Rally for Rivers: ಕೆ ಆರ್ ಎಸ್ ಹಿನ್ನೀರಿನಲ್ಲಿ ಸದ್ಗುರು ಪೂಜೆ
ಮಂಡ್ಯ, ಸೆಪ್ಟೆಂಬರ್ 8: Rally for rivers ಅಭಿಯಾನದಡಿ ಇಡೀ ದೇಶದಾದ್ಯಂತ ಸುತ್ತುವ ಯೋಜನೆ ಹಾಕಿಕೊಂಡಿರುವ ಸದ್ಗುರು ಜಗ್ಗಿ ವಾಸುದೇವ್ ಇಂದು(ಸೆ.8) ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಸಮೀಪದ ಮೀನಾಕ್ಷಿಪುರದಲ್ಲಿರುವ ಹಿನ್ನೀರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದೇಶಾದ್ಯಂತ ನದಿ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿಯೂ ನಡೆಯುತ್ತಿದೆ . ನಮ್ಮ ದೇಶದ ಜೀವನಾಡಿಗಳೇ ನದಿಗಳು. ನಮ್ಮ ಸಂಸ್ಕೃತಿ ನಾಗರೀಕತೆಗಳು ನದಿಯ ದಡದಲ್ಲಿಯೇRally for rivers ಅಭಿಯಾನದಡಿ ಇಡೀ ದೇಶದಾದ್ಯಂತ ಸುತ್ತುವ ಯೋಜನೆ ಹಾಕಿಕೊಂಡಿರುವ ಸದ್ಗುರು ಜಗ್ಗಿ ವಾಸುದೇವ್ ಇಂದು(ಸೆ.8) ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಸಮೀಪದ ಮೀನಾಕ್ಷಿಪುರದಲ್ಲಿರುವ ಹಿನ್ನೀರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ದೇಶಾದ್ಯಂತ ನದಿ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿಯೂ ನಡೆಯುತ್ತಿದೆ . ನಮ್ಮ ದೇಶದ ಜೀವನಾಡಿಗಳೇ ನದಿಗಳು. ನಮ್ಮ ಸಂಸ್ಕೃತಿ ನಾಗರೀಕತೆಗಳು ನದಿಯ ದಡದಲ್ಲಿಯೇ ರೂಪುಗೊಂಡಿತು ಎಂದು ಇತಿಹಾಸ ತಿಳಿಸುತ್ತದೆ. ಆದರೆ ಇಂದು ದೇಶದ ನದಿಗಳೆಲ್ಲವೂ ನಶಿಸಿ ಹೋಗುವ ಹಂತ ತಲುಪಿದ್ದು, ನದಿಗಳು ಬತ್ತಿ ಕೇವಲ ಮಳೆಗಾಲದಲ್ಲಿ ಮಾತ್ರ ಕಾಣ ಸಿಗುವ ನದಿಗಳಾದರೂ ಅಚ್ಚರಿಯೇನಿಲ್ಲ. ಅದಕ್ಕಾಗಿಯೇ ನದಿ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ. ರೂಪುಗೊಂಡಿತು ಎಂದು ಇತಿಹಾಸ ತಿಳಿಸುತ್ತದೆ. ಆದರೆ ಇಂದು ದೇಶದ ನದಿಗಳೆಲ್ಲವೂ ನಶಿಸಿ ಹೋಗುವ ಹಂತ ತಲುಪಿದ್ದು, ನದಿಗಳು ಬತ್ತಿ ಕೇವಲ ಮಳೆಗಾಲದಲ್ಲಿ ಮಾತ್ರ ಕಾಣ ಸಿಗುವ ನದಿಗಳಾದರೂ ಅಚ್ಚರಿಯೇನಿಲ್ಲ. ಅದಕ್ಕಾಗಿಯೇ ನದಿ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ.
ಮೈಸೂರಿನಲ್ಲಿಯೂ ಕಳೆದ ಕೆಲವು ದಿನಗಳ ಹಿಂದೆ ಹಲವು ಸಂಘ, ಸಂಸ್ಥೆಗಳು ನದಿ ಉಳಿಸಿ ಅಭಿಯಾನ ಹಮ್ಮಿಕೊಂಡಿದ್ದವು. ಶುಕ್ರವಾರ ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ನದಿ ಉಳಿಸಿ ಅಭಿಯಾನ ಕುರಿತಂತೆ ಕಾರ್ಯಕ್ರಮ ಜರುಗಲಿದ್ದು, ಕೊಯಮತ್ತೂರಿನ ಈಶಾ ಫೌಂಡೇಶನ್ನಿನ ಸಂಸ್ಥಾಪಕ, ಮೈಸೂರು ಮೂಲದ ಸದ್ಗುರು ಜಗ್ಗಿ ವಾಸುದೇವ್ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಶಾಸಕ ಪುಟ್ಟಣ್ಣಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸದ್ಗುರು ಜಗ್ಗಿ ವಾಸುದೇವ್ ಸೆಪ್ಟೆಂಬರ್ 3ರಿಂದಲೇ ನದಿ ಉಳಿಸಿ ಅಭಿಯಾನ ಆರಂಭಿಸಿದ್ದು, ಸೆ.8ರಂದು ಮೈಸೂರು ಹಾಗೂ ಸೆ.9ರಂದು ಬೆಂಗಳೂರಿನಲ್ಲಿ ರಾಜ್ಯದ ಜನತೆಯನ್ನು ನದಿ ಉಳಿಸಿ ಅಭಿಯಾನದ ಮೂಲಕ ಜಾಗೃತಗೊಳಿಸಲಿದ್ದಾರೆ. ನಮ್ಮ ನದಿಗಳ ದುಸ್ಥಿತಿಯ ಕುರಿತು ಅರಿವು ಮೂಡಿಸಬೇಕಿದೆ. ಮುಂದಿನ ಪೀಳಿಗೆಗೆ ನಾವು ನೀಡಬೇಕಾಗಿರುವುದು ಸಮೃದ್ಧವಾದ ನದಿ-ನೆಲ ಮಾತ್ರ. ಆದ್ದರಿಂದ ಜನಜಾಗೃತಿ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ. ಇದು ಚಳವಳಿಯಲ್ಲ. ಇದೊಂದು ಅಭಿಯಾನ' ಎಂದು ಅವರು ತಿಳಿಸಿದರು.












Click it and Unblock the Notifications