ಮೈಮುಲ್ ಅವ್ಯವಹಾರ ಆರೋಪ; ಆಯ್ಕೆಪಟ್ಟಿ ಪ್ರಕಟಿಸದಂತೆ ಆಗ್ರಹ
ಮೈಸೂರು, ಆಗಸ್ಟ್ 17: ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿಯನ್ನು ಪ್ರಕಟಿಸದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ಜಾರಿಗೊಳಿಸಿದೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.
ಮೈಸೂರಿನಲ್ಲಿರುವ ಶಾಸಕರ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೈಸೂರು ಹಾಲು ಒಕ್ಕೂಟದ ವಿವಿಧ ಹುದ್ದೆಗಳ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದಂತೆ ಆಗಸ್ಟ್ 13ರಂದು ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ಜಾರಿಗೊಳಿಸಿದೆ. ಮಧ್ಯಂತರ ಆದೇಶದಲ್ಲಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದೆಂದು ಆದೇಶ ನೀಡಲಾಗಿದೆ. ಆದರೆ ಆಗಸ್ಟ್15 ಮತ್ತು 16 ರಂದು ನ್ಯಾಯಾಲಯಕ್ಕೆ ರಜಾ ದಿನವಾದ್ದರಿಂದ ಆದೇಶದ ಪ್ರತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಸದರಿ ನೇಮಕಾತಿ ಪ್ರಕ್ರಿಯೆಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದು" ಎಂದು ಒತ್ತಾಯಿಸಿದರು.

"ನ್ಯಾಯಾಲಯದ ಆದೇಶ ಉಲ್ಲಂಘನೆ"
ಮೈಮುಲ್ ಅಕ್ರಮ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ ನೇಮಕಾತಿ ಕಾನೂನು ಬಾಹಿರ, ಇಲ್ಲಿ ಹಣದ ವ್ಯವಹಾರ ಸ್ವಜನ ಪಕ್ಷಪಾತ ನಡೆದಿರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಇವತ್ತು ನೇಮಕಾತಿ ವಿಚಾರವಾಗಿ ಸಭೆ ಇಟ್ಟುಕೊಂಡಿದ್ದಾರೆ. ಎಂಡಿ, ಜೆ ಆರ್ ಗೆ ನ್ಯಾಯಾಲಯದ ಬಗ್ಗೆ ಗೌರವ ಇದ್ದರೆ, ನ್ಯಾಯಾಲಯದ ಆದೇಶದಂತೆ ನೇಮಕಾತಿ ಪ್ರಕ್ರಿಯೆ ತಡೆಯಬೇಕಿತ್ತು. ಇವರು ಯಾವ ಉದ್ದೇಶದಿಂದ ಸಭೆ ಕರೆದಿದ್ದಾರೆ ತಿಳಿಯುತ್ತಿಲ್ಲ. ಯಾರಿಗೂ ಅನ್ಯಾಯವಾಗಬಾರದೆಂದು ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

ಬೆಂಗಳೂರು ಗಲಭೆ ಬಗ್ಗೆ ಸಾರಾ ಮಹೇಶ್ ಪ್ರತಿಕ್ರಿಯೆ
ಬೆಂಗಳೂರು ಗಲಭೆ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ ಶಾಸಕರು, ಮಂತ್ರಿಗಳು, ಎಲ್ಲರ ಜೀವನ ಕಾಯೋ ಕೆಲಸ ಸರ್ಕಾರದ್ದು. ಕೊರೊನಾ ಬಂದ ಮೇಲೆ ಗೃಹ ಇಲಾಖೆ ಮಲಗಿದೆ ಅನ್ನಿಸುತ್ತಿದೆ. ಘಟನೆ ಆಗಬಾರದಿತ್ತು, ಆಗಿದೆ. ಇಂಟೆಲಿಜೆನ್ಸ್ ಏನು ಮಾಡುತ್ತಿದೆ. ಮನೆಗೆ, ಠಾಣೆಗೆ ನುಗ್ಗಿ ಹಲ್ಲೆ ಮಾಡುತ್ತಿದ್ದರೆಂದರೆ ಇಂಟೆಲಿಜೆನ್ಸ ಫೇಲ್ ಆಗಿದೆ. ಇದು ತಲೆ ತಗ್ಗಿಸುವ ವಿಚಾರ ಎಂದು ವಾಗ್ದಾಳಿ ನಡೆಸಿದರು.

"ಎಚ್ ವಿಶ್ವನಾಥ್ ಬಗ್ಗೆ ಮಾತನಾಡಲ್ಲ"
ಹುಣಸೂರು ಶಾಸಕ ಮಂಜುನಾಥ್ ಮೇಲೆ ಹಲ್ಲೆಗೆ ಸಂಚು ಪ್ರಕರಣಕ್ಕೆ ಪ್ರತಿಕ್ರಿಯಿಸಿ, ನಾನು ಭಿಕ್ಷುಕನ ವಿಚಾರ ಮಾತನಾಡುವುದಿಲ್ಲ ಎನ್ನುವ ಮೂಲಕ ಎಚ್.ವಿಶ್ವನಾಥ್ ಅವರಿಗೆ ಟಾಂಗ್ ನೀಡಿದರು. ವಿಶ್ವನಾಥ್ ನನ್ನನ್ನು ಕೊಚ್ಚೆ ಎಂದಿದ್ದಾರೆ. ನಾನು ಅವರನ್ನು ಭಿಕ್ಷುಕ ಎಂದಿದ್ದೇನೆ. ಕೊಚ್ಚೆ ಭಿಕ್ಷುಕನ ಬಗ್ಗೆ ಮಾತನಾಡುವುದಿಲ್ಲ. ನಾನು ಬೇರೆ ರಾಜಕಾರಣಿ ಬಗ್ಗೆ ಮಾತನಾಡುತ್ತೇನೆ. ನಾನು ಅವರ ಬಗ್ಗೆ ಮಾತನಾಡಬಾರದೆಂದು ನಿರ್ಧಾರ ಮಾಡಿದ್ದೇನೆ ಎಂದರು.

"ಹಿರಿಯರಾಗಿ ಬುದ್ಧಿ ಹೇಳಬೇಕಿತ್ತು"
ಮಂಜು ಒಬ್ಬ ಮೈನಾರಿಟಿ ನಾಯಕ. ಹಿರಿಯರಾಗಿ ವಿಶ್ವನಾಥ್ ಮಗನಿಗೆ ಬುದ್ಧಿ ಹೇಳಬೇಕಿತ್ತು. ನನ್ನ ಮಗ ತಪ್ಪು ಮಾಡಿದ್ರೆ ನಾನು ಕರೆದು ಬುದ್ಧಿ ಹೇಳೋದು ನನ್ನ ಜವಾಬ್ದಾರಿ. ಅದನ್ನು ಬಿಟ್ಟು ನನ್ನ ಮಂತ್ರಿ ಸ್ಥಾನ ತಪ್ಪಿಸಲು ಈ ರೀತಿ ಮಾಡ್ತಾರೆ ಅನ್ನೋದು ತಪ್ಪು ಎಂದರು.












Click it and Unblock the Notifications