Get Updates
Get notified of breaking news, exclusive insights, and must-see stories!

ಮೈಸೂರು ವಿವಿಗೆ ಕುಲಪತಿ ನೇಮಕ ವಿಳಂಬ: ಸಂಕಷ್ಟದಲ್ಲಿ ಪಿಂಚಣಿದಾರರು, ವಿದ್ಯಾರ್ಥಿಗಳು

ಮೈಸೂರು, ಜುಲೈ 04: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ನೇಮಕಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ನಿವೃತ್ತ ನೌಕಕರಿಗೆ ಪಿಂಚಣಿ ಬಾರದೆ ತೊಂದರೆ ಉಂಟಾಗಿದೆ. ಇತ್ತ ಕುಲಪತಿಗಳ ಸಹಿ ಇಲ್ಲದೆ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಕೂಡ ವಿಳಂಬವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬೋಧಕ ಹಾಗೂ ಬೋಧಕೇತರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದವರಿಗೆ ಜೂನ್ ತಿಂಗಳ ಪಿಂಚಣಿ ಕೈ ಸೇರಿಲ್ಲ. ಕುಲಪತಿಗಳ ಸಹಿ ಇಲ್ಲದೆ ಪಿಂಚಣಿ ಖಾತೆ ಜಮೆ ಆಗುವುದಿಲ್ಲ. ಎಷ್ಟೋ ಮಂದಿ ಈ ಪಿಂಚಣಿ ನಂಬಿಯೇ ಬದುಕು ಸಾಗಿಸುತ್ತಿದ್ದಾರೆ. ಮಾತ್ರೆಯಿಂದ ಹಿಡಿದು ಜೀವನ ನಿರ್ವಹಣೆಗೆ ಇದೇ ಪಿಂಚಣಿಯನ್ನು ನಂಬಿ ಕೂತಿದ್ದಾರೆ. ಆದರೆ, ಪ್ರಭಾರ ಕುಲಪತಿ ನೇಮಕವಾಗದೆ ಪಿಂಚಣಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Retired Employees Of Mysuru University Protest

ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1,015 ಮಂದಿ ನಿವೃತ್ತ ನೌಕರರಿದ್ದು, ಜೂ.30ಕ್ಕೆ ಬ್ಯಾಂಕ್‌ ಖಾತೆಗೆ ವೇತನ ಸೇರುತ್ತಿತ್ತು. ಆದರೆ, ಈಗ ಅವರಿಗೂ ಪಿಂಚಣಿ ಮೊತ್ತ ಹಾಕದ ಕಾರಣ ಬ್ಯಾಂಕ್‌ಗೆ ಬಂದು ವಿಚಾರಿಸಿಕೊಂಡು ನಿರಾಶೆಯಿಂದ ಹಿಂತಿರುಗುವಂತಹ ಪರಿಸ್ಥಿತಿ ಬಂದಿದೆ. ಇದಲ್ಲದೆ, ವಿದ್ಯಾರ್ಥಿಗಳ ಫೆಲೋಷಿಪ್ ವಿತರಣೆಗೂ ತೊಂದರೆಯಾಗಿದೆ.

ಏನಿದು ಪ್ರಕರಣ?

ಬಿಜೆಪಿ ಸರ್ಕಾರ ಈ ಹಿಂದೆ ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಆಗಿ ಪ್ರೊ.ಎನ್.ಕೆ. ಲೋಕನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶೋಧನಾ ಸಮಿತಿ ಆಯ್ಕೆ ಮಾಡಿದ್ದವರಲ್ಲಿ ಒಬ್ಬರಾದ ಪ್ರೊ. ಶರತ್ ಅನಂತಮೂರ್ತಿ ಕೋರ್ಟ್ ಮೊರೆ ಹೋಗಿದ್ದರು. ಲೋಕನಾಥ್ ವಿರುದ್ಧ ಸಾಕಷ್ಟು ಆರೋಪ, ತಾಂತ್ರಿಕ ಸಮಸ್ಯೆ ಇದೆ. ಆದರೂ ಸರಕಾರ ಇವರನ್ನು ಆಯ್ಕೆ ಮಾಡಿದೆ ಎಂದು ವಾದಿಸಿದ್ದರು. ನಂತರ ಹೈಕೋರ್ಟ್ ಲೋಕನಾಥ್ ಅವರ ನೇಮಕಾತಿಗೆ ತಡೆ ನೀಡಿತ್ತು.

Retired Employees Of Mysuru University Protest

ಹೈಕೋರ್ಟ್ ಲೋಕನಾಥ್ ಅವರ ನೇಮಕಾತಿಗೆ ತಡೆಯಾಜ್ಞೆ ನೀಡಿ ಇದೀಗ ಎರಡು ವಾರ ಕಳೆದಿದೆ. ಆದರೂ ಪ್ರಭಾರ ಕುಲಪತಿ ನೇಮಕವಾಗಿಲ್ಲ. ಸಾಮಾನ್ಯವಾಗಿ ಈ ರೀತಿ ಕುಲಪತಿ ಹುದ್ದೆಗೆ ತಡೆ ಬಂದಾಗ ರಾಜ್ಯಪಾಲರು ಹಿರಿಯ ಡೀನ್ ಅನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಪ್ರಭಾರ ಕುಲಪತಿ ಹುದ್ದೆಗೆ ನೇಮಕ ಮಾಡಬೇಕು. ಆದರೆ, ರಾಜ್ಯಪಾಲರ ಭವನದಿಂದ ಯಾವುದೇ ಆದೇಶ ಇದುವರೆಗೂ ಬಂದಿಲ್ಲ. ಹಾಗಾಗಿ 14 ದಿನದಿಂದ ಕುಲಪತಿ ಕುರ್ಚಿ ಖಾಲಿ ಉಳಿದಿದ್ದು, ಯಾವುದೇ ಆಡಳಿತ ಕೆಲಸ ಆಗುತ್ತಿಲ್ಲ.

ಹಂಗಾಮಿ ಕುಲಪತಿ ಸ್ಥಾನಕ್ಕೆ ಸೀನಿಯರ್ ಡೀನ್ ಪ್ರೊ.ಮುಜಾಫರ್ ಅಸಾದಿ ಅವರನ್ನು ನೇಮಿಸಬೇಕಿತ್ತು. ಆದರೆ, ರಾಜಭವನದಿಂದ ಯಾವುದೇ ಆದೇಶ ಹೊರಡಲಿಲ್ಲ. ಹೀಗಾಗಿ, ಜೂನ್ 30ರಂದು ಅವರ ಡೀನ್ ಅವಧಿ ಮುಗಿದು ಅವಕಾಶ ಕೈತಪ್ಪಿ ಹೋಯಿತು. ಇದೀಗ ವಿಜ್ಞಾನ ತಂತ್ರಜ್ಞಾನ ನಿಕಾಯದ ಡೀನ್ ಪ್ರೊ.ಎಚ್.ಟಿ.ಬಸವರಾಜಪ್ಪ ಅವರನ್ನು ನೇಮಕ ಮಾಡಬಹುದೆಂದು ಸೋಮವಾರ ಸಂಜೆಯ ತನಕವೂ ನಿರೀಕ್ಷೆ ಇಟ್ಟುಕೊಂಡಿದ್ದರೂ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬೋಧಕ ಹಾಗೂ ಬೋಧಕೇತರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದವರು ಶೀಘ್ರ ಕುಲಪತಿ ನೇಮಕ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+