ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀವೂ ಲೋಗೋ ಕಳಿಸಿ!
ಸಾಂಸ್ಕೃತಿಕ ರಾಜಧಾನಿಯಲ್ಲಿ 27 ವರ್ಷಗಳ ನಂತರ ನಡೆಯತ್ತಿರುವ 83 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನಕ್ಕೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅರ್ಜಿ ಆಹ್ವಾನಿಸಿದೆ.
ಮೈಸೂರು, ಮೇ 3 : ಸಾಂಸ್ಕೃತಿಕ ರಾಜಧಾನಿಯಲ್ಲಿ 27 ವರ್ಷಗಳ ನಂತರ ನಡೆಯತ್ತಿರುವ 83 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರಿನ ಪರಂಪರೆ, ಸಾಹಿತ್ಯ ಕಲೆಗಳನ್ನು ಪ್ರತಿಬಿಂಬಿಸುವ ಲಾಂಛನಕ್ಕೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅರ್ಜಿ ಆಹ್ವಾನಿಸಿದೆ.
ಮೇ.10ರಂದು ಲಾಂಛನ ಕಳುಹಿಸಲು ಕೊನೆಯ ದಿನವಾಗಿದ್ದು, ಈ ಮೇಲ್ ಗೆ [email protected] ಹಾಗೂ ಒಂದು ಪ್ರತಿಯನ್ನು ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿಯ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರ, ಮೈಸೂರು ಇಲ್ಲಿಗೆ ಕಳುಹಿಸುವಂತೆ ತಿಳಿಸಲಾಗಿದೆ.[ಜೂನ್ ನಲ್ಲಿ ಅರಮನೆ ನಗರಿ ಮೈಸೂರಿನಲ್ಲಿ ಸಾಹಿತ್ಯ ಜಾತ್ರೆ]

ಹೆಚ್ಚಿನ ಮಾಹಿತಿಗಾಗಿ 8892580150 ಅಥವಾ 9480216657 ಮೊಬೈಲ್ ನಂಬರ್‌ಗೆ ಸಂಪರ್ಕಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ. ಉತ್ತಮ ಲಾಂಛನಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತಿದೆ.
ತಾಯಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣಕ್ಕೆ ಮನವಿ
ಮೈಸೂರಿನಲ್ಲಿ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ವರ್ಷ ನಡೆಯಬೇಕೆಂದು ಸರ್ಕಾರ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದ್ದು, ಇದು ಮೈಸೂರಿನ ಜನತೆಗೆ ಒಂದು ಹಬ್ಬದ ದಿನವಾಗಿದೆ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅರವಿಂದ ಶರ್ಮಾ ತಿಳಿಸಿದ್ದಾರೆ. ಈ ದಿನವನ್ನು ಕನ್ನಡಿಗರೆಲ್ಲ ಬಹಳ ಸಂಭ್ರಮದಿಂದ ಸಾಂಸ್ಕೃತಿಕ ನಗರಿಯಲ್ಲಿ ಕನ್ನಡದ ಹಬ್ಬವನ್ನು ಆಚರಿಸಲು ಉತ್ಸುಕರಾಗಿದ್ದಾರೆ.
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ನೀಡಲು ಮೈಸೂರಿನಲ್ಲಿ ಒಂದು ವೃತ್ತ ಗುರುತಿಸಿ ( ವಿದ್ಯಾಪೀಠ ವೃತ್ತ) ತಾಯಿ ಭುವನೇಶ್ವರಿಯ ಶಾಶ್ವತ ಬೃಹತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆದ ನೆನಪನ್ನು ಕನ್ನಡಿಗರಿಗೆ ಉಳಿಸಲು ಕರ್ನಾಟಕ ಸರ್ಕಾರಕ್ಕೆ ಮತ್ತು ಮೈಸೂರು ಮಹಾನಗರ ಪಾಲಿಕೆಗೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡಲಾಗುವುದು ಎಂದಿದ್ದಾರೆ.












Click it and Unblock the Notifications