Siddaramaiah: ಪ್ರಚಾರ ಅಖಾಡಕ್ಕೆ ಮೊಮ್ಮಗ ಧವನ್‌ ರಾಕೇಶ್‌ ಜೊತೆ ಬಂದ ಸಿದ್ದರಾಮಯ್ಯ

ಮೈಸೂರು, ಏಪ್ರಿಲ್‌ 18: ಮೈಸೂರಿನಲ್ಲಿ ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಅವರ ಮೊಮ್ಮಗ, ರಾಕೇಶ್‌ ಸಿದ್ದರಾಮಯ್ಯ ಅವರ ಮಗ ಧವನ್‌ ರಾಕೇಶ್‌ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

ಬುಧವಾರ ವರುಣಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೀಗಾಗಿ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಈ ವೇಳೆ ಮಾಧ್ಯಮದವರ ಮುಂದೆ ಬಂದಾಗ ಅವರು ತಮ್ಮ ಮೊಮ್ಮಗನನ್ನು ಕರೆತಂದಿದ್ದರು. ಸಿದ್ದರಾಮಯ್ಯ ಅವರ ಕೈಗೆ ಇನ್‌ಫೆಕ್ಷನ್‌ ಆಗಿತ್ತು. ಹಾಗಾಗಿ ಕೈ ಹೂತ ಬಂದಿತ್ತು. ಈ ಕಾರಣಕ್ಕೂ ಈ ವೇಳೆ ಧವನ್‌ ರಾಕೇಶ್‌ ಬಂದಿರಬಹುದು ಎಂದು ಕೆಲವರು ಮಾತನಾಡಿಕೊಂಡರು.

Siddaramaiah came with his grandson Dhawan Rakesh during the campaign for Varuna Constituency

ಮಂಗಳವಾರ ಸಿದ್ದರಾಮಯ್ಯ ಜೊತೆ ಧವನ್‌ ರಾಕೇಶ್‌ ಕೂಡ ಬಂದಿದ್ದರು. ರಾಕೇಶ್‌ ಸಿದ್ದರಾಮಯ್ಯ ಅವರು ಜುಲೈ 30 2016ರಲ್ಲಿ ಬೆಲ್ಜಿಯಂನಲ್ಲಿ ನಿಧನ ಹೊಂದಿದ್ದರು. ಈಗ ಅವರ ಮಗ ರಾಕೇಶ್‌ಗೆ 17 ವರ್ಷ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ತಾತಾ ಸಿದ್ದರಾಮಯ್ಯ ಜೊತೆ ರಾಕೇಶ್‌ ಅವರ ಮಗ ಧವನ್‌ ರಾಕೇಶ್‌ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ತಮ್ಮ ಜೊತೆ ಬಂದಿದ್ದ ಧವನ್‌ ರಾಕೇಶ್‌ ಬಗ್ಗೆ ಮಾಧ್ಯದವರು ಕೇಳಿದ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಸಿದ್ದರಾಮಯ್ಯ, ಅವನಿಗೆ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವ ಆಸಕ್ತಿ ಇದೆ. ಅವನಿಗೆ ಈಗ ಬರಿ 17 ವರ್ಷ ಪಿಯುಸಿ ಓದುತ್ತಿದ್ದಾನೆ ಅಷ್ಟೆ. ನಾನು ಆಚೆ ಹೋಗುತ್ತಿದ್ದಾಗ ನಾನು ಬರುತ್ತೇನೆ ಎಂದ ಆಗ ಬಾರಪ್ಪ ಎಂದೆ ಎಂದು ಸಿದ್ದರಾಮುಯ್ಯ ತಿಳಿಸಿದರು.

ಮುಂದುವರಿದ ಸಿದ್ದರಾಮಯ್ಯ ರಾಜಕೀಯ ಅವನಿಗೆ ಆಸಕ್ತಿ ಇದೆ. ನಾಮಪತ್ರ ಸಲ್ಲಿಕೆ, ಪ್ರಚಾರ ಇವುಗಳ ಬಗ್ಗೆ ತಿಳಿದುಕೊಳ್ಳಲಿ. ಇದು ಅವನದೇ ಆಸಕ್ತಿ ನಾನು ಯಾರನ್ನು ಪ್ರಚಾರಕ್ಕೆ ಕರೆತರಲ್ಲ. ನಾನು ಯಾರನ್ನು ಪ್ರಚಾರಕ್ಕೆ ಕುಟುಂಬದವರನ್ನು ಪ್ರಚಾರಕ್ಕೆ ಬರಲಿ ಎಂದು ಕರೆಯೊಲ್ಲಾ, ನನ್ನ ಮೊಮ್ಮಗ ಅವನಾಗೆ ಬಂದರೆ ಬರಲಿ ಎಂದು ಹೇಳಿದರು.

Siddaramaiah came with his grandson Dhawan Rakesh during the campaign for Varuna Constituency

ಅವನು ರಾಜಕೀಯಕ್ಕೆ ಬರುವುದು ಸಹಜವಾಗೇ ನನಗೆ ಖುಷಿ ಇದೆ. ಯಾಕೆಂದ್ರೆ ಅದೇ ರಕ್ತ. ಮೊಮ್ಮಗ ರಾಜಕೀಯಕ್ಕೆ ಬರುವುದು ನನಗೂ ಖುಷಿ, ಅವರಪ್ಪ ಅಂದರೆ ರಾಕೇಶ್‌ಗೆ ರಾಜಕೀಯ ತುಂಬಾ ಆಸಕ್ತಿ ಇತ್ತು. ಅವನು ಮೈಸೂರು ಜಿಲ್ಲೆ ವರುಣಾ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಈ ಎಲ್ಲವನ್ನು ನೋಡಿಕೊಳ್ಳುತ್ತಿದ್ದ. ಎಲ್ಲವನ್ನು ನೋಡಿಕೊಳ್ಳುತ್ತಿದ್ದ. ಅದರಂತೆ ನನ್ನ ಮೊಮ್ಮನದ್ದು ಅದೇ ರಕ್ತ ಅಲ್ವಾ ಎಂದು ಸಿದ್ದರಾಮಯ್ಯ ನಕ್ಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+