ಸಿದ್ದರಾಮಯ್ಯ ಸಿಎಂ ಆಗಿ ನಾಲ್ಕು ವರ್ಷ, ಅಭಿಮಾನಿಗಳಿಂದ ಸೀರೆ ವಿತರಣೆ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿ ನಾಲ್ಕು ವರ್ಷ ಪೂರೈಸಿದ ನೆನಪಿಗಾಗಿ ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಶನಿವಾರ ರಸ್ತೆ ಬದಿ ವ್ಯಾಪಾರ ಮಾಡುವ ಮಹಿಳೆಯರಿಗೆ ಮೈಸೂರಿನಲ್ಲಿ ಸೀರೆ ವಿತರಿಸಲಾಗಿದೆ

ಮೈಸೂರು, ಏಪ್ರಿಲ್ 30: ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ರಸ್ತೆ ಬದಿ ವ್ಯಾಪಾರಿ ಮಹಿಳೆಯರಿಗೆ ಸೀರೆ ಹಾಗೂ ಸಿಹಿ ವಿತರಿಸಲಾಯಿತು. ಇದ್ಯಾವ ಸಂಭ್ರಮಕ್ಕೆ ಅಂತ ನೀವು ಯೋಚಿಸುತ್ತಿದ್ದರೆ, ಏಪ್ರಿಲ್ 29 ಸಿದ್ದರಾಮಣ್ಣನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಿ ನಾಲ್ಕು ವರ್ಷ ಪೂರೈಸಿದ ಖುಷಿಯನ್ನು ಹೀಗೆ ಆಚರಿಸಿದ್ದಾರೆ. ಆ ಸವಿನೆನಪಿಗೋಸ್ಕರ ಅವರ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್ ಉಚಿತವಾಗಿ ಸೀರೆಯನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ನಾಲ್ಕು ವರ್ಷವನ್ನು ಪೂರ್ಣಗೊಳಿಸಿ ಐದನೇ ವರ್ಷಕ್ಕೆ ಕಾಲಿರಿಸಿದೆ.[ಏಪ್ರಿಲ್ 27ರಿಂದ ಸಿದ್ದರಾಮಯ್ಯ ದುಬೈ, ಯುಎಇ ಪ್ರವಾಸ]

Saree distribution

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸತತ ನಾಲ್ಕು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿ ಎಂದು ಶುಭ ಹಾರೈಸಿದರು. ಸಿದ್ದರಾಮಯ್ಯನವರು ಈ ಕಾರ್ಯಕ್ರಮದಲ್ಲಿ ಇರಲಿಲ್ವೇ ಅಂತೀರಾ? ಅಯ್ಯೋ ಅವರು ದುಬೈ ಪ್ರವಾಸದಲ್ಲಿದ್ದಾರೆ. ಅಲ್ಲಿ ಖುಷಿ ಪಟ್ಟು, ಸ್ವೀಟು ಹಂಚಿದರೋ ಏನೋ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+