ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆ ಹಿನ್ನೆಲೆ:ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸರು

|
Google Oneindia Kannada News

ಮೈಸೂರು, ಮಾರ್ಚ್ 14: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕರೆದು ತೀವ್ರ ವಿಚಾರಣೆ ನಡೆಸಿ ಪೊಲೀಸರು ಖಡಕ್ಕಾಗಿ ಎಚ್ಚರಿಕೆ ನೀಡಿದರು.

ನಗರದ ವಿವಿಧ ಠಾಣೆಗಳಲ್ಲಿ ರೌಡಿ ಶೀಟರ್ ಗಳ ಹೆಸರಿರುವ ರೌಡಿಗಳನ್ನು ಕರೆದು, ಸಿಸಿಬಿ ಘಟಕದಲ್ಲಿ ತೀವ್ರ ವಿಚಾರಣೆಗೊಳಪಡಿಸಿ, ಅವರ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಅವರ ವಿಳಾಸದ ಸರಹದ್ದಿನ ಪೊಲೀಸ್ ಠಾಣೆಗಳಿಗೆ ಕಳುಹಿಸಿ ಭದ್ರತಾ ಪ್ರಕರಣಗಳನ್ನು ದಾಖಲಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ:ಚೆಕ್ ಪೋಸ್ಟ್ ಗಳಲ್ಲಿ ಜರ್ಮನ್ ಮಾದರಿಯ ಟೆಂಟ್ ಅಳವಡಿಕೆಚುನಾವಣಾ ನೀತಿ ಸಂಹಿತೆ:ಚೆಕ್ ಪೋಸ್ಟ್ ಗಳಲ್ಲಿ ಜರ್ಮನ್ ಮಾದರಿಯ ಟೆಂಟ್ ಅಳವಡಿಕೆ

ವಿವಿಧ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟರ್ ಎಂದು ಹೆಸರು ಮಾಡಿರುವ ಮತ್ತು ತೀವ್ರ ನಿಗಾ ಇಡಬೇಕಾದ ಚಟುವಟಿಕೆಯಲ್ಲಿರುವ ಸುಮಾರು 31 ರೌಡಿಗಳನ್ನು ವಶಕ್ಕೆ ಪಡೆದು ಸಿಸಿಬಿ ಘಟಕದಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಯಿತು.

31 rowdies parade in Mysuru for lok sabha election

ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ, ಇವರ ವಿರುದ್ಧ ಭದ್ರತಾ ಪ್ರಕರಣಗಳನ್ನು ದಾಖಲಿಸಲಾಯಿತು. ಪದೇಪದೇ ಎಚ್ಚರಿಕೆ ನೀಡಿದ್ದರೂ ಅಪರಾಧ ಕೃತ್ಯಗಳಿಂದ ದೂರವಿರದ ವಿವಿಧ ಠಾಣಾ ವ್ಯಾಪ್ತಿಯ 14 ಮಂದಿ ರೌಡಿ ಶೀಟರ್ ಗಳನ್ನು 110 ಕಲಂ ಅಡಿಯಲ್ಲಿ ಬಂಧನಕ್ಕೂ ಆದೇಶಿಸಲಾಗಿದೆ ಎಂದು ತಿಳಿಸಿದರು.

 ಬಿಜೆಪಿ ಬಾವುಟ ತೆಗೆಯಲು ವಿರೋಧ: ಮೈಸೂರಿನಲ್ಲಿ ಚುನಾವಣಾಧಿಕಾರಿ ಜೊತೆ ವಾಕ್ಸಮರ ಬಿಜೆಪಿ ಬಾವುಟ ತೆಗೆಯಲು ವಿರೋಧ: ಮೈಸೂರಿನಲ್ಲಿ ಚುನಾವಣಾಧಿಕಾರಿ ಜೊತೆ ವಾಕ್ಸಮರ

ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಬೆದರಿಕೆ ಒಡ್ಡುವುದು, ಪಕ್ಷಗಳ ಪರವಾಗಿ ಮತ ಕೇಳುವುದು ಸೇರಿದಂತೆ ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿ, ರೌಡಿಗಳ ವಿಳಾಸ ಪಡೆದು ವಾಪಸ್ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.

English summary
Following the Lok Sabha polls, Mysuru police called on persons involved in rowdy activities and warned.Total 31 rowdies were detained and severely questioned at the CCB unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X