• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ, ಅಮಿತ್ ಶಾರಿಂದ ಮೈಸೂರಿನಲ್ಲಿ ಭರ್ಜರಿ ಮತ ಬೇಟೆ

By Yashaswini
|
   Karnataka Elections 2018 : ಸಿದ್ದರಾಮಯ್ಯನವರ ಮೈಸೂರು ಪ್ರವಾಸದ ಮಾಹಿತಿಗಳು | Oneindia Kannada

   ಮೈಸೂರು, ಮಾರ್ಚ್ 29 : ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮತದಾರನ ಮನಸೆಳೆಯುವಲ್ಲಿ ನಾಯಕರು ಸರ್ಕಸ್ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಬಿಜೆಪಿ ಚಾಣಕ್ಯ ಹಾಗೂ ಕಾಂಗ್ರೆಸ್ ನ ಹಿರಿಯ ಮುತ್ಸದ್ಧಿ ಇಬ್ಬರೂ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

   ಚುನಾವಣೆ ಹಿನ್ನೆಲೆ ಕರುನಾಡು ಜಾಗೃತಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ಹಳೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜೊತೆಗೆ ಇಂದಿನಿಂದ ಐದು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಮೈಸೂರಿನಲ್ಲಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.

   ಬಿಎಸ್‌ವೈ ಬಗ್ಗೆ ಅಮಿತ್ ಷಾ ಹೇಳಿದ್ದು ಸರಿ: ಸಿದ್ದರಾಮಯ್ಯ ವ್ಯಂಗ್

   ಸಿದ್ದರಾಮಯ್ಯ ಅವರ ತವರೂ ಆಗಿರುವುದರಿದ ಮೈಸೂರಿನ ಬಗ್ಗೆ ಅವರು ವಿಶೇಷ ಕಾಳಜಿ ತೋರಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ತವರಿನಲ್ಲಿಯೇ ಕಾಂಗ್ರೆಸ್ ಗೆ ಮುಖಭಂಗ ಮಾಡಲು ಬಿಜೆಪಿ ತವಕಿಸುತ್ತಿದೆ. ಅದರ ಭಾಗವೇ ಅಮಿತ್ ಶಾ ಮೈಸೂರು ಭೇಟಿ!

   ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

   ಅಮಿತ್ ಶಾ ಕಾರ್ಯಕ್ರಮ

   ಅಮಿತ್ ಶಾ ಕಾರ್ಯಕ್ರಮ

   ಮಾ.29 ರಾತ್ರಿ 8.30ಕ್ಕೆ ಮೈಸೂರು ಮಂಡಕಳ್ಳಿ ವಿಮಾನಕ್ಕೆ ಆಗಮಿಸಿ, ನಗರದ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾ.30 ರಂದು ಬೆ.9.20ಕ್ಕೆ ಸುತ್ತೂರು ಶಾಖಾ ಮಠಕ್ಕೆ ಭೇಟಿ, 10.40ಕ್ಕೆ ದಿವಂಗತ ರಾಜು ಮನೆಗೆ ಭೇಟಿ, 11.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ವಿಧಾನಸಭಾ ಕ್ಷೇತಗಳ ನವಶಕ್ತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.20ಕ್ಕೆ ದಲಿತ ನಾಯಕರೊಂದಿಗೆ ಸಂವಾದ, 1.20ಕ್ಕೆ ದಲಿತ ನಾಯಕರೊಂದಿಗೆ ಭೋಜನ, ಮಧ್ಯಾಹ್ನ 2.50ಕ್ಕೆ ಕೊಳ್ಳೆಗಾಲ ತಾಲ್ಲೂಕಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಎರಡು ವಿಧಾನಸಭಾ ಕ್ಷೇತಗಳ ನವಶಕ್ತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.ಸಂಜೆ 4.35ಕ್ಕೆ ಚಾಮರಾಜನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಸ್.ಟಿ.ಸಮಾವೇಶ, ಸಂಜೆ 6.30ಕ್ಕೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ, ರಾತಿ 7.30ಕ್ಕೆ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

