪ್ಪ ಕುಣಿಯುತ್ತಾರೆ. ಯಡಿಯೂರಪ್ಪಗೆ ಧಮ್ ಇಲ್ಲ. ಕೇಂದ್ರದಿಂದ ಬರಬೇಕಾದ ಹಣ ತೆಗೆದುಕೊಂಡು ಬರಲು ಅವರಿಗೆ ಆಗುತ್ತಿಲ್ಲ. ಅವರಿಗೆ ಧಮ್ ಇದ್ದಿದ್ದರೆ, ನಮಗೆ ಬರಬೇಕಾದ ಹಣ ಬರುತ್ತಿತ್ತು'' ಎಂದು ಸಿದ್ಧರಾಮಯ್ಯ ಗುಡುಗಿದ್ದಾರೆ.
ಕೇಂದ್ರ ಹಾಗೂ ಸರ್ಕಾರದ ಹೊಸ ನಿಯಮಗಳನ್ನು ಸಿದ್ಧರಾಮಯ್ಯ ಟೀಕೆ ಮಾಡಿದ್ದಾರೆ. ಕಚ್ಚಾ ತೈಲ ಬೆಲೆ ಇಳಿಕೆ, ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆಗಳನ್ನು ವಿರೋಧ ಮಾಡಿದ್ದಾರೆ. ಮುಂದಿನ ದಿನದಲ್ಲಿ ಜೈಲ್ ಭರೋ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಚ್ಚಾ ತೈಲದ ಬೆಲೆ ಕಡಿಮೆ ಆಗಿದ್ದರೂ, ಪೆಟ್ರೋಲ್ ಬೆಲೆ ಇಳಿಸುತ್ತಿಲ್ಲ. ಅವರಿಗೆ ಬಡವರ ಕಷ್ಟ ತಿಳಿಯುವುದಿಲ್ಲ. ಹಾಗೆ ನೋಡಿದರೆ, ಕಚ್ಚಾ ತೈಲದ ದರದ ಪ್ರಕಾರ ಇವತ್ತಿನ ಪೆಟ್ರೋಲ್ ಬೆಲೆ 25 ರಿಂದ 30 ರೂಪಾಯಿ ಇರಬೇಕಿತ್ತು ಎಂದಿದ್ದಾರೆ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷಗಳನ್ನು ಎದುರಿಸಲು ಶಕ್ತಿ ಇಲ್ಲ. ಇದು ಪ್ರಜಾಪ್ರಭುತ್ವ ಸರಕಾರ ಅಲ್ಲ. ಹೀಗಾಗಿ ಕಲಾಪ ಕರೆಯುತ್ತಿಲ್ಲ ಎಂದು ಸಿದ್ಧರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.












Click it and Unblock the Notifications