   ಮಾಧ್ಯಮಗೋಷ್ಠಿ

   ಮಾಧ್ಯಮಗೋಷ್ಠಿ

   ಮಾ.31ರ ಬೆ.9.30ಕ್ಕೆ ಮಾಧ್ಯಮಗೋಷ್ಠಿ, 10ಕ್ಕೆ ರಾಜೇಂದ್ರ ಕಲಾಮಂದಿರದಲ್ಲಿ ಕರುನಾಡು ಯುವ ಜಾಗೃತಿ ಯಾತೆಯ ಬೈಕ್ ಜಾಥಾದಲ್ಲಿ ಭಾಗಿ, 10.40ಕ್ಕೆ ಶ್ರೀರಂಗಪಟ್ಟಣದ ಚೆನ್ನೇನಹಳ್ಳಿಯಲ್ಲಿ ಆತ್ಮಹತ್ಯೆಗೆ ಶರಣಾದ ರೈತ ದಿವಂಗತ ರಾಜೇಂದ್ರಪ್ಪ ಅವರ ಮನೆಗೆ ಭೇಟಿ, ಮುಷ್ಟಿ ಧಾನ್ಯ ಸಂಗ್ರಹ ಅಭಿಯಾನ, ಮಧ್ಯಾಹ್ನ 12.10ಕ್ಕೆ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ, 1.10ಕ್ಕೆ ಮಂಡ್ಯದ ವಿಶ್ವೇಶ್ವರಯ್ಯ ಕೀಡಾಂಗಣದಲ್ಲಿ ಸಾವಯವ ಕೃಷಿಕರು, ಮಹಿಳೆಯರೊಂದಿಗೆಸಂವಾದ ಹಾಗೂ ಭೋಜನ, ಮಧ್ಯಾಹ್ನ 2.45ಕ್ಕೆ ಮಂಡ್ಯದ ಶಶಿಕಿರಣ್ ಕನ್‍ವೆನ್ಷನ್ ಹಾಲ್‍ನಲ್ಲಿ ಐದು ಜಿಲ್ಲೆಗಳ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶದಲ್ಲಿ ಭಾಗಿ, ಸಂಜೆ 4.30ಕ್ಕೆ ಚನ್ನಪಟ್ಟಣದ ಕರಕುಶಲ ಪಾರ್ಕ್ ಗೆ ಭೇಟಿ, 4.55ಕ್ಕೆ ಚನ್ಪಟ್ಟಣದ ರೇಷ್ಮೆ ಬೆಳೆಗಾರರು, ರೇಷ್ಮೆ ಉದ್ದಿಮೆಗಾರರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಪಕಟಣೆಯಲ್ಲಿ ತಿಳಿಸಿದೆ.

   ಮುಖ್ಯಮಂತ್ರಿ 5 ದಿನ ಮೈಸೂರಿನಲ್ಲೇ ಠಿಕಾಣಿ

   ಮುಖ್ಯಮಂತ್ರಿ 5 ದಿನ ಮೈಸೂರಿನಲ್ಲೇ ಠಿಕಾಣಿ

   ಇತ್ತೀಚೆಗೆ ಸಿ. ಫೋರ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಸಂತಸದಲ್ಲಿರುವ ಸಿಎಂ ಸಿದ್ದರಾಮಯ್ಯ ಐದು ದಿನಗಳ ಕಾಲ ತವರು ಜಿಲ್ಲೆ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

   ಇಂದು ಮೈಸೂರಿಗೆ ಸಿದ್ದರಾಮಯ್ಯ ಆಗಮಿಸಲಿದ್ದು, 5 ದಿನಗಳವರೆಗೆ ಮೈಸೂರಿನಲ್ಲಿ ಠಿಕಾಣಿ ಹೂಡಲಿದ್ದಾರೆ ತವರು ರಾಜಕಾರಣಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ, ಚುನಾವಣಾ ದಿನಾಂಕ ಘೋಷಣೆ ಬಳಿಕ ತವರಿತ್ತ ಮುಖ ಮಾಡಿದ್ದಾರೆ.

   ಚಾಮುಂಡೇಶ್ವರಿ, ವರುಣದಲ್ಲಿ ಮತಬೇಟೆ

   ಚಾಮುಂಡೇಶ್ವರಿ, ವರುಣದಲ್ಲಿ ಮತಬೇಟೆ

   ಚಾಮುಂಡೇಶ್ವರಿ ಹಾಗೂ ವರುಣ ಕ್ಷೇತ್ರದಲ್ಲಿ ಮತಬೇಟೆಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ಲಾನ್ ನಡೆಸಿದ್ದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ನಾಳೆ ಮಿಂಚಿನ ಸಂಚಲನ ನಡೆಸಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಂಚ್ಯಾ, ಕಾಳಿಸಿದ್ದನಹುಂಡಿ, ಉದ್ಬೂರಿನಲ್ಲಿ ಸಿಎಂ ಸಂಚಾರ ಮಾಡಲಿದ್ದು, ರಾಜಕೀಯ ತಂತ್ರ ಹೆಣೆಯಲಿದ್ದಾರೆ. ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರ್ಕಾರಿ ಕೆಲಸ ಬಿಟ್ಟು ಸಿಎಂ ಸಂಘಟನೆಗೆ ಮುಂದಾಗಿದ್ದು, ಇಂದಿನಿಂದ ತವರಿನ 11 ಕ್ಷೇತ್ರಗಳಲ್ಲಿ ಮತಬೇಟೆ ನಡೆಸಲಿದ್ದಾರೆ

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Countdown already begins for Karnataka assembly elections 2018. Karnataka chief minister Siddaramaiah and BJP national president Amit Shah will visit Mysuru as a part of their 5 and 2 days visit respectively.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more